;

ಬೆಳಘಟ್ಟ ಗ್ರಾ.ಪಂ. ಗೆ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ …!!!

ಬೆಳಘಟ್ಟ ಗ್ರಾ.ಪಂ. ಗೆ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ …… ಕೂಡ್ಲಿಗಿ: ತಾಲೂಕಿನ ಬೆಳಘಟ್ಟ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯಲ್ಲಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಶ್ರೀ ಸಣ್ಣ ಓಬಮ್ಮ ಓಬಯ್ಯ ಮತ್ತು ಉಪಾಧ್ಯಕ್ಷರಾಗಿ ಬಸಯ್ಯ ಆಯ್ಕೆಯಾದರು . ಒಟ್ಟು 19 ಸದಸ್ಯರು ಹೊಂದಿರುವ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಣ್ಣ ಓಬಮ್ಮ ಓಬಯ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಸಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು , ಅಧ್ಯಕ್ಷ , ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮೆಹಬೂಬ್ ಬಾಷಾ ಅವರು ಆಯ್ಕೆಯನ್ನು ಘೋಷಿಸಿದರು . ಈ ಸಂದರ್ಭದಲ್ಲಿ ಚುನಾವಣೆ ಸಹಾಯಕರಾಗಿ ಶಂಕರ್, ವಾಸು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ , ಸದಸ್ಯರಾದ ಮಹೇಶ್ , ಬಸವರಾಜ್ ಸೇರಿದಂತೆ ಸರ್ವ ಸದಸ್ಯರು ಮುಖಂಡರು ಪಂಚಾಯಿತಿ ಸಿಬ್ಬಂದಿಗಳು ಇದ್ದರು . ಈ ವೇಳೆ ಗುಡೆಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಮಾಲಿಕ್ ಸಾಬ್ ಕಲಾರಿ , ಮತ್ತು ಪೊಲೀಸ್ ಸಿಬ್ಬಂದಿಗಳಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿತ್ತು …

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;