;

ತಂದೆ ಹಾಗೂ ಹಿತೈಷಿಗಳ ಕನಸು ನನಸು..ಜನರ ಕನಸು-ನನಸಾಗಿಸುವ ದಾವಂತದಲ್ಲಿ_ಶಾಸಕ ಡಾ”ಎನ್.ಟಿ.ಶ್ರೀನಿವಾಸ್…!

ತಂದೆ ಹಾಗೂ ಹಿತೈಷಿಗಳ ಕನಸು ನನಸು..ಜನರ ಕನಸು-ನನಸಾಗಿಸುವ ದಾವಂತದಲ್ಲಿ_ಶಾಸಕ ಡಾ”ಎನ್.ಟಿ.ಶ್ರೀನಿವಾಸ್-ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಜನಪ್ರತಿನಿಧಿಯಾಗಿ ಸ್ಥಳೀಯರನ್ನು, ಆಯ್ಕೆ ಮಾಡಬೇಕೆಂಬ ಕ್ಷೇತ್ರದ ಜನರ ಧ್ವನಿಗೆ ಪ್ರತಿ ಧ್ವನಿಯಂತೆ. ಕ್ಷೇತ್ರದ ಶಾಸಕರಾಗಿ ಹೊರ ಹೊಮ್ಮಿದವರು, ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು. ಅವರು ತಮ್ಮ ತಂದೆಯವರಾದ ಹಾಗೂ ಕ್ಷೇತ್ರದ ಮಾಜಿ ಶಾಸಕರಾದ, ಎನ್.ಟಿ.ಬೊಮ್ಮಣ್ಣ ನವರು ಮಗ ವೈದ್ಯನಾಗುವ ಕನಸ ಕಂಡಿದ್ದರು. ಎನ್.ಟಿ.ಶ್ರೀನಿವಾಸರವರು ಕಠಿಣ ಪರಿಶ್ರದೊಂದಿಗೆ ಅಧ್ಯಯನ ಮಾಡಿ ವೈದ್ಯ ಪಧವಿ ತೇರ್ಗಡೆಯಾಗಿ, ಡಾ”ಎನ್.ಟಿ.ಶ್ರೀನಿವಾಸ್ ಎಂದಾಗಿದ್ದಾರೆ.
ತಾವು ವೈದ್ಯರಾಗೋ ಮೂಲಕ ತಂದೆಯ ಕನಸು ನನಸು ಮಾಡಿದ್ದಾರೆ. ನಂತರ ಅವರ ಹಿತೈಷಿಗಳ ಕನಸು ನನಸು ಮಾಡಲು, ಅವರ ಒತ್ತಾಸೆ ಹಾಗೂ ಕೂಡ್ಲಿಗಿ ಕ್ಷೇತ್ರದ ಜನರ ಧ್ವನಿಗೆ ಪ್ರತಿಧ್ವನಿಯಾಗಲು ಕ್ಷೇತ್ರಕ್ಕೆ ಬಂದರು. ಜನರ ಒತ್ತಾಸೆಯಂತೆ ಚುನಾವಣೆಯಲ್ಲಿ ಸ್ಪರ್ಧಿಸಿದರು, ಪ್ರತಿ ಸ್ಪರ್ಧಿಗಿಂತ 54 ಸಾವಿರಕ್ಕೂ ಅಧಿಕ ಹೆಚ್ಚುವರಿ ಮತಗಳನ್ನು ಪಡೆದರು. ಭಾರೀ ಬಹುಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು, ಈ ಮೂಲಕ ಶಾಸಕರಾಗಿ ಆಯ್ಕೆಯ‍ಾಗಿ ಹಿತೈಷಿಗಳ ಹಾಗೂ ಕ್ಷೇತ್ರೆ ಜನರ ಕನಸು ನನಸು ಮಾಡಿದರು ಶಾಸಕ ಡಾ”ಎನ್.ಟಿ.ಶ್ರೀನಿವಾಸರು.
ಈ ನಡಿವೆ ತಮ್ಮ ವೃತ್ತಿಧರ್ಮ ಮರೆಯದೇ..
ತಮ್ಮ ಪತ್ನಿಯವರಾದ ಡಾ”ಪುಷ್ಪ ರೊಡಗೂಡಿ ಸಹೋಧ್ಯೋಗಿಗಳ ನೆರವಿನೊಂದಿಗೆ. ನೂರಾರು ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮತ್ತು ಔಷಧಿ ಹಾಗೂ ಅಗತ್ಯ ಸಾಮಾಗ್ರಿ ವಿತರಣೆ ಶಿಬಿರಗಳನ್ನು, ಊಟ ಹಾಗೂ ಸುಸಜ್ಜಿತ ವ್ಯವಸ್ಥೆಯೊಂದಿಗೆ ಸ್ವಂತ ಕರ್ಚಿನಲ್ಲಿ ನಡೆಸಿದ್ದಾರೆ. ಈ ಮೂಲಕ ಕ್ಷೇತ್ರದ 25ಸಾವಿರಕ್ಕೂ ಅಧಿಕ ಜನರು, ಸಂಪೂರ್ಣವಾಗಿ ಅಂಧಃತ್ವ ಸಮಸ್ಯೆಯಿಂದ ಮುಕ್ತಿ ಹೊಂದಿದ್ದಾರೆ.
ಡಾ” ಶ್ರೀನಿವಾಸ ರವರು ಶಾಸಕರಾಗಿದ್ದರೂ ಕೂಡ, ಅವರು ಸದಾ ವೃತ್ತಿಧರ್ಮ ವೃತ್ತಿ ನಿಷ್ಠೆಯನ್ನು ತೋರಿತ್ತಿದ್ದಾರೆ.
ಅವರು ತಮ್ಮತ್ತ ಚಿಕಿತ್ಸೆಗೆಂದು ಬರುವ ಜನರಿಗೆ, ಎಂತಹದೇ ಒತ್ತಡದ ಸನ್ನಿವೇಶದಲ್ಲಿಯೂ ಕೂಡ ಕೂಡಲೇ ಸ್ಪಂಧಿಸುತ್ತಾರೆ ಡಾ ಶ್ರೀನಿವಾಸರವರು.
ಅಗತ್ಯ ಇರೋರಿಗೆ ಉಚಿತ ನೇತ್ರ ಚಿಕಿತ್ಸೆ ಹಾಗೂ ಔಷಧಿ,ಅಗತ್ಯ ಸಾಮಾಗ್ರಿಗಳನ್ನು ಉಚಿತವಾಗಿ ನೀಡೋ ಮೂಲಕಸೇವೆ ಮಾಡೋ ಮೂಲಕ ಸಾರ್ಥಕತೆ ಕಾಣುತ್ತಿದ್ದಾರೆ. ಇದು ಅವರ ವೈಶಿಷ್ಟ್ಯತೆಯ ಸಮಾಜ ಸೇವೆ ಹಾಗೂ ಜನಪರ ಕಾಳಜಿಗೆ ಸಾಕ್ಷಿಯಾಗಿದೆ, ಮತ್ತು ಅವರ ಸಮಾಜ ಸೇವೆಯ ಮಹಾತ್ವಕಾಂಕ್ಷೆಗೆ ನಿದರ್ಶನವಾಗಿದೆ.
ಈ ಕಾರಣದಿಂದಾಗಿ ಅವರ ಸ್ವಗ್ರಾಮದಲ್ಲಿನ ಅವರ ನಿವಾಸದಲ್ಲಿ, ನಿತ್ಯವೂ ಹತ್ತಾರು ಜನರು ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ, ಹಾಗೂ ಅಗತ್ಯ ನೆರವು ಅರಸಿ ಆಗಮಿಸಿರುತ್ತಾರೆ. ಡಾ”ಎನ್.ಟಿ.ಶ್ರೀನಿವಾಸರು ಕ್ಷೇತ್ರದಲ್ಲಿನ ಯಾವುದೇ ಭಾಗದಲ್ಲಿನ ಸಾರ್ವಜನಿಕರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಹಲವರು ಅಂತಿಮ ಕ್ಷಣದ ವರೆಗೆ ಕಾದಿದ್ದು ಸಂದರ್ಶಿಸಿ ಚಿಕಿತ್ಸೆ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಕೆಲ ಹೊತ್ತು ತಾವು ಶಾಸಕರು ಎಂಬ ಮನೋಭಾವದ ಗಿಲಿಟನ್ನೇ ಬಿಟ್ಟಾಕಿರುತ್ತಾರೆ, ಚಿಕಿತ್ಸೆಯನ್ನರಸಿ ಬಂದಿರುವ ಜನರ ಕಣ್ಣೀರು ಒರೆಸುವ ತವಕದಲ್ಲಿರುತ್ತಾರೆ.
ಇದು ಡಾ”ಎನ್.ಟಿ.ಶ್ರೀನಿವಾಸರವರ ಹಿರಿಮೆಗೆ ಹಾಗೂ ಸಹಿಷ್ಣುತೆಗೆ, ಜನಪರ ಕಾಳಜಿಗೆ ಮತ್ತು ವೈದ್ಯಕಿಯ ಸೇವೆಯ ಮೇಲಿಟ್ಟಿರುವ ಗೌರವಕ್ಕೆ ಸಾಕ್ಷಿಯಾಗಿದೆ. ಅವರು ಈ ಮೂಲಕ ತಮ್ಮ ತಂದೆ ಹಾಗೂ ಹಿತೈಷಿಗಳ, ಮಹಾತ್ವಾಕಾಂಕ್ಷೆಗಳನ್ನು ಈಡೇರಿಸಿದ್ದಕ್ಕೆ ನಿದರ್ಶನವಾಗಿದೆ.
ಇನ್ನು ಶಾಸಕರಾದ ಮೇಲೆ ಪ್ರತಿ ನಿತ್ಯವೂ ಸಹ ಸದಾ ಕಾರ್ಯನಿರತರಾಗಿದ್ದಾರೆ,
ಕ್ಷೇತ್ರದ ಮೂಲೆ ಮೂಲೆಗೆ ತಾವೇ ಸ್ವತಃ ತೆರಳಿ, ಅಲ್ಲಿಯ ಜನರ ನೈಜ್ಯ ಸ್ಥಿತಿ ಗತಿಗಳನ್ನು ಪ್ರತ್ಯಕ್ಷ ಕಂಡು, ಸಮಸ್ಯೆಗಳ ಪರಿಹರಿಸುವಲ್ಲಿ ಪ್ರಾಮಾಣಿಕತೆ ತೋರಿದ್ದಾರೆ. ಶಾಸಕರಾದಾಗಿನಿಂದ ನಿತ್ಯವೂ ಕಾರ್ಯನಿರತರಾಗಿದ್ದು,
ಜನರ ಕನಸುಗಳನ್ನು ನನಸು ಮಾಡುವ ದಾವಂತದಲ್ಲಿದ್ದಾರೆ.
*ಕ್ಷೇತ್ರದ ಜನರ ಚಿಕಿತ್ಸಾ ಸೇವೆಗೂ ಸೈ..ಸದನದಲ್ಲಿ ಸಮಸ್ಯೆಗಳ ವಿರುದ್ಧ ಸಮರಕ್ಕೂ ಸೈ…*-ಕೂಡ್ಲಿಗಿ ಕ್ಷೇತ್ರದ ಜನತೆಯ ಸುಕೃತ ಹೇಗಿದೆ ಎಂದರೆ..ಸದಾ ಜನ ಹಿತ ಬಯಸುವ ಶಾಸಕರು ವೈದ್ಯರಾಗಿದ್ದು, ಕೇವಲ ನೇತ್ರ ಚಿಕಿತ್ಸೆ ಯೊಂದನ್ನು ಮಾಡದೇ ಶಾಸಕರಾಗಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಚಿಕಿತ್ಸೆ ನೀಡೋ ದಾವಂತದಲ್ಲಿದ್ದಾರೆ. ಅದಕ್ಕಾಗಿ ಅವರು ಸದನದ ಅಂಗಳದಲ್ಲಿ, ಕ್ಷೇತ್ರದ ಜ್ವಲಂತ ಸಮಸ್ಯೆಗಳ ವಿರುದ್ಧ ಸಮರ ಸಾರಿದ್ದಾರೆ. ಕ್ಷೇತ್ರವನ್ನು ನಿರಂತದ ವಾಗಿ ಬಾಧಿಸುವ ಗಂಭೀರ ಸ್ವರೂಪದ ಸಮಸ್ಯೆಗಳಿಗೆ, ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ನೆರವು ಕೋರಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಮೂಲಕ ಕ್ಷೇತ್ರದ ಸಮಸ್ತ ಜನರ ಲೇಸನ್ನ ಬಯಸಿ, ಸಾಮಾನ್ಯರ ಅಸಮಾನ್ಯ ಕನಸುಗಳನ್ನು ನನಸಾಗಿಸುವಲ್ಲಿ ಡಾ”ಎನ್.ಟಿ.ಶ್ರೀನಿವಾಸ್ ರವರು ನಿಷ್ಠೆ ತೋರಿದ್ದಾರೆ.
ಇದು ಕೂಡ್ಲಿಗಿ ಕ್ಷೇತ್ರದ ಜನರು ಕಂಡ ಆದರ್ಶ ಶಾಸಕ ಹಾಗೂ ಜನರ ಕನಸುಗಳನ್ನು ನನಸು ಮಾಡುವಲ್ಲಿ, ಫಣ ತೊಟ್ಟು ಕ್ಷೇತ್ರದ ಸಮಸ್ತ ಜನರ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ. ಜನಸೇವೆಯೇ ಜನಾರ್ದನನ ಸೇವೆ ಎನ್ನುವ ಕನಸುಗಾರ ಶಾಸಕ, ಡಾಎನ್.ಟಿ.ಶ್ರೀನಿವಾಸರವರ ನೈಜ ಕನವರಿಕೆಯಾಗಿದೆ.

 

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend