;

ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಾ.ಯಲ್ಲಾ ರಮೇಶ ಬಾಬು ಅಧಿಕಾರ ಸ್ವೀಕಾರ…!!!

ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಾ.ಯಲ್ಲಾ ರಮೇಶ ಬಾಬು ಅಧಿಕಾರ ಸ್ವೀಕಾರ
ಬಳ್ಳಾರಿ,:
ಜಿಲ್ಲೆಯ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಾ.ಯಲ್ಲಾ ರಮೇಶ ಬಾಬು ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕ್ಷಯರೋಗ ನಿರ್ಮೂನಾಧಿಕಾರಿ ಹುದ್ದೆಯಲ್ಲಿ 2013 ರಿಂದ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಳ್ಳಾರಿಗೆ ವರ್ಗಾವಣೆಯಾಗಿದ್ದಾರೆ.
1993 ರಲ್ಲಿ ಹರಪನಹಳ್ಳಿ ತಾಲೂಕಿನ ಹಲವಾಗಲು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಸೇರಿದರು. 2000 ರಿಂದ 2005 ರವರೆಗೆ ನಲ್ಲೂಡಿಯಲ್ಲಿ ವೈದ್ಯಾಧಿಕಾರಿಯಾಗಿ 2005 ರಿಂದ 2007 ರವರೆಗೆ ದಾವಣಗೇರೆ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿಯಾಗಿ, 2007 ರಿಂದ 2012 ರವರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದಲ್ಲಿ ಉಪನಿರ್ದೇಶಕರಾಗಿ (ಆರ್‌ಸಿ‌ಹೆಚ್‌, ಸಂಶೋಧನಾ ಅಧಿಕಾರಿ) ಕರ್ತವ್ಯ ನಿರ್ವಹಿಸಿದ್ದಾರೆ‌.
ಈ ಪೂರ್ವದಲ್ಲಿದ್ದ ಡಾ.ಹೆಚ್‌.ಎಲ್‌ ಜನಾರ್ಧನ ರವರು ವರ್ಗಾವಣೆಗೊಂಡಿದ್ದಾರೆ….

ವರದಿ. ವಿರೇಶ್. ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;