ತುಪಕನಳ್ಳಿ:ಕಳೆನಾಶಕ ಸೇವಿಸಿ-ಯುವತಿ ಆತ್ಮಹತ್ಯೆ…!!!

ತುಪಕನಳ್ಳಿ:ಕಳೆನಾಶಕ ಸೇವಿಸಿ-ಯುವತಿ ಆತ್ಮಹತ್ಯೆ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಯುವತಿ ಯೋರ್ವಳು ಕಳೆನಾಶಕ ಸೇವಿಸಿ, ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ. ತಾಲೂಕಿನ ತಿಪಲನಳ್ಳಿ ಗ್ರಾಮದಲ್ಲಿ, ಜರುಗಿರುವುದಾಗಿ ತಿಳಿದಿ ಬಂದಿದೆ. ತುಪಕಳ್ಳಿಯ ತನ್ನ ಮನೆಯಲ್ಲಿ 17ವರ್ಷದ ಯುವತಿ ಯೋರ್ವಳು, ಕಳೆನಾಶಕ ಸೇವಿಸಿ. ಆತ್ಮಹತ್ಯೆಗೀಡಾಗಿರುವ ಘಟನೆ ಆ25ರಂದು ಸಂಜೆ ಜರುಗಿದೆ. ಆತ್ಮ ಹತ್ಯೆಗೀಡಾದ ಯುವತಿ ಅನಿತಾ(17), ಕೂಡ್ಲಿಗಿ ಸ.ಸಂ.ಪ.ಪೂ.ಕಾಲೆಜ್ ನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಆ25ರಂದು ಸಂಜೆಯ ವೇಳೆಯಲ್ಲಿ ಮನೆಯಲ್ಲಿನ ತನ್ನ ಕೋಣೆಯಲ್ಲಿ, ಯಾರಿಗೂ ತಿಳಿಯದಂತೆ ಕಳೆ ನಾಶಕ ಸೇವಿಸಿ ಆತ್ಮಹತ್ಯೆಗೀಡಾಗಿದ್ದಾಳೆಂದು ತಿಳಿದು ಗ್ರಾಮಸ್ಥರಿಂದ ಬಂದಿದೆ. ಅವಳು ಆತ್ಮ ಹತ್ಯೆಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ, ತೀರಾ ತಡವಾಗಿ ಗಮನಿಸಿದ ಯುವತಿಯ ತಾಯಿ, ರೋಧಿಸುತ್ತಿರುವುದನ್ನು ಗಮಮಿಸಿದ ಗ್ರಾಮಸ್ಥರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು, ಚಿಕಿತ್ಸೆಗೆಂದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಕಳೆನಾಶಕ ಸೇವಿಸಿದ್ದ ಯುವತಿ, ಪ್ರಾಣ ತ್ಯಜಿಸಿದ್ದು ಸದರಿ ಪ್ರಕರಣ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend