;

ಪ್ರಸನ್ನ ಗಣಪತಿ ದೇವಾಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರಕ್ಕಿಳಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಷಣ್ಮುಖಪ್ಪ…!!!

ಪ್ರಸನ್ನ ಗಣಪತಿ ದೇವಾಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರಕ್ಕಿಳಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಷಣ್ಮುಖಪ್ಪ..

ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸಿರುವ, ನಿವೃತ್ತ ಇಂಜಿನಿಯರ್ ಷಣ್ಮುಖಪ್ಪ , ಅವರಗೆ ಕಾಂಗ್ರೆಸ್ ಪಕ್ಷದ ಮುಖಂಡರು ಗುರುತಿಸಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದಾರೆ.

ಇದರಿಂದಾಗಿ ಇಂದು ಅಪಾರ ಬೆಂಬಲಿಗರು ಕಾರ್ಯಕರ್ತರೊಂದಿ ಹೊಳಲ್ಕೆರೆ ಪಟ್ಟಣಕ್ಕೆ ಆಗಮಿಸಿದ ಅವರು, ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಅವರು ಗೊಲ್ಲ ಜನಾಂಗವನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿದೆ, ರಾಜ್ಯದ ಕೆಪಿಸಿಸಿ ಅದ್ಯಕ್ಷರಾದ ಡಿ. ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರ್ಜೆವಾಲಾ, ರಾಹುಲ್ ಗಾಂಧಿ, ಹಾಗೂ ಎಐಸಿಸಿ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ದನ್ಯವಾದ ತಿಳಿಸಿದರು..

ಮುಂದು ವರೆದು ಮಾತನಾಡಿದ ಅವರು ನನ್ನ ಸ್ವಂತ ತಾಲೂಕು ಹೊಳಲ್ಕೆರೆ , ಆದ್ದರಿಂದ ಪ್ರಸನ್ನ ಗಣಪತಿ, ಗೌಡಿಹಳ್ಳಿ ತಿಮ್ಮಪ್ಪ, ದುಮ್ಮಿಗೊಲ್ಲರಹಟ್ಟಿ, ಜುಂಜಪ್ಪ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ಪಡೆದುಕೊಂಡಿದ್ದು, ವಿಘ್ನೇಶ್ವರ, ತಿಮ್ಮಪ್ಪ, ಜುಂಜಪ್ಪ ದೇವರ ದರ್ಶನದಿಂದ ನನಗೆ ಮತ್ತಷ್ಟು ಶಕ್ತಿಸಿಕ್ಕೆದೆ. ನಾನು ಕಳೆದ ಹಿಂದಿನ ದಿನಗಳಲ್ಲಿ ಪ್ರಚಾರಕ್ಕೆ ಹೋದಲ್ಲೇಲ್ಲ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಬಿಜೆಪಿಯ ಬೆಲೆಏರಿಕೆಯಿಂದಾಗಿ ನಮ್ಮ ಜೀವನ ಅದೋಗತಿಗೆ ಹೋಗುತ್ತಿದೆ ಈ ಸಲ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಎಲ್ಲ ಕಡೆ ಬರವಸೆ ಕೊಟ್ಟಿದ್ದಾರೆ.. ನಮ್ಮ ಮಾವ ಸಿದ್ದರಾಮಪ್ಪ ಅವರು ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿ ಜನರ ಸೇವೆಗಾಗಿ ಹಗಲಿರುಳು ಎನ್ನದೇ ಶ್ರಮಿಸುತ್ತಿದ್ದರು. ಅವರನ್ನು ನೋಡಿ ನಾವು ಸಹ ಜನರ ಸೇವೆ ಮಾಡಬೇಕೆಂದು ಮುಂದೆ ಬಂದಿದ್ದೇನೆ. ನಾಳೆಯಿಂದ ಕಾರ್ಯಕರ್ತರೊಂದಿಗೆ ಸೇರಿ ಅಬ್ಬರದ ಪ್ರಚಾರ ನಡೆಸಲಿದ್ದೇನೆ ಹೀಗಾಗಿ ಇಲ್ಲಿನ ನಮ್ಮ ಯಾದವ ಸಮಾಜದ ಮುಖಂಡರುಗಳು ಹಾಗೂ ನನ್ನ ಅಭಿಮಾನಿಗಳೆಲ್ಲಾ ತುಮಕೂರಿಗೆ ಬಂದು ನನ್ನ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು..

ಈ ಸಂದರ್ಭದಲ್ಲಿ ಚಿರ್ತದುರ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯದ್ಯಕ್ಷರಾದ ಹಾಲೇಶ್ , ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಆದ ಎ. ಚಿತ್ತಪ್ಪ ಯಾದವ್, ಮೋಹನ್ ರಾಜ್, ಆವಿನಹಟ್ಟಿಯ ನಾಗರಾಜಪ್ಪ, ಇನ್ನು ಅನೇಕ ಕಾರ್ಯಕರ್ತರು, ಅಭಿಮಾನಿಗಳು ಮುಖಂಡರುಗಳಿದ್ದರು….

ವರದಿ. ಸುರೇಶ್, ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend