;

ಗಂಗಾವತಿ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ವತಿಯಿಂದ ಪತ್ರಿಕ ದಿನಾಚರಣೆ ಆಚರಿಸಲಾಗಿದೆ!!!

ಗಂಗಾವತಿ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ವತಿಯಿಂದ ಪತ್ರಿಕ ದಿನಾಚರಣೆ ಆಚರಿಸಲಾಗಿದೆ!!!
ಕೊಪ್ಪಳ ಜಿಲ್ಲಾ ಗಂಗಾವತಿ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತಸಂಘ ತಾಲೂಕು ಘಟಕದಿಂದ ಸೋಮವಾರ ನಗರದ ತಾಲೂಕು ಪಂಚಾಯಿತಿ ಮಂಥನ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ. ಸ್ವತಂತ್ರ ಪೂರ್ವದಲ್ಲಿ ಮತ್ತು ಸ್ವತಂತ್ರ ನಂತರ 1975 ತುರ್ತು ಪರಿಸ್ಥಿತಿಯಲ್ಲಿ ಪತ್ರಿಕೆ ಕ್ಷೇತ್ರವನ್ನು ಹತ್ತಿಕ್ಕಲಾಯಿತು. ಆದರೂ ಕೆಲವು ಬರಹಗಾರರು ಭಯವಿಲ್ಲದೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯ ವಿರುದ್ಧ ಅಂಕು ಡೊಂಕುಗಳನ್ನು ಉತ್ತಮ ವರದಿ ಮಾಡುತ್ತಿದ್ದರು. ಪತ್ರಿಕೆ ಸ್ವಾತಂತ್ರವನ್ನು ಯಾರಿಂದಲೂ ಕುಸಿದುಕೊಳ್ಳಲು ಸಾಧ್ಯವಿಲ್ಲ. ಪತ್ರಕರ್ತರ ಕೂಡ ಸತ್ಯಂ ಶಿವ ಪ್ರಕಟಿಸಿದರೆ. ಎಂದು ಹಿರಿಯ ವೈದ್ಯರು ಜಿ. ಚಂದ್ರಪ್ಪ ಹೇಳಿದರು. ಹಾಗೂಡಿ.ವಿ.ಗುಂಡಪ್ಪ ಅವರು ಪ್ರಾರಂಭಿಸಿದ ಕಾರ್ಯ ನಿರಾತ ಪತ್ರಕರ್ತರ ಸಂಘ ಇಂದು ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ 20 ವರ್ಷಗಳ ಹಿಂದೆ ಗಂಗಾವತಿಯಲ್ಲಿ ಸಹ ಈ ಸಂಘಕ್ಕೆ ಎಂಟು ಜನ ಸದಸ್ಯರು ಇದ್ದರು. ಆದರೆ ಇಂದು 40 ಜನ ಸದಸ್ಯರಾಗಿರುವ ಹೆಮ್ಮೆಯ ವಿಷಯವಾಗಿದೆಎಂದರೆ. ಇದೇ ಸಂದರ್ಭದಲ್ಲಿ ಪತ್ರಿಕೆ ವಿತರಕರಿಗೆ ಸನ್ಮಾನಿಸಿದ ಹಿರಿಯ ವೈದ್ಯ ಡಾಕ್ಟರ್ ಸೋಮರಾಜ್ ಮಾತನಾಡಿ ಸಮಾಜದ ಅಂಕುಡೊಂಕುಗಳನ್ನು ಬಿಂಬಿಸುವವರಾಗಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವವರನ್ನು ಪರಿಚಯಿಸುವ ಕೆಲಸ ಪತ್ರಕರ್ತರು ಮಾಡಬೇಕು. ಪತ್ರಕರ್ತರು ಮತ್ತು ವೈದ್ಯಕೀಯ ಸೇವೆಯು ಅತ್ಯಂತ ಕಠಿಣ ಸವಲಾಗಿದೆ. ವೈದ್ಯ ವೃತ್ತಿಯ ಆಗುಹೋಗುಗಳ ಬಗ್ಗೆ ಬರೆಯುವಾಗ ಸತ್ಯಂ ಶ ಮೊದಲು ಅಧ್ಯಯನ ಮಾಡಿ ಬರೆಯಬೇಕು ಎಂದು ಸಲಹೆ ನೀಡಿದರು. ಮಕ್ಕಳ ತಜ್ಞ ಡಾಕ್ಟರ್ ಅಂಬರೀಶ್ ಪಾಟೀಲ್ ಪಾಟೀಲ್ ಮಾತನಾಡಿ. ಸೃಷ್ಟಿಕರ್ತರು ಸೃಷ್ಟಿಕರ್ತನಿಗೆ ಸಮನಾಗಿದ್ದಾರೆ. ತಪ್ಪು ಮಾಡುವರನ್ನು ಬಡೆದಿಬ್ಬಿಸುವ ಶಕ್ತಿ ಅವರಲ್ಲಿದೆ. ಗಂಗಾವತಿ ತಾಲೂಕು ಅಭಿವೃದ್ಧಿ ಮತ್ತು ಇಲ್ಲಿನ ಪ್ರವಾಸೋದ್ಯಮ ಇತಿಹಾಸ ಸ್ಮಾರಕಗಳ ರಕ್ಷಣೆಯಾಗುವಂತೆ ಪತ್ರಕರ್ತರು ಹೊಂದಿಸಬೇಕು ಎಂದು ಮನವಿ ಮಾಡಿದರು. ಜಿಎನ್ಎನ್ ಸ್ಥಳಿಯ ವಾಹಿನಿ ಮುಖ್ಯಸ್ಥ ಹಾಗೂ ದುರ್ಗಾದೇವಿ ಸೇವಾ ಸಮಿತಿ ಅಧ್ಯಕ್ಷ ನಾರಾಯಣಪ್ಪ ನಾಯಕ್ ಮಾತನಾಡಿ ಪತ್ರಿಕೆ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಗಂಗಾವತಿ ಹಲವು ಕಾರ್ಯಕರ್ತರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರಿಗೆ ನಿವೇಶನ ಒದಗಿಸಲು ಶಾಸಕರಿಗೆ ಮನವಿ ಮಾಡಬೇಕೆಂದರು. ಕಾರ್ಯಕ್ರಮ ಅಧ್ಯಕ್ಷ ವಹಿಸಿದ ವಿದ್ಯಾನಿಕೇತನದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ. ಪ್ರತಿಯೊಂದು ಕ್ಷೇತ್ರದ ಸಾಧನೆ ಮತ್ತು ಸಾಧಕರನ್ನು ಹೊರ ಜಗತ್ತಿನ ಕೆಲಸ ಮಾಧ್ಯಮ ಮಾಡುತ್ತದೆ. ತಾಲೂಕಿನ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದೆ. ಗಂಗಾವತಿ ತಾಲೂಕಿನ ಇತಿಹಾಸ ಮತ್ತು ಧಾರ್ಮಿಕ ಕ್ಷೇತ್ರಗಳ ಇಂದು ವಿಶ್ವ ಖ್ಯಾತಿಯಾಗಲು ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದರು. ಕಾರ್ಯಕ್ರಮ ಕುರಿತು ಕಾರ್ಯನಿರತರ ಸಂಘದ ತಾಲೂಕ ಅಧ್ಯಕ್ಷ ನಾಗರಾಜ್ ಇಂಗಳಗಿ ಪ್ರಸ್ತಾಪಿಕವಾಗಿ ಮಾತನಾಡಿ ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಕಾರ್ಯನಿರತನ ಪತ್ರಕರ್ತರು ಸಂಘಟನೆಯಲ್ಲಿ ಸರ್ವಪಥ ಪತ್ರಕರ್ತರು ಸಕ್ರಿಯವರಾಗಿದ್ದಾರೆ. ಎಲ್ಲರ ಸಹಕಾರದಿಂದ ಗಂಗಾವತಿ ತಾಲೂಕು ಘಟಕವನ್ನು ಕ್ರಿಯಾಶೀಲ ಗೊಳಿಸಿದ್ದು. ನಾಗರಾಜ್ ಇಂಗಳಗಿ ಅವರು ಹಲವಾರು ವರ್ಷ ಪತ್ರಿಕೆ ಉದ್ಯಮದಲ್ಲಿ ಸಾಕಷ್ಟು ಕಷ್ಟ ಸುಖಗಳನ್ನು ಸಾಧನೆ ಮಾಡಿ ಇವತ್ತು ಗಂಗಾವತಿ ಕಾರ್ಯ ನಿರಂತರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಲ್ಲಾ ಸದಸ್ಯರನ್ನು ಒಗ್ಗಟ್ಟಿನಿಂದ ಅವರ ಕಷ್ಟ ಸುಖಗಳನ್ನು ಅವಲೋಕನ ಮಾಡಿ ಅವರ ಬೆನ್ನುಲುವಾಗಿ ನಿಂತುಕೊಂಡು ತಮ್ಮ ಸದಸ್ಯರಲ್ಲಿ ಎಲ್ಲಿ ಹೋಗಲಿ ಎಲ್ಲೇ ಇರಲಿ ನೀವು ಚೆನ್ನಾಗಿ ಸುದ್ದಿ ಮಾಡಿ ಎಂದು ತನ್ನ ಪತ್ರಕರ್ತರ ಸಂಘದ ಸದಸ್ಯರು ಕಿವಿ ಮಾತುಗಳು ಸಾಕಷ್ಟು ಕಷ್ಟ ಬಿದ್ದಿದ್ದೇವೆ ಅದೇ ರೀತಿ ನಿಮಗೆ ಕಷ್ಟ ಬರಬಹುದು. ಖಂಡಕ್ಕಿಂತ ಲೇಖನ ದೊಡ್ಡ ಅರಿತವಾಗಿರುತ್ತದೆ. ಆದರೆ ಅದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದು ನೀವು ಅರ್ಥ ಮಾಡಿಕೊಂಡು ಮುಂದೆ ನಡೆದರೆ ನಿನ್ನಿಂದ ನಾನು ಸದಾ ಇರುತ್ತೇನೆಂದು ಹೇಳಿದೆ ಪತ್ರಿಕಾ ಭವನದ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ ಎಂದರು. ನಂತರ ಪತ್ರಿಕೆ ವಿತರಕರಾದ ಪಂಪಾಪತಿ ಕುಂಬಾರ ವಿರೂಪಾಕ್ಷಪ್ಪ ಚನ್ನಬಸವ ಮುರ್ತುಜಾ ಕಾಶಿ ಶರತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಹರೀಶ್ ಕುಲಕರ್ಣಿ ಸ್ವಾಗತಿಸಿದರು. ಜಿಲ್ಲಾ ಕಾರ್ಯಕಾರಿ ಸದಸ್ಯ ಪ್ರಸನ್ನ ದೇಸಾಯಿ ವಂದಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್ ನಿರ್ವಹಿಸಿದರು. ಸುದರ್ಶನ್ ವೈದ್ಯ ಪ್ರಾರ್ಥಿಸಿದರು. ಸಂಘದ ತಾಲೂಕ ಅಧ್ಯಕ್ಷ ಜೋಗದ ಕೃಷ್ಣ ನಾಯಕ. ಹಿರಿಯ ಪತ್ರಕರ್ತರಾದ ಕೃಷ್ಣ ವಿರುಪಾಪುರ .ವಿ.ಎಸ್ ಪಾಟೀಲ್ .ವೀರೇಶ್ ಇರಕಲ್. ಹನುಮೇಶ್ ಭಂಡಾರಿ. ರವಿ ಸಾಕ್ಷಿ ಚಂದ್ರು .ಮುಕ್ಕುಂದಿ. ಶಿವಪ್ಪ ನಾಯಕ. ದಿವಾಕರ್ ನಾಯಕ. ಸೇರದಂತೆ ಕಾರ್ಯನಿರಂತರ ಪತ್ರಕರ್ ಸಂಘದ ಪದಾಧಿಕಾರಿಗಳು ಸದಸ್ಯರು ಇದ್ದರು…

 


ವರದಿ.ಗಂಗಾವತಿ ತಾಲೂಕು ವರದಿಗಾರರು ಹೆಚ್ ಮಲ್ಲೇಶ್ವರ ಭಂಡಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;