;

ಹಣ ನೀಡಲಿಲ್ಲವೆಂದು ಹೆರಿಗೆ ಮಾಡಿಸಲು ಮುಂದಾಗದ ವೈದ್ಯೆ,ತುಂಬು ಗರ್ಭಿಣಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಪೋಷಕರು ಈ ಒಂದು ಅಮಾನವೀಯ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ…!!!

ಹಣ ನೀಡಲಿಲ್ಲವೆಂದು ಹೆರಿಗೆ ಮಾಡಿಸಲು ಮುಂದಾಗದ ಇರುವುದರಿಂದ ತುಂಬು ಗರ್ಭಿಣಿಯನ್ನು ಆಟೋದಲ್ಲೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಅಮಾನವೀಯ ಘಟನೆಯೊಂದು ಸೋಮವಾರ ಚಳ್ಳಕೆರೆ ನಗರದಲ್ಲಿ ನಡೆದಿದೆ.‌‌‌‌ ಚಳ್ಳಕೆರೆ ನಗರದಿಂದ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಆಟೋದಲ್ಲಿ ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿರುವುದು
ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ,ದೇವರಹಳ್ಳಿ ಗ್ರಾಮದ ಸುಮರಾಣಿ(26) ಸೋಮವಾರ ಮಧ್ಯಹ್ನಾನ 2 ಗಂಟೆಸುಮಾರಿನಲ್ಲಿ ಸರಕಾರಿ ಹೆರಿಗೆ ವೈದ್ಯರಿಗೆ ಸೇರಿದ ಖಾಸಗಿ ಹೆರಿಗೆ ಆಸ್ಪತ್ರೆ ಎನ್ನಲಾದ ಆಸ್ಪತ್ರೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ತೋರಿಸಲು ಬಂದಿದ್ದಾರೆ.
ಇದು ಹೆರಿಗೆ ನೋವಾಗಿರುವುದರಿಂದ 38 ಸಾವಿರ ರೂ ಆಗುತ್ತದೆ ಹಣ ಕಟ್ಟಿದರೆ ಹೆರಿಗೆ ಮಾಡಿಸುವುದಾಗಿ ಪ್ರಸೂತಿ ಹಾಗೂ  ಸ್ತ್ರೀ  ರೋಗ ತಜ್ಞೆ ಡಾ.ಶಮಾಪರ್ವೀನ್ ತಿಳಿಸಿದರು. ಮೇಡಂ ನಮ್ಮ ಬಳಿ ಈಗ ಅಷ್ಟು ಹಣ ಇಲ್ಲ ಸರಕಾರಿ ಆಸ್ಪತ್ರೆಗೆ ಹೋಗುತ್ತೇವೆ ಎಂದು ಹೇಳಿ ನಗರದ ಸಾರ್ವಜನಿಕ ಹೆರಿಗೆ ಆಸ್ಪತ್ರೆಗೆ ಬಂದಾಗ ಅಲ್ಲಿನ ಆರೋಗ್ಯ ಸಹಾಯಕಿಯರು ವೈದ್ಯರಿಗೆ ದೂರವಾಣಿ ಕರೆ ಮಾಡಿ ಹರಿಗೆಗೆ ಬಂದಿದ್ದಾರೆ ಎಂದು ತಿಳಿಸಿದಾಗ ಅವರಿಗೆ ಹೆರಿಗೆ ಮಾಡಿಸಲು ಆಸ್ಪತ್ರೆಗೆ ಸೇರಿಸಿಕೊಳ್ಳ ಬೇಡಿ ಹಾಗೂ ಅಂಬ್ಯೂಲೆನ್ಸ್ ವಾಹನ ಸಹ ಮಾಡಿಕೊಡಬೇಡಿ ಎಂದು ತಿಳಿಸಿದರು.ಇತ್ತ ಹೆರಿಗೆ ನೋವು ಕಾಣಿಸಿಕೊಂಡಿದೆ ಚಳ್ಳಕೆರೆಯಿಂದ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಆಟೋದಲ್ಲೇ ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಗರ್ಭಿಣಿ ಪೋಷಕರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು.ಗರ್ಭಿಣಿ ತಾಯಿ ಬೋರಮ್ಮ ಮಾತನಾಡಿ ಪತ್ರಿ ತಿಂಗಳು ತಪಾಸಣೆಗೆ ಬಂದಾಗ 3 ರಿಂದ 4 ಸಾವಿರ ಬಿಲ್ ಮಾಡುತ್ತಿದ್ದಾರೆ ಇಂದು 8 ತಿಂಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಈ ದಿನ ಹೆರಿಗೆ ನೋವು ಬಂದಿದೆ ಎಂದು ವೈದ್ಯರ ಬಳಿ ಬಂದರೆ 38 ಸಾವಿರ ರೂ ನೀಡಿದರೆ ಮಾತ್ರ ಹೆರಿಗೆ ಮಾಡಿಸುತ್ತೇನೆ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಜಿಲ್ಲಾಸ್ಪತ್ರೆಗೆ ಆಟೋದಲ್ಲೇ ಹೆರಿಗೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು.ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಎಂದು ಹೇಳುತ್ತಾರೆ ಇಲ್ಲಿನವೈದ್ಯರು ಖಾಸಗಿ ಆಸ್ಪತ್ರೆಗಳನ್ನಿಟ್ಟುಕೊಂಡು ಹಣ ಮಾಡುತ್ತಿದ್ದಾರೆ ಒಂದು ಹೆರಿಗೆ ಆಗುವಷ್ಟರಲ್ಲಿ ಕನಿಷ್ಟ50ರಿಂದ 70 ಸಾವಿರ ಹಣ ಬೇಕು ಬಡವರು ,ಕೂಲಿ ಕಾರ್ಮಿಕರು ಸಾಲಸೂಲ ಮಾಡಿ ಹೆರಿಗೆ ಮಾಡಿಸುವ ಪರಿಸ್ಥಿತಿ ಬಂದಿದೆ ನಮ್ಮ ಮಗಳಿಗೆ ಆದ ಪರಿಸ್ಥಿತಿ ಮತ್ತೆ ಯಾರಿಗೂ ಆಗದಂತೆ ಸಂಬAಧಪಟ್ಟ ಅಧಿಕಾರಿಗಳು ನೋಡಿಕೊಳ್ಳ ಬೇಕಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸAಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಸರಕಾರಿ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಡಾ.ಶಮಾಪರ್ವೀನ್ ಪತ್ರಿಕೆ ಸಂಪರ್ಕಿಸಿದಾಗ ಜಿ.ದೇವರಹಳ್ಳಿ ಗ್ರಾಮದ ಸುಮರಾಣೀ ಮದುವೆಯಾಗಿ ಸುಮಾರು 10 ವರ್ಷಕಳೆದರೂ ಮಕ್ಕಳಾಗಿರಲಿಲ್ಲ ಒಮ್ಮೆ ಬಂದು ನಮ್ಮಬಳಿ ಸಲಹೆ ಕೇಳಿದರು ಆಗನಾನು ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪ್ರಾರಂಭಿಸಿದೆ ಚಿಕಿತ್ಸೆ ನೀಡಿದಾಗ ಗರ್ಭಿಣಿಯಾದರೂ ಈ ದಿನ ಹೊಟ್ಟೆನೋವು ಎಂದು ಬಂದಿದ್ದರೂ ಸರಕಾರಿ ಆಸ್ಪತ್ರೆಯಲ್ಲಿ ಈದಿನ ಅರವಳಿಕೆ ತಜ್ಞ ಡಾ. ಓಂಕಾರಮೂರ್ತಿ ರಜೆ ಇರುವುದರಿಂದ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದಿದ್ದೇನೆ ಆದರೆ ಸರಕಾರಿ ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳಬೇಡಿ, ಜಿಲ್ಲಾಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಕಳಿಸ ಬೇಡಿ ಎಂದು ಸಿಬ್ಬಂದಿಗೆ ಹೇಳಿಲ್ಲ ಅವರದೇ ಸ್ವಂತ ಆಟೋವಾಗಿರುವುದರಿಂದ 108 ಕ್ಕೆ ಕರೆಮಾಡದೆ ಹೋಗಿದ್ದಾರೆ. ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿಗಳು 108 ಕ್ಕೆ ಕರೆ ಮಾಡಿದ್ದಾರೆ ಬರುವಷ್ಟರಲ್ಲಿ ಅವರು ಆಟೋದಲ್ಲಿ ಹೋಗಿದ್ದರು ಎಂಬ ಮಾಹಿತಿಯನ್ನು ತಿಳಿಸಿದರು…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *