;

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನೂರು ಜನ ಮುಖಂಡರು…!!!

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನೂರು ಜನ ಮುಖಂಡರು..

ಹೊಳಲ್ಕೆರೆ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹೆಚ್.ಆಂಜನೇಯ ಅವರ ಸರಳತೆ, ಸಜ್ಜನತೆ ಮತ್ತು ಸರ್ವ ಸಮುದಾಯಗಳ ಮೇಲೆ ಹೊಂದಿರುವ ಸಹೋದರ ಭಾವನೆಗೆ ಮನಸೋತು ಪಟ್ಟಣದ ಯಾದವ ಸಮಾಜದ ಮುಖಂಡರಾದ ಕೆ.ಸಿ.ಪುರುಷೋತ್ತಮ್, ಅವರು ಇಂದು ತಮ್ಮ ಅಪಾರ ಸಂಖ್ಯೆಯ ವಿವಿಧ ಗ್ರಾಮಗಳ, ವಿವಿಧ ಸಮುದಾಯಗಳ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಆಂಜನೇಯ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಟಿ.ಹನುಮಂತಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಹೊಳಲ್ಕೆರೆ ಟೌನ್, ಶಿವಗಂಗಾ, ಹಳೇಹಳ್ಳಿ ಗೊಲ್ಲರಹಟ್ಟಿ, ಶಿವಪುರ, ಚಿತ್ರಳ್ಳಿ ಗೊಲ್ಲರಹಟ್ಟಿ, ಅಮೃತಾಪುರ, ಈಚಘಟ್ಟ, ಕಾಶೀಪುರ, ಚಿಕ್ಕಂದವಾಡಿ, ಅರಸಿನಘಟ್ಟ, ಬಿಜೆನಾಳ್, ನುಲೇನೂರು, ಬಂಜಗೊಂಡನಹಳ್ಳಿ, ದಗ್ಗೆ, ಪಂಪಾಪುರ, ನಗರಘಟ್ಟ ಮುಂತಾದ ಗ್ರಾಮಗಳ ನೂರಾರು ಮುಖಂಡರು ಕಾರ್ಯಕರ್ತರು ಇಂದು ನಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು…

ವರದಿ. ಸುರೇಶ್ ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;