ಪೋಷಕರ ನಡೆ ಅಂಗನವಾಡಿ ಕಡೆಗೆ ಕರೆ…!!!

ಪೋಷಕರ ನಡೆ ಅಂಗನವಾಡಿ ಕಡೆ

ಅಂಗನವಾಡಿಯಲ್ಲಿ ಮಕ್ಕಳು ಪೋಷಕರೊಂದಿಗೆ ಆತ್ಮೀಯವಾಗಿ ಬರತ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್

ಅಂಗನವಾಡಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಯ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮವು ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದಲ್ಲಿ ಆಗಸ್ಟ್ 25ರಂದು ವಿಶಿಷ್ಟವಾಗಿ ನಡೆಯಿತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಎಂದಿನ ತಮ್ಮ ಕಾರ್ಯಕ್ರಮದ ಮಧ್ಯೆಯು ಮಕ್ಕಳು ಮತ್ತು ಪೋಷಕರೊಂದಿಗೆ ಆತ್ಮೀಯವಾಗಿ ಬೆರೆತು ಅವರಿಗೆ ಪ್ರೋತ್ಸಾಹ ನೀಡಿದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಿಕೆ ಟಾಟಾ ಟ್ರಸ್ಟ್ ಹಾಗೂ ಶಿಶು ಅಭಿವೃದ್ಧಿ ಯೋಜನೆ ಕೊಪ್ಪಳ ಇವರ ಸಂಯುಕ್ತಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ ಜಿಲ್ಲಾಧಿಕಾರಿಗಳಿಗೆ ಅಂಗನವಾಡಿಯ ಬಾಲ ಮಕ್ಕಳು ಅಧಿಕಾರಿಗಳು ಮತ್ತು ಗ್ರಾಮಸ್ಥರು ಸಮ್ಮುಖದಲ್ಲಿ ಹೂಗುಚ್ಛ ನೀಡಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದು

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಒಂದು ಮತ್ತು ಎರಡನೇ ಅಂಗನವಾಡಿ ಕೇಂದ್ರಗಳೊಳಗೆ ತೆರಳಿದೆ ವೇಳೆ ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಕೇಂದ್ರಬಿಂದುಗಳಾಗಿದ್ದ ಪೋಷಕರು ಮತ್ತು ಮುದ್ದು ಮಕ್ಕಳೊಂದಿಗೆ ಮಾತನಾಡುತ್ತಾ ಕೆಲಸ ಮಯ ಕಳೆದರೂ ಅಂಗನವಾಡಿಯ ಬಲ ಮಕ್ಕಳೊಂದಿಗೆ ಕುಳಿತು ಆ ಮಕ್ಕಳು ಓದು ಬರಹ ವಿವಿಧ ಶಾಲಾ ಚಟುವಟಿಕೆಗಳನ್ನ ತನ್ಮಯದಿಂದ ವೀಕ್ಷಿಸಿದರು ಪೋಷಕರ ಕ್ರಿಯಾತ್ಮಕ ಚಟುವಟಿಕೆಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು ಇದೆ ವೇಳೆ ಮಕ್ಕಳೊಂದಿಗೆ ಆಟವಾಡಿ ಅವರಿಗೆ ಸ್ಪೂರ್ತಿ ತುಂಬಿದರು ಕೆಲವು ಮಕ್ಕಳು ಆಟ ಆಡುವುದನ್ನು ಹಾಗೂ ಹಾಡುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸಂತಸ ವ್ಯಕ್ತಪಡಿಸಿದರು.

ಅಂಗನವಾಡಿಯಲ್ಲಿ ಮಕ್ಕಳು ಬೊಂಬೆ ಮನೆಯಲ್ಲಿ ಆಟವಾಡುತ್ತಾ ಮಾಡಿಕೊಟ್ಟ ಚಹವನ್ನು ಜಿಲ್ಲಾಧಿಕಾರಿಗಳು ಸವಿದರು ಪಾಲಕರ ಪಾತ್ರ ಮಹತ್ವದ್ದು ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಶಾಲಾ ಪೂರ್ವ ಶಿಕ್ಷಣ ಹಂತದಲ್ಲಿ ಓದುವ ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ ಶಾಲಾ ಪೂರ್ವ ಶಿಕ್ಷಣ ಪಡೆಯುವ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಬೇಕಾದ ವ್ಯವಸ್ಥೆಯನ್ನು ಅಂಗನವಾಡಿಗಳಲ್ಲಿ ಕಲ್ಪಿಸಲಾಗಿದೆ ಹೀಗಾಗಿ ಪೋಷಕರು ತಮ್ಮ ಮಕ್ಕಳ ಪ್ರತಿದಿನ ಅಂಗನವಾಡಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು ಅಂಗನವಾಡಿಗಳಲ್ಲಿ ಸಿಗುವ ಸಾಮಾನ್ಯ ಜ್ಞಾನದಿಂದಾಗಿ ಮಕ್ಕಳ ಬೌದ್ಧಿಕ ಸಾಮರ್ಥ್ಯವು ವೃದ್ಧಿಯಾಗಲಿದೆ ಎಂದು ತಿಳಿಸಿದರು ಬೊಂಬೆ ಮನೆ ಚಟುವಟಿಕೆ ಮೆಚ್ಚುಗೆ ಇದೆ ವೇಳೆ ಅಂಗನವಾಡಿಯಲ್ಲಿ ಸುಂದರವಾಗಿ ನಿರ್ಮಿಸಿದ್ದ ಬೊಂಬೆ ಮನೆಯ ಕಾರ ಚಟುವಟಿಕೆಗಳ ಬಗ್ಗೆ ಸಹ ಜಿಲ್ಲಾಧಿಕಾರಿಗಳು ಕೇಳಿದರು ಗೊಂಬೆ ಮನೆಯಲ್ಲಿ ಆಹಾರಧಾನ್ಯ ತರಕಾರಿ ಹಣ್ಣು ಸೇರಿದಂತೆ ವಿವಿಧ ಬೊಂಬೆಗಳನ್ನು ಗುರುತಿಸಿ ಮಕ್ಕಳಿಗೆ ಮನರಂಜನೆ ಜೊತೆಗೆ ಅಕ್ಷರ ಜ್ಞಾನ ನೀಡಲಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಿದರು ಕಾರ್ಯಕ್ರಮದ ಬಳಿಕ ಪೋಷಕರು ಮತ್ತು ಮಕ್ಕಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿಗಳು ಮತ್ತು ಸಿಬ್ಬಂದಿಯೋ ಜಿಲ್ಲಾಧಿಕಾರಿಗಳೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡು ಶಾಲಾ ಪೂರ್ವ ಕಾರ್ಯಕ್ರಮದ ಅನುಷ್ಠಾನ ಪಾಲಕರ ಹಾಗೂ ಪೋಷಕರ ಸಹಭಾಗಿತ್ವ ಮತ್ತು ಅಂಗನವಾಡಿ ಸೇವೆಗಳ ಬಗ್ಗೆ ಇದೆ ಬೇಳೆ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಗಂಗಪ್ಪ ಅವರೊಂದಿಗೆ ಚರ್ಚಿಸಿ ಇಲಾಖೆ ಸಿಬ್ಬಂದಿಗೆ ಪ್ರೋತ್ಸಾಹಿಸಿದರು ಸಮಾರಂಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್ ಕಲಿಕಾ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಅಶೋಕ್ ಜಿಲ್ಲಾ ಸಂಯೋಜಕ ಸಿದ್ದಪ್ಪ ಕುರಿ ವಲಯದ ಮೇಲ್ವಿಚಾರಕರಾದ ಪ್ರೀತಿ ಕೋರೆ ಗಾಯತ್ರಿ ಸುಮಂಗಳ ಸಜ್ಜನ್ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಆಶಾ ಕಾರ್ಯಕರ್ತೆಯರು ಇತರ ಸದಸ್ಯರು…

ವರದಿ. ಸಂಗೀತ ಪಾಟೀಲ್ ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend