;

ಸಕಾಲಕ್ಕೆ ಬಾರದ ಹಣಕ್ಕಾಗಿ ಅಂಚೆ ಕಚೇರಿ ಮುಂದೆ ನಿತ್ಯ ಫಲಾನುಭವಿಗಳ ಸರದಿ ಸಾಲು, ದೇವರು ಕೊಟ್ರೂ.. ಪೂಜಾರಿ ಕೊಡರ.!?

ಸಕಾಲಕ್ಕೆ ಬಾರದ ಹಣಕ್ಕಾಗಿ ಅಂಚೆ ಕಚೇರಿ ಮುಂದೆ ನಿತ್ಯ ಫಲಾನುಭವಿಗಳ ಸರದಿ ಸಾಲು, ದೇವರು ಕೊಟ್ರೂ.. ಪೂಜಾರಿ ಕೊಡರ.!?-ಸರ್ವರ್ ಸಬೂಬು- ವಿಜಯನಗರ ಜಿಲ್ಲೆ ಕೂಡ್ಲಿಗಿ: ಸರ್ಕಾರ ರಾಷ್ಟ್ರೀಯ ಭದ್ರತಾ ಯೋಜನೆ ಸೇರಿದಂತೆ, ಹಲವು ಯೋಜನೆಗಳಿಂದ ನಾಗರೀಕರಿಗೆ ಹಾಗೂ ಸಾರ್ವಜನಿಕರಿಗೆ. ಮಾಸಿಕ ವೇತನ ಮಂಜೂರು ಮಾಡಿದೆ ಯಾದರೂ.. ಅದು ಫಲಾನುಭವಿಗಳಿಗೆ ಗಗನ ಕುಸುಮದಂತಾಗಿದೆ. ಕಾರಣ ಸಂಬಂಧಿಸಿದಂತೆ ಅಂಚೆ ಕಚೇರಿ ಸಿಬ್ಬಂದಿ ಮನೆ ಬಾಗಿಲಿಗೆ ಯೋಜನೆ ಫಲಾನುಭವಿಗಳಿಗೆ, ಸಕಾಲಕ್ಕೆ ಸಮರ್ಪಕವಾಗಿ ಮಾಸಿಕ ಹಣ ತಲುಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪವಿದೆ. ಇದು ಮೇಲ್ನೋನಟಕ್ಕೆ ದೇವರ ಸ್ವರೂಪವಾದ ಸರ್ಕಾರ ಅರ್ಹ ಫಲಾನುಭವಿ ಭಕ್ತನಿಗಾಗಿ ನೀಡಿರುವ ಸೌಲಭ್ಯವನ್ನು, ಪೂಜಾರಿ ಸ್ವರೂಪದ ಸಂಬಂಧಿಸಿದ ಇಲಾಖೆಗಳು ಸೌಲಭ್ಯವನ್ನು ಫಲಾನುಭವಿ ಭಕ್ತನಿಗೆ ತಲುಪಿಸುತ್ತಿಲ್ಲ ಎಂಬಂತಿದೆ. ತಮಗೆ ಬರಬೇಕ‍ದ ಹಣ ಸಕಾಲಕ್ಕೆ ಬಾರದ ಹಿನ್ನಲೆಯಲ್ಲಿ ಫಲಾನುಭವಿಗಳು, ಅಂಚೆ ಕಛೇರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಅಲೆದಾಡುತ್ತಿದ್ದಾರೆ. ಸರ್ಕಾರ ಮಂಜೂರು ಮಾಡಿರುವ ತಮ್ಮ ಪಾಲಿನ ಹಣವನ್ನು ಪಡೆಯಲು, ಬೆಳಿಗ್ಗೆ ಯಿಂದ ಸಂಜೆವರೆಗೂ ಕಾಯಬೇಕಿದೆ. ಮಾಸಿಕ ಹಣಕ್ಕಾಗಿ ತಾವು ಕಛೆೇರಿಗೆ ನಿತ್ಯ ಅಲೆಯುಂತಾಗಿದೆ, ಈ ದುಸ್ಥಿತಿ ತಮಗೆ ಅನೇಕ ತಿಂಗಳುಗಳಿಂದ ಸಾಮಾನ್ಯವಾಗಿದೆ ಎನ್ನುತ್ತಾರೆ ಕೂಡ್ಲಿಗಿಯ ನೊಂದ ನಾಗರೀಕರು. ಇದು ಕೂಡ್ಲಿಗಿ ಪಟ್ಟಣದ ಅಂಚೆಕಛೇರಿಯ ಆವರಣದಲ್ಲಿ, ಸರ್ಕಾರದಿಂದ ತಮಗೆ ಮಾಸಿಕ ಬರುವ ಹಣ ಸಕಾಲಕ್ಕೆ ಬಾರದ ಹಿನ್ನಲೆಯಲ್ಲಿ ಬೀಡು ಬಿಟ್ಟಿದ್ದ ಅನೆಕ ವೃದ್ಧರ ಗೋಳಾಗಿದೆ. ಸರ್ಕಾರ ಮಾಸಿಕ ಹಣವನ್ನು ಮಂಜೂರು ಮಾಡಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ, ಸಕಾಲಕ್ಕೆ ತಲುಪುಸಲಾಗುತ್ತಿದೆ ಎಂದು ಬೊಬ್ಬಿಹೊಡೆಯುತ್ತಿದೆ.

ಆದ್ರೆ ಕೂಡ್ಲಿಗಿ ಯಲ್ಲಿ ಅದು ಅಪವಾದಂತ ಎಂಬತಹ ದುಸ್ಥಿತಿ ನಿರ್ಮಾಣ ವಾಗಿದೆ, ಫಲಾನುಭವಿಗಳು ತಮ್ಮ ಮನೆ ಬಾಗಿಲಿಗೆ ಬರಬೇಕಿರುವ ಮಾಸಾಶನಕ್ಕಾಗಿ, ಅವ್ಯವಸ್ಥೆಯ ಪರಿಣಾಮ ಅವರು ಬೆಳಿಗ್ಗೆಯಿಂದ ಸಂಜೆವರೆಗೆ ಅಂಚೆಕಛೇರಿ ಬಳಿ ಸರದಿ ಸಾಲಿನಲ್ಲಿ ನಿಲ್ಲಬೇಕಿದೆ. ಈ ದುರ‍ಾವಸ್ಥೆಗೆ ಕಾರಣ ಹುಡುಕುತ್ತಾ ಹೋದರೆ, ಸಂಬಂಧಿಸಿದ ಅಧಿಕಾರಿಯಿಂದ ಸಿಗುವುದೊಂದೇ ಉತ್ತರ ಸರ್ವರ್ ಸರಿ ಇಲ್ಲ… ಅಂಚೆ ಇಲಾಖೆ ಸರ್ಕಾರದ ಸೌಲಭ್ಯಗಳನ್ನು, ನಿಗದಿತ ಸಮಯಕ್ಕೆ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊತ್ತಿದೆ. ಆದ್ರೆ ಅದು ಕೂಡ್ಲಿಗಿ ಪಟ್ಟಣ ಸೇರಿದಂತೆ ಕೂಡ್ಲಿಗಿ ವಲಯದ ನಾಗರೀಕರ ಪಾಲಿಗೆ, ಅದು ಅಲಭ್ಯವಾಗಿದೆ ಅನ್ನೋದು ಕಠು ಸತ್ಯ, ಅಂಚೆ ಇಲಾಖೆಯವರು ಸಕಾಲಕ್ಕೆ ತಮಗೆ ಹಣ ತಂದು ಕೊಡೋದಿಲ್ಲ. ತಮಗೆ ಇಲ್ಲ ಸಲ್ಲದ ತಪ್ಪು ಮಾಹಿತಿ ನೀಡಿ ವಂಚಿಸುವ ಸಾಧ್ಯತೆ ಇದೆ ಎಂಬ ಆತಂಕ ಕೆಲ ಫಲಾನುಭವಿಗಳು ವ್ಯಕ್ತಪಡಿಸುತ್ತಿದ್ದಾರೆ , ಹಾಗೂ ಕೆಲ ಅಕಾಲಿಕ ಸಿಬ್ಬಂದಿಯ ಮೇಲೆ ತಮ್ಮಲ್ಲಿ ಅನುಮಾನದ ಹುತ್ತ ಬೆಳೆದಿರುವುದ‍ಾಗಿ ಅವರೇ ತಿಳಿಸಿದ್ದಾರೆ. ಕೆಲ ತಿಂಗಳುಗಳಿಂದ ತಮಗೆ ಹನೇ ಬಂದಿಲ್ಲ, ಅದರ ಬಗ್ಗೆ ಯಾರೂ ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ಕೆಲ ವೃದ್ಧ ಫಲಾನುಭವಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆ ಕಾರಣಕ್ಕಾಗಿ ತಾವೇ ನೇರವಾಗಿ ಅಂಚೆ ಕಚೇರಿಯ ಬಳಿ ಸಾಗಿ , ತಮ್ಮ ಮಾಸಿಕ ಹಣ ಪಡೆಯುತ್ತಿರುವುದಾಗಿ ಕೆಲ ಫಲಾನುವಿಗಳು ತಿಳಿಸಿದ್ದಾರೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಕೆಲ ಫಲಾನುಭವಿಗಳು, ತಮ್ಮ ಮಾಸಾಶನ ಪಡೆಯಲು ತಾನು. ದಿನಾ ಬೆಳಿಗ್ಗೆ ಯಿಂದ ಸಂಜೆವರೆಗೂ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದೇನೆ, ಹೀಗೆಯೇ ಮೂರ್ನಾಲ್ಕು ದಿನದಿಂದ ನಿತ್ಯ ಬಂದು ನಿಲ್ಲುತ್ತಿರುವುದಾಗಿ ತಿಳಿಸಿದ್ದಾರೆ. ಈ ಸನ್ನಿವೇಶ ನಿನ್ನೆ ಮೊನ್ನೆಯದೇನಲ್ಲ ಹಲವು ತಿಂಗಳುಗಳಿಂದ ಹೀಗೆ ಮುಂದು ವರೆದಿದೆ ಎಂದು, ಅಂಚೆ ಕಚೇರಿಯ ನೆರೆ ಹೊರೆಯ ಸಾರ್ವಜನಿಕರು ತಿಳಿಸಿದ್ದಾರೆ.

ತಾಂತ್ರಿಕ ಆಡ ತಡೆ ಕಾರಣ- ಅಧಿಕಾರಿ ಸ್ಪಷ್ಟನೆ-ಅಂಚೆ ಇಲಾಖಾ ಅಧಿಕಾರಿಗಳಾದ ಕೊಟ್ರೀಶರವರನ್ನು, ಈ ಸಂಬಂಧಿಸಿದಂತೆ ವಿಚಾರಿಸಲಾಗಿ. ತಮ್ಮ ವ್ಯಾಪ್ತಿಗೆ ಕೂಡ್ಲಿಗಿ ಪಟ್ಟಣ ಸೇರಿದಂತೆ 5-6ಗ್ರಾಮಗಳು ತಮ್ಮ ವಲಯದ ವ್ಯಾಪ್ತಿಗೆ ಬರುತ್ತಿವೆ. ಅಂದಾಜು 6ಸಾವಿರಕ್ಕೂ ಅಧಿಕ ಪ್ರಮಾಣದ ಫಲಾನುಭವಿಗಳಿದ್ದು, ಹಣ ವಿತರಿಸಲು ಅಗತ್ಯ ಇರೋ ಕೌಂಟ್ರು ಒಂದೇ ಇದ್ದು. ನಾನಾ ಕಾರಣಗಳಿಂದಾಗಿ ಸರ್ವರ್ ಸದಾ ಬ್ಯೂಸಿ ಬರುತ್ತಿದ್ದು, ಈ ತಾಂತ್ರಿಕ ದೋಷದ ಕಾರಣದಿಂದ‍ಾಗಿ ಸೇವೆ ಒದಗಿಸಲು ತುಂಬಾ ವಿಳಂಬವಾಗುತ್ತಿದೆ. ಮತ್ತು ಅಂಚೆ ಕಚೇರಿಯ ಆವರಣದಲ್ಲಿಯೇ ಆಧಾರ ಕಾರ್ಡ್ ನೊಂದಣಿ, ಹಾಗೂ ತಿದ್ದು ಪಡಿ ಸೇವೆಯೂ ಲಭ್ಯ ಇದ್ದು. ಮತ್ತು ಅಂಚೆ ಸೇವೆಗೆಂದು ಸಾಕಷ್ಟು ಅಂಚೆ ಇಲಾಖಾ ಗ್ರಾಹಕರು, ಕಛೇರಿಗೆ ಸದಾ ಬಂದು ಹೋಗುತ್ತಿರುತ್ತಾರೆ. ಈ ಮೂರು ಕಾರಣದಿಂದಾಗಿ ಕಛೇರಿ ಸದಾ ಜನರಿಂದ ಕಿಕ್ಕಿರಿದು ತುಂಬಿರುತ್ತದೆ, ಸಿಬ್ಬಂದಿ ಜನರ ಸೇವೆಯಲ್ಲಿ ಬಹು ನಿಷ್ಠೆಯಿಂದ ಕರ್ಥವ್ಯ ನಿರ್ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕಛೇರಿ ಒಳಾಂಗಣದಲ್ಲಿನ ಜನಸಂಧಣಿಯ ದಟ್ಟಣೆಯ ಬಗ್ಗೆ, ಇಲಾಖೆ ಹಾಗೂ ಸಿಬ್ಬಂದಿ ಯ ಕರ್ಥವ್ಯದ ಬಗ್ಗೆ ತಪ್ಪು ಕಲ್ಪನೆ ತಪ್ಪು ಸಂಧೇಶಗಳನ್ನು. ಯಾರೂ ಹೊಂದಬಾರದು ಹಾಗೂ ಹರಡಬಾರದು. ತಾಂತ್ರಿಕ ದೋಷ ಹಾಗೂ ವಿಳಂಬ ಸಮಸ್ಯೆ ನಿವಾರಣೆ ಬಗ್ಗೆ, ಸಂಬಂಧಿಸಿದ ಇಲಾಖೆ ಗಳ ಗಮನಕ್ಕೆ ತಂದಿದ್ದು. ಮೇಲಾಧಿಕಾರಿಗಳ ನಿರ್ಧೇಶನದಂತೆ ಸೂಕ್ತ ಪರಿಹಾರೋಪಾಯವನ್ನು, ಅತ್ಯಂತ ಶೀಘದಲ್ಲಿಯೇ ಪರಿಹಾರ ಕಂಡು ಕೊಳ್ಳುವುದಾಗಿ ಅವರು ತಿಳಿಸಿದರು.

