;

ಭರವಸೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮತ ಕೇಳಲು ನಿಮ್ಮ ಗ್ರಾಮಕ್ಕೆ ಬರಲ್ಲ ಎಂದ ಶಾಸಕ ಗಾಲಿ ಜನಾರ್ದನ್ ರೆಡ್ಡಿ!!!!

ಭರವಸೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮತ ಕೇಳಲು ನಿಮ್ಮ ಗ್ರಾಮಕ್ಕೆ ಬರಲ್ಲ ಎಂದ ಶಾಸಕ ಗಾಲಿ ಜನಾರ್ದನ್ ರೆಡ್ಡಿ!!!!
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮತ ಕೇಳಲು ನಿಮ್ಮ ಊರಿಗೆ ಬರುವುದಿಲ್ಲ ಎಂದ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಅವರು ಹೇಳಿದರು. ಗಂಗಾವತಿ ತಾಲೂಕಿನ ಹಾಸಗಲ್ ಗ್ರಾಮಕ್ಕೆ ಸೋಮವಾರದಂದು ಭೇಟಿ ನೀಡಿ ಗ್ರಾಮದ ಮಾರುತೇಶ್ವರ ದೇವಸ್ಥಾನಕ್ಕೆ ದೇವರ ದರ್ಶನ ಪಡೆದು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ. ನಿಮ್ಮ ಗ್ರಾಮದ ಸಕಲ ಅಭಿವೃದ್ಧಿಯನ್ನು ಮಾಡುತ್ತೇನೆ ಎಂದರು. ಹಾಸಗಲ್ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂಪಾಯಿ ಅನುದಾನವನ್ನು ಒದಗಿಸಿಕೊಡುತ್ತೇನೆ. ಅನುದಾನ ಸಾಲದಿದ್ದರೆ ತಾಲೂಕ್ ಪಂಚಾಯತ್ ಜಿಲ್ಲಾ ಪಂಚಾಯತ್ ಸೇರಿದಂತೆ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಶಾಸಕರು ಅನುದಾನವನ್ನು ಬಳಸಿ ಹಾಸಗಲ್ ಗ್ರಾಮದ ಸಕಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೆ ಎಂದು ಹೇಳಿದರು. ನಂತರ ಗ್ರಾಮ ಪಂಚಾಯತ್ ಕಚೇರಿ ಭೇಟಿ ನೀಡಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ನೂತನ ಪದಾಧಿಕಾರಿಗಳು ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮನೋಹರ್ ಗೌಡ ಹೇರೂರು. ಯಮನೂರು ಚೌಡ್ಕಿ. ಮುಸ್ತಾಕ್ ಅಲಿ. ಸುಮಂಗಳಮ್ಮ ಮಲ್ಲೇಶಪ್ಪ. ಸುಮಂಗಳ ಶಿವಾನಂದ. ಮೌನೇಶಮ್ಮ. ಮಂಜುನಾಥ್. ಹನುಮಂತಪ್ಪ .ಶರಣಪ್ಪ ಜಿ ಮಂತ್ರಿ .ಮುಕ್ಕಣ್ಣ ಮಂತ್ರಿ. ಗ್ಯಾನನ ಗೌಡಮಾಲಿ ಪಾಟೀಲ್. ಸೋಮಲಿಂಗಪ್ಪ ಮಂತ್ರಿ. ಜಗದೀಶಪ್ಪ ಹುನಗುಂದ ನರಸಪ್ಪ ದಾಸರ. ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು…

ವರದಿ.ಗಂಗಾವತಿ ತಾಲೂಕು ವರದಿಗಾರರು ಹೆಚ್ ಮಲ್ಲೇಶ್ವರ ಭಂಡಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;