ಭೂಮಿ ನಮ್ಮದಲ್ಲ, ಮುಂದಿನ ಪೀಳಿಗೆಗೂ ಅತ್ಯವಶ್ಯಕ: ಶಿವಾನಂದ ಕಾಪಶಿ
ದಾವಣಗೆರೆ: ಭೂಮಿ ತಮಗಲ್ಲದೆ ಮುಂದಿನ ಪೀಳಿಗೆಗೂ ಅತ್ಯವಶ್ಯಕ, ಭೂಮಿ ಮೇಲೆ ಬದುಕಲು ಎಲ್ಲಾ ಜೀವಿಗಳಿಗೂ ಹಕ್ಕಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಸೋಮವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಲಿನ್ಯ ಮಂಡಳಿ ದಾವಣಗೆರೆ, ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಪ್ರಾದೇಶಿಕ ಕೇಂದ್ರ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ ಇವರ ಸಹಯೋಗದೊಂದಿಗೆ ಜರುಗಿದ ವಿಶ್ವ ಪರಿಸರ ದಿನ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು ಎಂಬ ಘೋಷಣೆಯೊಂದಿಗೆ, ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ, ನಮ್ಮ ಭೂಮಿಯಲ್ಲಿ ಜೀವ ವೈವಿಧ್ಯತೆ ದಿನದಿಂದ ದಿನಕ್ಕೆ ತೀರಾ ಕಡಿಮೆಯಾಗುತ್ತಿದ್ದು, ಮಾನವ ಸಂತತಿ ಹೆಚ್ಚುತ್ತಿದೆ. ಮಾನವ ನಿರ್ಮಿತ ವಸ್ತುಗಳನ್ನು ಬಳಸದೇ ನೈಸರ್ಗಿಕವಾಗಿ ಸಿಗುವಂತಹ ಸಂಪನ್ಮೂಲಗಳನ್ನು ಬಳಸಿ ಎಂದರು.
ಎರಡನೇ ಮಹಾಯುದ್ಧದ ನಂತರ ಪ್ರಾಣಿ, ಪಕ್ಷಿ, ಸೂಕ್ಷ್ಮಾಣು ಜೀವಿಗಳು ಕಣ್ಮರೆಯಾಗಿ, ಮನುಷ್ಯ ತನ್ನ ತನವನ್ನು ಮೇರೆಯುತ್ತಿದ್ದಾನೆ, ಇರುವುದೊಂದೆ ಭೂಮಿ ಎಲ್ಲಾರೂ ಗಿಡ ನೆಡುವುದರ ಮೂಲಕ ನಮ್ಮ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಡಿಎಲ್‍ಎಸ್‍ಎ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರಣ್ಣನವರು ಮಾತನಾಡಿ ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ. ಪ್ಲಾಸ್ಟಿಕ್ ಅನ್ನು ಬಳಸುವುದಕ್ಕೆ ಹಲವಾರು ಕಾನೂನು ನಿಯಮಗಳನ್ನು ಜಾರಿಗೆ ತಂದರೂ ಸಹ ಜನರು ಕಿವಿಗೊಡದೆ ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚು ಮಾಡುತ್ತಿದ್ದಾರೆ. ಯಾವುದಕ್ಕೆ ಪ್ಲಾಸ್ಟಿಕ್ ಅಗತ್ಯತೆ ಎನಿಸುತ್ತದೆ, ಅದಕ್ಕೆ ಸೀಮಿತವಾಗಿ ಬಳಸಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಆರ್. ತಿಪ್ಪೇಶಪ್ಪ ಮಾತನಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಲುವಾಗಿ ಈ ದಿನ 2.5 ಕಿ.ಮೀ ಜಾಥವನ್ನು ಕೈಗೊಳ್ಳಲಾಗಿದ್ದು, ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಗಿಡ ನೆಡುವ ಕಾರ್ಯ ಕೈಗೊಳ್ಳಿ. ವಿದ್ಯಾರ್ಥಿಗಳ ದೆಸೆಯಿಂದಲೂ ಪರಿಸರ ಸಂರಕ್ಷಣೆ ಆಗಬೇಕಿದೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಪರಿಸರ ಸಂಪನ್ಮೂಲಗಳನ್ನು ಬಳಸಿ ಅಳಿಸಬೇಡಿ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಹೆಚ್. ಲಕ್ಷ್ಮಿಕಾಂತ್, ಬಿ.ಐ.ಇ.ಟಿ. ಕಾಲೇಜಿನ ನಿರ್ದೇಶಕರಾದ ಪ್ರೋ.ವೈ. ವೃಷಬೇಂದ್ರಪ್ಪ, ಪ್ರಾಂಶುಪಾಲರಾದ ಎಚ್. ಬಿ. ಅರವಿಂದ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಸ್ ಸುರೇಶ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಎಚ್. ಅರುಣಕುಮಾರ ಹಾಗೂ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ಪ್ರಕಾಶ್, ದಾವಣಗೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