ತಪ್ಪು ತಿಳುವಳಿಕೆ ಬೇಡ- ಹಿರಿಯ ನಾಗರೀಕರು ಹಾಗೂ ವಿವಿದ ಯೋಜನೆಗಳ ಫಲಾನುಭವಿಗಳು ಯಾವುದೇ ಕಾರಣಕ್ಕೆ, ಆತಂಕ ಪಡುವ ಅಗತ್ಯ ಇಲ್ಲ ಅವರ ಹಣ ಅವರ ಖಾತೆಗೆ ಸಕಾಲಕ್ಕೆ ಜಮಾ ಆಗಿರುತ್ತದೆ. ಕೆಲ ತಾಂತ್ರಿಕ ಅಡತಡೆಗಳಿಂದಾಗಿ ಅವರ ಸೇವೆ ಸಕಾಲಕ್ಕೆ ತಲುಪದಿರಬಹುದು, ಆದ್ರೆ ಅವರ ಹಣ ಅವರ ಖಾತೆಗೆ ಜಮಾ ಆಗೋದು ಖಚಿತ. ಕಾರಣ ಯಾರೇ ಫಲಾನುಭವಿಗಳು ಆತಂಕ ಪಡಬೇಡಿ, ವಿನಾಃಕಾರಣ ಊಹಾ ಪೋಹಗಳಿಂದಾಗಿ ಸಿಬ್ಬಂದಿ ಹಾಗೂ ಅಂಚೆ ಸೇವೆಯ ಬಗ್ಗೆ ತಪ್ಪು ಸಂದೇಶ ಹೊಂದಬೇಡಿ. ಹಾಗೂ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶಗಳನ್ನು ಹರಡಬೇಡಿ, ತಾಂತ್ರಿಕ ಅಡ ತಡೆ ಕಾರಣಕ್ಕೆ ಅತ್ಯಲ್ಪ ವಿಳಂಬ ವಾಗುತ್ತಿದೆ ಯಾರೂ ಕೂಡ ಅಂಚೆ ಕಚೇರಿ ಬಳಿ ದಾವಿಸುವ ಅಗತ್ಯ ಇಲ್ಲ. ಅಂಚೆ ಸೇವಾ ಸಿಬ್ಬಂದಿ ತಮ್ಮ ಗುರುತರವಾದ ಜವಾಬ್ದಾರಿಯನ್ನು ಸದಾ ಅಚ್ಚುಕಟ್ಟಾಗಿ ಬಹು ಶಿಸ್ಥಿನಿಂದ ನಿರ್ವಹಿಸುತ್ತಿದ್ದು, ಕೆಲ ತಾಂತ್ರಿಕ ಅಡ ತಡೆಯ ಸಂದರ್ಭದಲ್ಲಿ ಅನಿವಾರ್ಯ ಕಾರಣಕ್ಕೆ ವಿಳಂಬವಾಗಿದೆ. ಸಾರ್ವಜನಿಕರು ಹಿರಿಯ ನಾಗರೀಕರು ಫಲ‍ಾನುಭವಿಗಳು, ಇಲಾಖೆಯೊಂದಿಗೆ ಸಹಕರಿಸಬೇಕಿದೆ ಎಂದು ಕೂಡ್ಲಿಗಿ ‍ಅಂಚೆ ಇಲಾಖಾಧಿಕಾರಿ ಕೊಟ್ರೇಶ ಕೋರಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *