ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಅವರ ಆಪ್ತ ಶಮಿದ್ ಮಾನಿಯರ ನಡುವೆ ಶೀತಲ ಸಮರ ಏರ್ಪಟ್ಟಿದೆ!!!!
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಅವರ ಆಪ್ತ ಶಾಮಿದ್ ಮಾನಿಯರ ಅವರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪ್ರತಿಯೊಂದು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನೋಡಿಕೊಳ್ಳುತ್ತಿದ್ದ. ಶಾಮಿದ್ ಮಾನಿಯರ ಇಕ್ಬಾಲ್ ಅನ್ಸರ್ ಅವರಿಂದ ಮುನಿಸಿಕೊಂಡು ಹೊರಗೆ ಬಂದಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಆದರೆ ಇಕ್ಬಾಲ್ ಅನ್ಸರಿಂದ ಮಾತ್ರ ದೂರವಾಗಿದ್ದಾರೆ. ಅರಸಿನಕೆರೆ ಹನುಮಂತಪ್ಪ ಇವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು. ಸುಮಾರು 20 ವರ್ಷಗಳ ಕಾಲ ನಿರಂತರ ಕಾಂಗ್ರೆಸ್ ಪಕ್ಷಕ್ಕೆ ದುಡಿದವರು ಅದರಿಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ನಗರಸಭೆ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶಾಮಿದ್ ಮಾನಿಯರ ಒತ್ತಾಯಿಸಿದರು.
ಇಂದು ಸಿದ್ದು ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನವನ್ನು ಕೊಡಬೇಕೆಂದು ತಿಳಿಸಿದರು. ಇಕ್ಬಾಲ್ ಅನ್ಸಾರಿ ಗರಡಿಯಲ್ಲಿ ಬೆಳೆದವರು ಇವತ್ತು ಮೊದಲು ಬಾರಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿನನ್ನು ಬಿಟ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಅಥವಾ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯಿಂದ ದೂರ ಸರಿಯುವ ಈ ಸನ್ನಿವೇಶವೆ ಕಾರಣ ಎಂದರು. ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಮತಗಳ ಪಡೆಯುವುದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವುದೇ ಇಕ್ಬಾಲ್ ಅನ್ಸಾರಿ ವರ್ಚಸ್ ನಿಂದ ಮತಗಳು ಬಿದ್ದಿಲ್ಲ. ಇಕ್ಬಾಲ್ ಅನ್ಸಾರಿ ವರ್ಚಸ್ಸು ಇದ್ದಿದ್ರೆ ಗೆಲುವು ಸಾಧಿಸಬೇಕಾಯಿತು.( ಗೆಲುವು ಬೇಕಿತ್ತು) ಗಂಗಾವತಿ ತಾಲೂಕು ಕ್ಷೇತ್ರದ ಜನರು ಪ್ರಜ್ಞಾವಂತರು ಯಾರಿಗೆ ಮತ ನೀಡಬೇಕು ಬೇಡ ಎಂಬುದು ತೀರ್ಮಾನ ತೆಗೆದುಕೊಳ್ಳುವವರು. ಇನ್ನು ಹೇಳಬೇಕೆಂದರೆ. ಒಬ್ಬ ಕಾರ್ಯಕರ್ತರು ಇಕ್ಬಾಲ್ ಅನ್ಸಾರಿ ಭೇಟಿ ಮಾಡಬೇಕೆಂದರೆ. ಸುಮಾರು ೫-೬ ತಾಸು ಕಾಯಬೇಕು ಇದರಿಂದ ಇಕ್ಬಾಲ್ ಅನ್ಸಾರಿ ಸೋಲಿಗೆ ಕಾರಣ ಎಂದು ಹೇಳಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯಾಗಿ ಸರಿಯಾಗಿ ಪ್ರಚಾರ ಮಾಡಲಿಲ್ಲ ಎಂದು ತಿಳಿಸಿದರು. ಇವತ್ತು ಅಷ್ಟು ಮತಗಳ ಪಡೆಯುವುದಕ್ಕೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರ ಕಾರ್ಯಕರ್ತರು ಶ್ರಮ ಇದೆ ವಿನಹ ಇಕ್ಬಾಲ್ ಅನ್ಸಾರಿಶ್ರಮ ಏನು ಇಲ್ಲ ಎಂದರು. ರಾಜೀನಾಮೆ ಬ್ಲಾಕ್ ಕಾಂಗ್ರೆಸ್ ಪಕ್ಷಕ್ಕೆ ಮೇ ತಿಂಗಳ ೨೫ ರಂದು ಪಕ್ಷಕ್ಕೆ ನಾನು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದೆ. ಅಲ್ಲಿ ಯಾರೂ ಒತ್ತಡಕ್ಕೆ ಮಣಿದು ಕೊಟ್ಟಿಲ್ಲ. ಇದನ್ನು ಅಂಗೀಕರಿಸುವ ಅಧಿಕಾರ ಇರುವುದು ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮಾತ್ರ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮಗೆ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರು ಎಂದು ಪರೋಕ್ಷವಾಗಿ ಇಕ್ಬಾಲ್ ಅನ್ಸರ್ ವಿರುದ್ಧ ಕುಟುಕಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯಿಂದ ದೂರ ಸರಿದು ನೇರವಾಗಿ ರಾಜ್ಯಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಹತ್ತಿರವಾಗಲು ಪ್ರಯತ್ನ ಅಥವಾ ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯಿಂದ ದೂರ ಸರಿವೆ?
ಇದೇ ಸಂದರ್ಭದಲ್ಲಿ ಶರಣಗೌಡ ಯಮುನಪ್ಪ ಕೊಟ್ರಪ್ಪ ಮಲ್ಲೇಶ್ ದೇವರಮನೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತಿ ಇದ್ದರು…

ವರದಿ,ಹೆಚ್ ಮಲ್ಲೇಶ್ವರ ಭಂಡಾರಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
