ಮರಬ್ಬಿಹಾಳು ಗ್ರಾ.ಪಂ.ಯ ಅಧ್ಯಕ್ಷರಾಗಿ ಶಂಕರ್ ನಾಯ್ಕ್, ಉಪಾಧ್ಯಕ್ಷರಾಗಿ ಅಖಿಲಾ ಬಾನು ಆಯ್ಕೆ’
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳ್ ಗ್ರಾಮ ಪಂಚಾಯಿತಿಯ 2ನೇ ಅವದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು CDPO ಚುನಾವಣೆ ಅಧಿಕಾರಿಯವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು ಒಟ್ಟು 27ಜನ ಸದಸ್ಯರುಗಳಲ್ಲಿ 26 ಜನ ಸದಸ್ಯರುಗಳು ಹಾಜರಾಗಿದ್ದರು
ಪರಿಶಿಷ್ಟ ಜಾತಿಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮರಬ್ಬಿಹಾಳು ತಾಂಡ ಗ್ರಾಮದ ಶಂಕರ್ ನಾಯ್ಕ 16 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಹಾಗೂ ಅಲ್ಪಸಂಖ್ಯಾತರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವರದಾಪುರ ಗ್ರಾಮದ ಶ್ರೀ ಮತಿ ಅಖಿಲಾಬಾನು 16 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ .
ಈ ವೇಳೆ ಮಾತನಾಡಿದ ಅಧ್ಯಕ್ಷ ಶಂಕರ್ ನಾಯ್ಕ್ ಮೊದಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳು ಸಿಗುವಂತೆ ಮಾಡುತ್ತೇವೆ ಹಾಗೂ ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ, ನನ್ನನ್ನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು
ಉಪಾಧ್ಯಕ್ಷರಾದ ಅಖಿಲಾಬಾನು ಮಾತನಾಡಿ ಮಾದರಿ ಪಂಚಾಯತಿಯನ್ನಾಗಿ ಮಾಡಲು ಎಲ್ಲರು ಶ್ರಮಿಸುತ್ತೇವೆ ಅಭಿವೃದ್ಧಿಯ ಪಥದತ್ತ ಕೊಂಡೊಯುತ್ತೇವೆ ಎಂದು ಹೇಳಿದರು
ಹಗರಿಬೊಮ್ಮನಹಳ್ಳಿ ಮಾಧ್ಯಮದೊಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ , ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ೧೦೦ಕ್ಕೆ ಪ್ರತಿಶಹ ಎಲ್ಲಾ ಪಂಚಾಯತಿಗಳು ಕಾಂಗ್ರೇಸ್ ನ ಭದ್ರಕೋಟೆಯಾಗಿ ಮಾರ್ಪಟ್ಟಿವೆ, ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತವಿರುವುದರಿಂದ ಹೆಚ್ಚಿನ ಅನುದಾನ ತಂದು ಗ್ರಾಮಗಳ ಅಭಿವೃದ್ಧಿಪಡಿಸುತ್ತೇವೆ, ಮೂಲಭೂತ ಸೌಲಭ್ಯಗಳನ್ನ ದೊರಕಿಸಿಕೊಡುವುದು ನಮ್ಮ ಮೊದಲ ಆಧ್ಯತೆ, ಹಾಗು ಮುಂದಿನ ದಿನಗಳಲ್ಲಿ ಕಡುಬಡವರಿಗೆ, ಮನೆ ಇಲ್ಲದವರಿಗೆ ಮನೆಗಳನ್ನ ಕೊಡುವುದರ ಬಗ್ಗೆ ಸರಕಾರದ ಗಮನಕ್ಕೆ ತರುತ್ತೇವೆ ಎಂದರು
ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಸರಳ ಹಾಗೂ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಮೌನೇಶ್ ರಾಥೋಡ್ ಹಾಗು ಸಿಬ್ಬಂಧಿ ವರ್ಗ ಯಾವುದೇ ಅಹಿತರ ಘಟನೆ ನಡೆಯದಂತೆ ನಿಗಾ ವಹಿಸಿದ್ದರು ಅಲ್ಲದೆ ವಿಜಯನಗರ ಜಿಲ್ಲೆಯ ಎಸ.ಪಿ.ಹರಿ ಬಾಬು ಭೇಟಿ ನೀಡಿದ್ದು ವಿಶೇಷ ವಾಗಿತ್ತು
ಇನ್ನು ಈ ಸಂದರ್ಭದಲ್ಲಿ ಸದಸ್ಯರುಗಳಾದ ಹುಲಿಗೆಮ್ಮ.ವಿ, ತಳವಾರ ನೀಲಮ್ಮ, ಡೊಳ್ಳಿನ ಹುಲುಗಪ್ಪ, ತಿಪ್ಪಮ್ಮ, ಹನುಮಪ್ಪ, ಜಿ.ಶಿಲ್ಪಿ, ನಕರಾಳ್ ಗೋಣೆಪ್ಪ, ಆರ್.ಹುಲಿಗೆಮ್ಮ,ತುಲಚವ್ವ, ಇತರರು ಹಾಗು ಪಂಚಾಯತಿ ಸಿಬ್ಬಂಧಿಗಳು ಉಪಸ್ಥಿತರಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
