ಶಾಸಕನಾಗಿ ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸ ಮಂತ್ರಿ ಆದವರು ಮಾಡಿಲ್ಲ..
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ತಾಳ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೊಮ್ಮನಕಟ್ಟೆ, ಲೋಕದೊಳಲು, ತಿರುಮಲಾಪುರ, ಗುಡ್ಡದ ಸಾಂತೇನಹಳ್ಳಿ, ಆವಿನಹಟ್ಟಿ ಮತ್ತು ಎನ್ ಜಿ ಹಳ್ಳಿ, ಗೊಲ್ಲರಹಳ್ಳಿ ಉಗಣೆಕಟ್ಟೆ ಈ ಗ್ರಾಮಗಳಲ್ಲಿ ಎಂ ಚಂದ್ರಪ್ಪನವರು ಇಂದು ಬಿರುಸಿನ ಪ್ರಚಾರ ಮಾಡಿದರು, ಪ್ರಚಾರ ಮಾಡಿ ಮಾತನಾಡಿದ ಅವರು ಹೊಳಲ್ಕೆರೆ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷ ದುಡಿದಿದ್ದು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಭರ್ಜರಿ ಅಭಿವೃದ್ಧಿ ಪರ್ವ ನಡೆಯಲಿದೆ. ಆಂಜನೇಯನವರು ಗೆಲ್ಲುವುದೇ ಗ್ಯಾರಂಟಿ ಇಲ್ಲ ಇನ್ನು ಗ್ಯಾರಂಟಿ ಕಾರ್ಡ್ ವರ್ಕ್ ಆಗಲ್ಲ. ನಾನು ಬರಿ ಶಾಸಕನಾಗಿ ಕ್ಷೇತ್ರದಲ್ಲಿ ಭರ್ಜರಿ ಅಭಿವೃದ್ಧಿ ಮಾಡಿದ್ದೇನೆ, ಆಂಜನೇಯ ಮಂತ್ರಿ ಆದರೂ ನಾನು ಮಾಡಿದಷ್ಟು ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಬಿಜೆಪಿ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತಗಳನ್ನ ನೀಡಿ ಮತ್ತೊಮ್ಮೆ ಅಭಿವೃದ್ದಿಗಾಗಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು..

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಶ್ರೀ ಆರ್.ಎ. ಅಶೋಕ್, ಪುರಸಭೆ ಸದಸ್ಯರುಗಳಾದ ಶ್ರೀ ರಾಜಪ್ಪ, ಆವಿನಹಟ್ಟಿ ಕುಮಾರ್ . ರಘುನಾಥ್, ಶ್ರೀ ಮುರುಗೇಶ್, ಶ್ರೀ ಬಸಯ್ಯ, ಶ್ರೀ ದಾಸಯ್ಯನಹಟ್ಟಿ ರಮೇಶ್, ಶ್ರೀ ಡಾ. ಉಮಾಪತಿ, ಶ್ರೀ ಡಿ.ಸಿ. ಮೋಹನ್, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಊರಿನ ಹಿರಿಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು…
ವರದಿ, ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
