;

ಅನಧಿಕೃತ ಲಾಟರಿ ಮಾರಾಟ ಕಂಡು ಬಂದಲ್ಲಿ‌ ದಾಳಿ ನಡೆಸಿ: ಡಾ.ಕುಮಾರ…!!!

ಅನಧಿಕೃತ ಲಾಟರಿ ಮಾರಾಟ ಕಂಡು ಬಂದಲ್ಲಿ‌ ದಾಳಿ ನಡೆಸಿ: ಡಾ.ಕುಮಾರ

ಅನಧಿಕೃತ ಲಾಟರಿ ಮಾರಾಟ ಹಾಗೂ ಮಟ್ಕ ಹಾವಳಿ ನಿಯಂತ್ರಿಸುವ ಬಗ್ಗೆ ಪೊಲೀಸ್ ಇಲಾಖೆ ಸನ್ನದ್ಧರಾಗಬೇಕು. ಅನಧಿಕೃತ ಲಾಟರಿ ಮಾರಾಟ ಕಂಡು ಬಂದಲ್ಲಿ ತಕ್ಷಣ ದಾಳಿ ನಡೆಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.

ಅವರು ಇಂದು ಅನಧಿಕೃತ ಲಾಟರಿ ಮತ್ತು ಮಟ್ಕಾ ಹಾವಳಿಯನ್ನು ನಿಯಂತ್ರಿಸುವ ಫೈಯಿಂಗ್ ಸ್ಕ್ವಾಡ್ ತ್ರೈಮಾಸಿಕ ಸಭೆಯ‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಾಟರಿ ಹಾಗೂ ಮಟ್ಕದಂತಹ ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಜತೆಗೆ ನಿಯಮಗಳ ಚೌಕಟ್ಟಿನಲ್ಲಿಯೇ ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಶಾಲಾ-ಕಾಲೇಜು ಹಾಗೂ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಅರಿವು ಮೂಡಿಸುವ ಕೆಲಸವಾಗಲಿ. ಜತೆಗೆ ಈವರೆಗೂ ಆಗಿರುವ ಪ್ರಕರಣಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು.

ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ತ್ರೀಶಕ್ತಿ ಗುಂಪಿನೊಂದಿಗೆ ಅಧಿಕಾರಿಗಳು ಚರ್ಚಿಸಿ ಅವರ ಸಹಕಾರದಿಂದ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.

ಸಭೆಯಲ್ಲಿ ಪಿಂಚಣಿ, ಸಣ್ಣ ಉಳಿತಾಯ ಹಾಗೂ ಲಾಟರಿ, ಮಟ್ಕ ನಿಯಂತ್ರಣಾ ಅಧಿಕಾರಿ ಗಿರೀಶ್, ಎಸ್ಪಿ ಕಛೇರಿಯ ಪೊಲೀಸ್ ಅಧಿಕಾರಿ ದೇವರಾಜು, ವಾಣಿಜ್ಯ ಇಲಾಖೆಯ ಶ್ರೀನಿವಾಸ್ ಹಾಜರಿದ್ದರು…

ವರದಿ. ಸುರೇಶ್. ಮಂಡ್ಯ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;