;

ಗಜಾಪುರ:ಗಂಗೆ ಪಾಪ ನಾಶಿನಿ, ದೇವಸ್ಥಾನ ಸರ್ವರನ್ನು ಒಗ್ಗೂಡಿಸುವ ಧಾರ್ಮಿಕ ಕೇಂದ್ರ_ಉಜ್ಜಿನಿ ಜಗದ್ಗುರುಗಳು….!!!

ಗಜಾಪುರ:ಗಂಗೆ ಪಾಪ ನಾಶಿನಿ, ದೇವಸ್ಥಾನ ಸರ್ವರನ್ನು ಒಗ್ಗೂಡಿಸುವ ಧಾರ್ಮಿಕ ಕೇಂದ್ರ_ಉಜ್ಜಿನಿ ಜಗದ್ಗುರುಗಳು..
ವಿಜಯನಗರ ಜಿಲ್ಲೆ ಕೂಡ್ಲಿಗಿ: ಗಂಗೆ ಪಾಪನಾಶಿನಿ ಯಾಗಿದ್ದಾಳೆ, ದೇವಸ್ಥಾನಗಳು ಸರ್ವರನ್ನು ಒಗ್ಗೂಡಿಸುವ ಧಾರ್ಮಿಕ ಕೇಂದ್ರ ಗಳಾಗಿವೆ ಎಂದು. ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು, ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ತಿಳಿಸಿದರು. ಅವರು ಅಖಂಡ ಕೂಡ್ಲಿಗಿ ಹಾಗೂ ತಾಲೂಕಿನ ಗಜಾಪುರ ಗ್ರಾಮದಲ್ಲಿ, ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ ನಿಂದ ಶುಕ್ರವಾರ ಆಯೋಜಿಸಿದ್ದ. ಗಂಗಾದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ, ಸಾನ್ನಿಧ್ಯ ವಹಿಸಿ ಮಾತನಾಡಿದರು. ಗಂಗೆ ಸಕಲ ಜೀವರಾಶಿಗೂ ಬೇಕಾದವಳು. ಗಂಗೆಯು ಸಕಲ ಪಾಪಗಳನ್ನು ತೊಳೆಯುವಂಥ ಶಕ್ತಿದೇವತೆ. ಅಂಥ ಪವಿತ್ರ ಗಂಗಾದೇವಿ ದೇವಸ್ಥಾನ ನಿರ್ಮಾಣ ಮಾಡಿರುವುದು ಸರ್ವರಿಗೂ ಒಳಿತಾಗಲಿದೆ. ಧಾರ್ಮಿಕ ಚಿಂತನೆ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸುವ ದಿವ್ಯಶಕ್ತಿ. ಅಂಥ ಧಾರ್ಮಿಕ ಚಿಂತನೆ ಹೊಂದುವ ಮೂಲಕ ಉತ್ತಮರಾಗಿ ಎಲ್ಲರೂ ಬಾಳಬೇಕಿದೆ ಎಂದು ತಿಳಿಸಿದರು.
ನೀರು ಅಮೂಲ್ಯ ಜಾಗ್ರತೆ ವಹಿಸಿ-ಶ್ರೀಸಿದ್ಧಲಿಂಗ ಶಿವಾಚಾರ್ಯರು- ಕೊಟ್ಟೂರಿನ ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಗಂಗೆ ಹರಿಯುತ್ತಿದ್ದ ನದಿಗಳ ದಡದಲ್ಲಿ ಊರುಗಳು ನಿರ್ಮಾಣವಾಗುತ್ತಿದ್ದವು. ಜಲಮೂಲಗಳಾಗಿರುವ ಕೆರೆಗಳು ಸ್ವಾರ್ಥಕ್ಕಾಗಿ ಒತ್ತುವರಿಯಾಗಿವೆ. ನೀರು ಅತ್ಯಮೂಲ್ಯವಾಗಿದ್ದು, ಮಹತ್ವ ಅರಿತು ಅದರ ಬಳಕೆಯಾಗಬೇಕು. ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಅವು ನಮ್ಮ ನಂಬಿಕೆಯ ನೆಲೆಗಳು. ಆತ್ಮ ಧ್ವನಿಯನ್ನು ಎಚ್ಚರಿಸುವಂತೆ ಇರುವುದು ದೇವಸ್ಥಾನಗಳ ಮಹತ್ವವಾಗಿದೆ ಎಂದರಲ್ಲದೆ, ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನಲ್ಲಿ ಮಳೆ ಕೊರತೆ ಕಾಡುತ್ತಿದ್ದು, ಬೆಳೆಗಳೆಲ್ಲಾ ಒಣಗುತ್ತಿವೆ. ಕೇವಲ ೫೦ ಕಿ.ಮೀ ದೂರದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಈ ಭಾಗಕ್ಕೆ ನೀರಾವರಿ ಯೋಜನೆಗಳಿಲ್ಲ ಎನ್ನುವುದು ದುರ್ದೈವ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ರೈತರು ಹಾಗೂ ಸಾರ್ವಜನಿಕರು ನೀರಾವರಿ ಯೋಜನೆ ಜಾರಿಗೆ ತರುವಂತೆ ಒತ್ತಡ ಹಾಕಬೇಕಿದೆ.
ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದ ಕ್ರಿಯಾಮೂರ್ತಿ ಶ್ರೀ ಶಂಕರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಸ್ವಾಮೀಜಿ, ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು, ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ ಗೌರವಾಧ್ಯಕ್ಷ ಬಾರಿಕರ ಭೀಮಪ್ಪ ಸೇರಿ ಇತರರು ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಬಾರಿಕರ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಗಾಳೆಪ್ಪನವರ ಭೀಮಪ್ಪ, ಗಂಗಾಮತ ಸಂಘದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ, ಕೊಟ್ಟೂರು ಅಧ್ಯಕ್ಷ ಗೋಣಿಬಸಪ್ಪ, ಕೂಡ್ಲಿಗಿಯ ಹುಲಿರಾಜಪ್ಪ ಗುಡೇಕೋಟೆ, ಮುಖಂಡರಾದ ಬೆಳದೇರಿ ಮಲ್ಲಿಕಾರ್ಜುನ, ಗುಡೇಕೋಟೆ ಬೇಕರಿ ಸುರೇಶ್,ಕುಬೇರಪ್ಪ, ಶ್ರೀನಿವಾಸ, ಯಮನೂರಪ್ಪ, ಅಂಗಡಿ ವೀರಪ್ಪ, ತಳವಾರ ಶಿವರಾಜ, ತುಪ್ಪಾಕನಹಳ್ಳಿ ರಮೇಶ್, ಉಜ್ಜಯಿನಿ ನೇವಾರ ಭೀಮಣ್ಣ, ಹಿರೇಹೆಗ್ಡಾಳ್ ಬಾರಿಕರ ಫಕೀರಪ್ಪ ಇತರರಿದ್ದರು.
ಪ್ರತಿಭೆಗಳಿಗೆ ಪುರಸ್ಕಾರ- ರಾಜ್ಯಮಟ್ಟದ ಅತ್ಯುತ್ತಮ ಅಂಗನವಾಡಿ ಪ್ರಶಸ್ತಿ ಪುರಸ್ಕೃತ ಕಾರ್ಯಕರ್ತೆ ಬಾರಿಕರ ವಸಂತಮ್ಮ ಸೇರಿ ಅಖಂಡ ಕೂಡ್ಲಿಗಿ ತಾಲೂಕಿನ ಗಂಗಾಮತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಸರಕಾರಿ ನೌಕರರು, ಗಜಾಪುರದ ಎಲ್ಲಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹೊಸಪೇಟೆ ಅಂಜಲಿ ಭರತನಾಟ್ಯ ಕಲಾ ಕೇಂದ್ರ ಹಾಗೂ ಕೊಟ್ಟೂರಿನ ಹಂಸಪ್ರಿಯ ನೃತ್ಯ ನಿಕೇತನ ಕಲಾ ಟ್ರಸ್ಟ್ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗಜಾಪುರದಲ್ಲಿ ನಿರ್ಮಿಸಿರುವ ದೇವಸ್ಥಾನದಲ್ಲಿ ಗಂಗಾದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಹೋಮ, ಹವನ ಸೇರಿ ಧಾರ್ಮಿಕ ಕಾರ್ಯಕ್ರಮಗಳು ಹಾರಕಬಾವಿ ವೇದಮೂರ್ತಿ ಬಸವರಾಜ ಶಾಸ್ತ್ರಿ, ಚಿರಿಬಿ ವೇದಮೂರ್ತಿ ಗಣೇಶ ಶಾಸ್ತ್ರಿ, ಮಲ್ಲಾಪುರ ವೇದಮೂರ್ತಿ ಅಜಯ್ ಶಾಸ್ತ್ರಿ ಅವರ ನೇತೃತ್ವದಲ್ಲಿ ಜರುಗಿದವು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend