;

ಎಸ್‌ಡಿಎಮ್‌ಸಿ ತಾಲ್ಲೂಕ ಘಟಕದ ಅಧ್ಯಕ್ಷರನ್ನಾಗಿ ಪ್ರತಾಪ್ ಛಲವಾದಿ ಉಪಾಧ್ಯಕ್ಷರಾಗಿ ಘಾಟಿನ ಹನುಮಂತ ಆಯ್ಕೆ…!!!

ಎಸ್‌ಡಿಎಮ್‌ಸಿ ತಾಲ್ಲೂಕ ಘಟಕದ ಅಧ್ಯಕ್ಷರನ್ನಾಗಿ ಪ್ರತಾಪ್ ಛಲವಾದಿ ಉಪಾಧ್ಯಕ್ಷರಾಗಿ ಘಾಟಿನ ಹನುಮಂತ ಆಯ್ಕೆ.

ಹರಪನಹಳ್ಳಿ:-ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ವೇದಿಕೆಯಿಂದ ಇಂದು ಹರಪನಹಳ್ಳಿ ತಾಲೂಕು ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ತಾಲೂಕು ಅಧ್ಯಕ್ಷರಾಗಿ ಪ್ರತಾಪ್ ಚಲವಾದಿ ಅವರನ್ನು ವಿಜಯನಗರ ಜಿಲ್ಲೆಯ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಉಪಾಧ್ಯಕ್ಷರಾಗಿರುವ ಗಿನ್ನಳ ರಾಘವೇಂದ್ರ ಅವರು ಅವಿರೋಧವಾಗಿ ಆಯ್ಕೆ ಮಾಡಿ ತಾಲೂಕ ಅಧ್ಯಕ್ಷರನ್ನ ಘೋಷಣೆ ಮಾಡಿದರು

ಪೂರ್ವಭಾವಿ ಸಭೆಯನ್ನು ಕರಯಲಾಗಿತ್ತು ಪಧಾದಿಕಾರಿಗಳನ್ನ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಶಾಲಾ ಅಭಿವೃದ್ಧಿ ಮೇಲುಸ್ತುವರಿ ಸಮನ್ವಯ ಸಮಿತಿ ವೇದಿಕೆಯ ಪದಾಧಿಕಾರಿಗಳನ್ನು ನೇಮಕ ಕುರಿತು ಸಭೆಯಲ್ಲಿ ಗುಣಾತ್ಮಕ ಶಾಲಾ ಶಿಕ್ಷ ಣ ಸಾರ್ವತ್ರೀಕರಣ ಪ್ರಕ್ರಿಯೆಯ ನಮ್ಮ ಈ ಪಯಣದಲ್ಲಿ ಅವರನ್ನು ಗಣನೆಗೆ ತೆಗೆದುಕೊಂಡು ಕರದೊಯ್ಯುವ ‘ಸಂಕಲ್ಪ’ ನಮ್ಮದಾಗಬೇಕು.ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ದೃಷ್ಟಿಯಿಂದ ನಮ್ಮ ಸಮುದಾಯವೆಂದರೆ ಅವಿದ್ಯಾವಂತ, ಅರೆವಿದ್ಯಾವಂತ, ಕಡುಬಡವ, ಕೂಲಿಕಾರರ ಸಮುದಾಯ. ಅವರಜೊತೆ ನಾವು ಹೊಂದಿಕೊಳ್ಳಲೇಬೇಕು. ಅವರನ್ನು ನಮ್ಮೊಂದಿಗೆ ಕೊಂಡೊಯ್ಯಲೇ ಬೇಕು ಇರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸುವ ಕೆಲಸವಾಗಬೇಕೆ ಹೊರತು ವಿದ್ಯಾವಂತ, ಹಣವಂತ ಮತ್ತು ನಯ-ನಾಜೂಕಿನ ಸಮುದಾಯಕ್ಕಾಗಿ ಪರಿತಪಿಸುತ್ತಾ ಕೂರುವುದು ಸರಿಯಲ್ಲ.ಎಂದು ವಿಜಯನಗರ ಜಿಲ್ಲೆಯ ಉಪಾಧ್ಯಕ್ಷರಾಗಿರುವ ಗಿನ್ನಾಳ ರಾಘವೇಂದ್ರ ಅವರು ಹೇಳಿದರು.

ಎಸ್‌ಡಿಎಮ್‌ಸಿಗಳು ಶಾಲೆಯ ಮಾಲಿಕತ್ವವನ್ನು ತಮ್ಮದನ್ನಾಗಿಸಿಕೊಂಡು ಶಾಲಾ ಆಡಳಿತ,ಅಭಿವೃದ್ಧಿ,ಕಲಿಕೆ ಮತ್ತು ಮಕ್ಕಳ ಸರ್ವತ್ತೋಮುಖ ಅಭಿವೃದ್ಧಿಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಮರುಸ್ಥಾಪಿಸಿ ಭರವಸೆ ಕಳೆದುಕೊಂಡಿರುವ ಸರಕಾರಿ ಶಾಲೆಗಳನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸಬೇಕು.

ಶ್ರೀ ಮತಿ.ಭಾಗ್ಯಮ್ಮ ಕೂಡ್ಲಿಗಿ ತಾಲೂಕಿನ ಎಸ್‌ಡಿಎಮ್‌ಸಿ ಅಧ್ಯಕ್ಷರು

ಈ ಸಂದರ್ಭದಲ್ಲಿ ಕೆ ಎಸ್ ಹರೀಶ್, ಕೆ ಎನ್ ರಾಜೇಶ್ವರಿ ಸಿ ಲಕ್ಷ್ಮೀದೇವಿ, ಟಿ ಬಾಗ್ಯ ಪರ್ವೀನ್ ಎಂ ಕಾಳಮ್ಮ, ಪಟ್ನಮಾದ ಬಸವರಾಜ, ಶಿರಹಟ್ಟಿ ಹನುಮಂತ ಕಿಂದ್ರೀ ಹಾಲೇಶ್, ಎಂ ಗೀತಾ, ಜಾಕಿರ್ ಹುಸೇನ್ ಬಿ ಖಾದರ್ ದಾದಾ ಖಲಂದರ್ ವಲಿ ಬಾಷಾ, ಇನ್ನು ಮುಂತಾದವರು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಛಲವಾದಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;