;

ರಾಷ್ಟ್ರೀಯ ಉದ್ಯೋಗ ಖಾತರಿ ಕೂಲಿಕಾರರಿಂದ ಪರಿಸರ ದಿನಾಚರಣೆ…!!!

ರಾಷ್ಟ್ರೀಯ ಉದ್ಯೋಗ ಖಾತರಿ ಕೂಲಿಕಾರರಿಂದ ಪರಿಸರ ದಿನಾಚರಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದ ರಾಷ್ಟ್ರೀಯ ಉದ್ಯೋಗ ಖಾತರಿ ಕೂಲಿ ಕಾರ್ಮಿಕರಿಂದ, ಶಾಲಾ ಆವರಣ ಹಾಗೂ, ಶ್ರೀ ಮಲಿಯಮ್ಮ ದೇವಿ ದೇವಸ್ಥಾನದ ಸುತ್ತಮುತ್ತಲು, ಗಿಡಗಳನ್ನು ನೆಟ್ಟು, ಸಂಭ್ರಮಿಸಿ ಪರಿಸರ ದಿನಾಚರಣೆ ಆಚರಿಸಿದರು.

ನಂತರ ಮಾಜಿ ತಾಲೂಕ ಪಂಚಾಯಿತಿ ಸದಸ್ಯ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ರವರು ಮಾತನಾಡಿ. ಹಸಿರೇ ನಮ್ಮ ಉಸಿರು ಪರಿಸರವಿಲ್ಲದೆ ನಾವು ಜೀವಿಸಲು, ಸಾಧ್ಯವಿಲ್ಲ,
ಆದ್ದರಿಂದ ನಾವೆಲ್ಲರೂ ಪರಿಸರವನ್ನು ಗೌರವಿಸೋಣ ಮತ್ತು ರಕ್ಷಿಸೋಣ, ಹಾಗೂ ತಮ್ಮ ತಮ್ಮ ಮನೆಯ ಮುಂದೆ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟು ಪರಿಸರವನ್ನು ಇನ್ನಷ್ಟು, ರಕ್ಷಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈ ಶರಣೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ನಾಗರಾಜ್, ಮುಖಂಡರಾದ ಎ ರಾಜಣ್ಣ, ಜಿಎಸ್ ಪಾಪ ಮುತ್ತಿ, ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಕೂಲಿಕಾರರು ಮುಖಂಡರು ಕೂಲಿಕಾರರ ಜೊತೆಗೆ ಗಿಡವನ್ನು ನೆಟ್ಟರು…

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;