ಅಲೆದಾಡಿಸದಿರಿ,ಹೃದಯ ವೈಶಾಲ್ಯತೆಯಿಂದ ಕರ್ಥವ್ಯ ನಿರ್ವಹಿಸಿ-ಶಾಸಕ ಡಾ”ಎನ್.ಟಿ.ಶ್ರೀನಿವಾಸ್-ವಿಜಯನಗರ ಜಿಲ್ಲೆ ಕೂಡ್ಲಿಗಿ: ಆ25ರಂದು, ಪಟ್ಟಣದ ತಾಲೂಕು ಆಢಳಿತ ಸೌಧದಲ್ಲಿ, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು. ಉಪ ಖಜಾನಾಧಿಕಾರಿ ಕಚೇರಿಯ, ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಜವಾಬ್ದಾರಿತ ಸ್ಥಾನದಲ್ಲಿರುವ ಅಧಿಕಾರಿಗಳು. ಸಾರ್ವಜನಿಕರನ್ನು ಕೆಲಸಗಳಿಗೆ ಇಲ್ಲಸಲ್ಲದ ನೆಪ ಹೇಳಿ, ಕಚೇರಿಗೆ ವಿನಾಕಾರಣ ಅಲೆದಾಡಿಸಬಾರದು. ಅದನ್ನು ಯಾರೇ ಮಾಡಿದರೂ ನಾನು ಸಹಿಸುವುದಿಲ್ಲ, ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ತಾವು ಸರ್ಕಾರಿ ಸಂಬಳ ಪಡೆದು ಕರ್ಥವ್ಯ ನಿರ್ವಹಿಸುತ್ತಿರುವುದನ್ನು ಅರಿತು ಕೊಳ್ಳಬೇಕು, ಕರ್ಥವ್ಯ ಪ್ರಜ್ಞೆ ಹಾಗೂ ಹೃದಯ ವೈಶಾಲ್ಯತೆಯಿಂದ ಕೆಲಸ ಮಾಡಬೇಕಿದೆ ಎಂದು ಶಾಸಕರು ಸೂಚಿಸಿದರು. ತಹಶಿಲ್ದಾರರಾದ ಟಿ.ಜಗಧೀಶ,ಉಪಖಜಾನಾಧಿಕಾರಿ ಹಾಗೂ ಸಿಬ್ಬಂದಿಯವರು ಹಾಜರಿದ್ದರು. ವಿವಿದ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ನಾಗರೀಕರು ಉಪಸ್ಥಿತರಿದ್ದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
