ಕೂಡ್ಲಿಗಿ:ಸಡಗರದ ನಾಗಪಂಚಮಿ ಹಬ್ಬ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ, ಸಡಗರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಿಸಲಾಯಿತು. ಸಂಪ್ರದಾಯದಂತೆ ಮಡಿ ಮುಡಿಯಿಂದ, ಧಾರ್ಮಿಕ ಚಟುವಟಿಕೆಗಳ ಮೂಲಕ ಹಬ್ಬ ಆಚರಿಸಲಾಯಿತು. ಜೋಕಾಲಿ ಆಟ, ನಿಂಬೆ ಹಣ್ಣು ಎಸೆತ, ಕೊಬ್ಬರಿ ಬಟ್ಟಲ ತಿರುಗಿಸುವುದು, ತೆಂಗಿನ ಕಾಯಿ ಗುದ್ದಿ ಹೊಡೆಯೋದು, ಉಂಡೆಗಳನ್ನು ಗುದ್ದಿ ಹೊಡೆಯೋದು, ಕಣ್ಣು ಕಟ್ಟಿ ನಡೆಯೋದು, ಇನ್ನೂ ಅನೇಕ ಗ್ರಾಮೀಣ ಕ್ರೀಡೆಗಳನ್ನು ಆಡಲಾಗುತ್ತದೆ. ನಾನಾ ಬಗೆಯ ಉಂಡೆಗಳನ್ನು, ಗಾರಿಗೆ ಸೇರಿದಂತೆ ವಿವಿದ ಬಗೆಯ ಸಿಹಿ ಖಾದ್ಯಗಳನ್ನು, ದೆೇವರಿಗೆ ಎಡೆ ಮಾಡಲಾಗುತ್ತದೆ. ನಾಗ ದೇವತೆಗೆ ಹಾಲೆರೆದನಂತರದಲ್ಲಿ, ನಾಗದೇವತೆಯ ಮೇಲಿರಿಸಿದ ದಾರವನ್ನು ಪರಸ್ಪರ ಕಟ್ಟಿಕೊಳ್ಳಲಾಗುತ್ತದೆ. ಇದು ನಾಹದೇವತೆಯ ರಕ್ಷಾದಾರವಾಗಿರುತ್ತದೆ, ಇದನ್ನು ಮನೆಯ ಮಂದಿಯಲ್ಲಾ ಪರಸ್ಪರ ಕಟ್ಟಿಕೊಂಡು ಶುಭ ಆರೈಸಲಾಗುತ್ತದೆ. ಕೆಲವೆಡೆಗಳಲ್ಲಿ ಚೌತಿಯಂದು ಹಾಲೆರೆದು ಹಬ್ಬ ಆಚರಿಸಲಾಗುತ್ತದೆ, ಇನ್ನು ಕೆಲವೆಡೆಗಳಲ್ಲಿ ಪಂಚಮಿಯಂದು ಹಬ್ಬ ಆಚರಿಸಲಾಗುತ್ತದೆ.ಮೊದಲನೆಯ ದಿನದಲ್ಲಿ ರೊಟ್ಟಿ ಹಬ್ಬ, ನಂತರದ ದಿನದಲ್ಲಿ ನಾಗ ದೇವತೆಗೆ ಹಾಲೆರೆದು ಹಬ್ಬ ಆಚರಿಸಲಾಗುತ್ತದೆ. ಮಕ್ಕಳು ಮಹಿಳೆಯರು ಯುವಕರು ವೃದ್ಧರಾದಿಯಾಗಿ, ನಾಗದೇವರ ಮೂರ್ತಿಗೆ ಸಂಪ್ರದಾಯದಂತೆ ಹಾಲೆರೆದು ವಿವಿದ ಸಿಹಿಖಾದ್ಯ ಸವಿದು ಹಬ್ಬ ಆಚರಿಸಿದರು. ನಾಗರ ಪಂಚಮಿ ಎಂದು ಪ್ರಖ್ಯಾತಿ ಹೊಂದಿರುವ ಹಬ್ಬ, ಹಲವೆಡೆಗಳಲ್ಲಿ ಶ್ರಾವಣ ಮಾಸದ ವಿವಿದ ಸೋಮವಾರಗಳಲ್ಲಿ ಆಚರಿಸಲಗುತ್ತದೆ. ಕೆಲವೆಡೆ ಚೌತಿ, ಪಂಚಮಿ, ಎರೆಡನೇ ಸೋಮವಾರ, ಮೂರನೇ ಸೋಮವಾರ ಕಡೇ ಸೋಮವಾರ. ಅಂದರೆ ಶ್ರಾವಣ ಮಾಸದ ಸೋಮವಾರಗಳಲ್ಲಿ, ಸ್ಥಳೀಯರೆಲ್ಲರೂ ನಿರ್ಣಯಿಸಿದ ಕಾಲಾನುಕ್ರಮದಂತೆ. ಆಯಾ ಸೋಮವಾರಗಳಲ್ಲಿ, ವಿವಿದೆಡೆಗಳಲ್ಲಿ ನಾಗದೇವತೆ ಆರಾಧನೆ ಜರುಗುತ್ತದೆ. ಕೆಲವರು ಹಬ್ಬ ಆಚರಿಸುವುದೇ ಇಲ್ಲ, ಇನ್ನೂ ವಿಶೇಷ ಅಂದರೆ ಹಬ್ಬದ ದಿನ ಸ್ನಾನಕೂಡ ಮಾಡೋದಿಲ್ಲ. ಅದು ಅವರ ಮನೆತನೆದಿಂದ ನಡೆದು ಕೊಂಡು ಬಂದಿರುವ, ಸಂಪ್ರದಾಯಿಕ ಕಟ್ಟುಪಾಡಾಗಿರುತ್ತದೆ. ಪಾರಂಪಾರಿಕ ನೀತಿ ನಿಯಮಗಳನ್ನು ಧಾರ್ಮಿಕ ಶ್ರದ್ದಾಳುಗಳು ಚಾಚು ತಪ್ಪದೇ ಪಾಲಿಸುತ್ತಾರೆ, ಮೀರಿದರೆ ಕೆಡಕು ಎಂಬ ಅಲಿಖಿತ ಶಾಸನ ಜಾರಿಯಾಗಿರುತ್ತದೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
