ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ.. ವತಿಯಿಂದ ದಿನಾಂಕ 10.04.2023 ರಂದು ರಾಜಕೀಯ ರಹಿತ ಬಡವರ ಸೇವೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಲಾಗಿತ್ತು ಈ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ತಾಲೂಕು ಘಟಕವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ ಪತ್ರವನ್ನು ಜಿಲ್ಲಾಧ್ಯಕ್ಷರು ಅಗ್ರಹಾರ ಮೋಹನ್ ರವರು ಸೈಯದ್ ಹಿದಯತುಲ್ಲಾ ರವರಿಗೆ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಪತ್ರವನ್ನು ಸಭೆಯಲ್ಲಿ ನೀಡಿದರು , ಸಭೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಸೈಯದ್ ಹಿದಾಯತುಲ್ಲಾ ಮತ್ತು ತಹಸೀನ ರವರಿಂದ ಬಡವರಿಗೆ ದಿನಸಿ ಪದಾರ್ಥಗಳ ಚೀಲ ಗಳನ್ನು ವಿತರಣೆ ಮಾಡಿದರು.
ಜಿಲ್ಲಾ ಅಧ್ಯಕ್ಷರು ಅಗ್ರಹಾರ ಮೋಹನ್ ಮಾತನಾಡುತ್ತಾ ಬಾಗೇಪಲ್ಲಿ ತಾಲೂಕು ಘಟಕದಿಂದ ಜಿಲ್ಲಾ ಘಟಕಕ್ಕೆ ಪದಾತಿಗಾರಿಗಳನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಕರವೇ ಸ್ವಾಭಿಮಾನಿ ಬಣ ವತಿಯಿಂದ ಕನ್ನಡಿಗರ ಪರಧ್ವನಿ ಮುಂಚೋಣಿಯಲ್ಲಿ ಸ್ವಾಭಿಮಾನಿ ಬಣ ಇರುತ್ತದೆ ಬಡವರಿಗೆ ದಿನಸಿ ಪದಾರ್ಥಗಳನ್ನು ಹಂಚುವ ಮೂಲಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೂಡ ಕನ್ನಡಿಗರ ಪರವಾಗಿರುತ್ತದೆ ಎಂದು ಹೇಳಿದರು
ತಾಲೂಕು ಅಧ್ಯಕ್ಷರು ಬಿ ಟಿ ಸಿ ಸೀನ ಮಾತನಾಡುತ್ತಾ ಕರವೇ ಸ್ವಾಭಿಮಾನಿ ಬಣದಲ್ಲಿ ಜಾತಿ ಭೇದ ಭಾವ ಇಲ್ಲದೆ ಕನ್ನಡಿಗರ ಪರವಾಗಿ ಸದಾ ಹೋರಾಟಗಳನ್ನು ಮಾಡುತ್ತಾ ಬಂದಿರುವ ಸಂಘಟನೆ ಕರವೇ ಸ್ವಾಭಿಮಾನಿ ಬಣ ಎಂದು ಹೇಳಿದರು
ತಾಲೂಕು ಪ್ರಧಾನ ಕಾರ್ಯದರ್ಶಿ ಜಬಿವುಲ್ಲಾ ಮಾತನಾಡುತ್ತಾ ಬಾಗೇಪಲ್ಲಿ ಪಟ್ಟಣದಲ್ಲಿ ಎಷ್ಟೋ ಜನ ಶ್ರೀಮಂತರು ಇದ್ದಾರೆ, ಬಡ ಜನರಿಗೆ ಸೇವೆ ಮಾಡಲು ದೇವರು ಕೆಲವರಿಗೆ ಮನಸ್ಸು ಕೊಡಲ್ಲ ಆದರೆ ಒಬ್ಬ ಕಟ್ಟಡ ಕಾರ್ಮಿಕ ತಾನು ಸಂಪಾದನೆ ಮಾಡಿರುವ ಹಣದಲ್ಲಿ ಒಂದಿಷ್ಟು ಹಣವನ್ನು ಬಡವರಿಗೆ ಮೀಸಲಿಟ್ಟು ಬಡವರಿಗೆ ರಂಜಾನ್ ತಿಂಗಳದಲ್ಲಿ ಹಬ್ಬವನ್ನು ಆಚರಣೆ ಮಾಡಲು ದಿನಸಿ ಕಿಟ್ಗಳನ್ನು ಹಂಚಿಕೆ ಮಾಡಿ ಮಾನವೀಯತೆಯನ್ನು ಮೆರೆದಿರುವ ಹಿದಾಯತುಲ್ಲಾ ಮತ್ತು ತಹಸೀನ್ ಕುಟುಂಬ ಸದಸ್ಯರ ಸಹಕಾರದೊಂದಿಗೆ ಇರುತ್ತದೆ ಇದು ರಾಜಕೀಯ ರಹಿತ ಕಾರ್ಯಕ್ರಮ ಚುನಾವಣೆ ಸಮಯ ಇರುವುದರಿಂದ ಯಾವ ರಾಜಕಾರಣಿಗಳು ಶಾಮಿಯನ ಕುರ್ಚಿಗಳು ಇಲ್ಲದೆ ಮನೆ ಒಳಗಡೆ ಸರಳವಾಗಿ ಕಾರ್ಯಕ್ರಮವನ್ನು ನಡೆಸಲಾಗಿದೆ ಈ ಕಾರ್ಯಕ್ರಮ ಉದ್ದೇಶ ಬಡವರು ಅಸಕ್ತರು ರಂಜಾನ್ ಹಬ್ಬದ ದಿನ ಸಂತೋಷದಿಂದ ಆಚರಣೆ ಮಾಡಲು ಸ್ವಲ್ಪ ಸಹಾಯವಾಗುತ್ತದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದರು…

ವರದಿ. ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
