ಹೊಳಲ್ಕೆರೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಿಜೆಪಿ ಅಭ್ಯರ್ಥಿ ಎಂ ಚಂದ್ರಪ್ಪ..
ಹೊಳಲ್ಕೆರೆ ತಾಲೂಕಿನ ಹಾಲಿ ಬಿಜೆಪಿ ಶಾಸಕರಾಗಿರುವ ಎಂ . ಚಂದ್ರಪ್ಪನವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಇಂದು
ಚಂದ್ರಪ್ಪನವರು ಪಟ್ಟಣದ ಕೊಟ್ರೆ ನಂಜಪ್ಪ ಕಾಲೇಜು ಹತ್ತಿರ ಇರುವ ಬಿಜೆಪಿ ಕಛೇರಿ ಇಂದ ಸಹಸ್ರಾರು ಜನರೊಂದಿಗೆ ಸುಮಾರು ಒಂದು ಕಿಲೋ ಮೀಟರ್ ದೂರದ ವರೆಗೆ ಮೇರವಣಿಗೆ ಸಾಗಿದರು. ಈ ವೇಳೆಯಲ್ಲಿ ಅಭಿಮಾನಿಗಳು ಡೊಳ್ಳು ತಮಟೆಗಳನ್ನು ಬಾರಿಸುತ್ತ ಕ್ರೈನ್ ಮೂಲಕ ಬೃಹತ್ ಕಮಲದ ಹಾರವನ್ನು ಹಾಕಿ ಅಭಿವೃದ್ಧಿ ಹರಿಕಾರ ಚಂದ್ರಪ್ಪ ಅವರಿಗೆ ಬಾರಿ ಜಯಗೋಶ ಕೂಗಿದರು.. ತದ ನಂತರ ವಿಧಾನ ಪರಿಷತ್ ಸದಸ್ಯರಾದ ನವಿನ್ ಕುಮಾರ ಜೊತೆ ತಾಲೂಕು ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು..
ನಾಮ ಪತ್ರ ಸಲ್ಲಿಸಿ ಮಾತನಾಡಿದ ಅವರು ಚಿಕ್ಕ ಪಟ್ಟಣದಂತಿದ್ದ ಹೊಳಲ್ಕೆರೆ ಪಟ್ಟಣವನ್ನು ಹೊಸ ಕಟ್ಟಡ, ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಿ ಇಂದು ದೊಡ್ಡ ನಗರವನ್ನಾಗಿ ಅಭಿವೃದ್ಧಿ ಮಾಡಿದ್ದೇನೆ. ಇದಲ್ಲದೇ ತಾಲೂಕಿನಲ್ಲಿ ಕೆರೆಗಳನ್ನು ಕಟ್ಟಿ ಅಂತರ್ಜಲವನ್ನು ಹೆಚ್ಚಾಗುವಂತೆ ಮಾಡಿ ರೈತರ ಪಂಪ್ ಸೆಂಟ್ ಗಳಿಗೆ ೬ ಗಂಟೆ ಕರೆಂಟ್ ಕೊಡುವಂತ ವ್ಯವಸ್ಥೆ ಮಾಡಿದ್ದೇನೆ, ತಾಲೂಕಿನ ಎಲ್ಲ ಹಳ್ಳಿಗಳಲ್ಲೂ ಸುಸಜ್ಜಿತವಾದ ರಸ್ತೆ ಕುಡಿಯುವ ನೀರು ಕಲ್ಪಿಸಿ ಜನರಿಗೆ ಎಲ್ಲ ಸೌಲಭ್ಯ ನೀಡಿ ತಾಲೂಕನ್ನು ಮಾದರಿಯಾಗಿಸಿದ್ದೇನೆ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಇಂದು ಸಹಸ್ರಾರು ಸಂಖ್ಯೆಯಲ್ಲಿ ಜನರು ಬಂದು ನನಗೆ ಶಕ್ತಿ ನೀಡಿದ್ದಾರೆ.. ಮತ್ತೋಮ್ಮೆ ತಾಲೂಕಿನಲ್ಲಿ ಜನರು ಗೆಲ್ಲಿಸುವ ಭರವಸೆ ಇದೆ. ಗೆದ್ದು ತಾಲೂಕಿನಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇನೆ ಎಂದು ತಿಳಿಸಿದರು..
ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
