;

ಇಟ್ಟಿಗಿಯಲ್ಲಿ ಅದ್ಧೂರಿಯಾಗಿ ನಡೆದ ಶ್ರೀ ಆಂಜನೇಯಸ್ವಾಮಿ ರಥೋತ್ಸವ…!!!

ಇಟ್ಟಿಗಿಯಲ್ಲಿ ಅದ್ಧೂರಿಯಾಗಿ ನಡೆದ ಶ್ರೀ ಆಂಜನೇಯಸ್ವಾಮಿ ರಥೋತ್ಸವ.

ವಿಜಯನಗರ ಜಿಲ್ಲೆ ಹೂವಿನ ಹಡಗ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ, ಗ್ರಾಮದ ಆರಾಧ್ಯ ದೈವವಾದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯಿತು.ರಥೋತ್ಸವ ನಿಮಿತ್ತ ಆಂಜನೇಯ ಸ್ವಾಮಿಗೆ ವಿಷೇಶವಾಗಿ ಹೂವಿನ & ರಜತ (ಬೆಳ್ಳಿಯ)ಕವಚದ ಅಲಂಕಾರದಿಂದ ಸ್ವಾಮಿಯನ್ನು ಸಿಂಗರಿಸಲಾಗಿತ್ತು.ರಥೋತ್ಸವದ ನಿಮಿತ್ತ ಸ್ವಾಮಿ ವಿವೇಕಾನಂದ ರಕ್ತ ನಿಧಿ ಹಗರಿಬೊಮ್ಮನಹಳ್ಳಿ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇಟ್ಟಿಗಿ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ಶಿಬಿರದಲ್ಲಿ ಸುಮಾರು 25 ಜನ ಇಟ್ಟಿಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ರಕ್ತದಾನ ಮಾಡಿದರು.ರಕ್ತದಾನವನ್ನು ನೀವು ನಿಯಮಿತವಾಗಿ ರಕ್ತದಾನ ಮಾಡಿದರೆ, ದೇಹದಲ್ಲಿ ಕಬ್ಬಿಣದ ಮಟ್ಟವು ನಿಯಂತ್ರಣದಲ್ಲಿರುತ್ತದೆ. ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವು ರಕ್ತನಾಳಗಳನ್ನು ನಿರ್ಬಂಧಿಸಬಹುದು. ಇದರಿಂದ ರಕ್ತ ಪರಿಚಲನೆ ದುರ್ಬಲಗೊಂಡು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ನಂತರ ಹಿಮೋಕ್ರೊಮಾಟೋಸಿಸ್ (ಕಬ್ಬಿಣದ ಮಿತಿಮೀರಿದ) ಎಂಬ ರೋಗಕ್ಕೆ ಕಾರಣವಾಗುತ್ತದೆ. ರಕ್ತದಾನ ಮಾಡುವುದರಿಂದ ಹೃದ್ರೋಗವನ್ನು ಕಡಿಮೆ ಮಾಡಬಹುದು. ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇಟ್ಟಿಗಿ & ಸ್ವಾಮಿ ವಿವೇಕಾನಂದ ರಕ್ತ ನಿಧಿ ಸಿಬ್ಬಂದಿಗಳು ರಕ್ತದಾನಿಗಳಿಗಳಿಗೆ ಮಾಹಿತಿ ನೀಡಿದರು. ಸಂಜೆಯೊತ್ತಿಗೆ ಶುರುವಾದ ರಥೋತ್ಸವದ ಸ್ವಾಮಿಯ ಪಟಾಕ್ಷಿ ಹರಾಜು ಕಾರ್ಯದಲ್ಲಿ ಪಟಾಕ್ಷಿಯನ್ನು ಕೊಂಗನಹೊಸೂರು ಬಸವರಾಜಪ್ಪ 1,01001(ಒಂದು ಲಕ್ಷದ ಒಂದು ಸಾವಿರದ ಒಂದು ರೂಪಾಯಿಗಳಿಗೆ) ಕೂಗಿ ಶ್ರೀ ಆಂಜನೇಯ ಸ್ವಾಮಿಯ ಪಟಾಕ್ಷಿಯನ್ನು ತಮ್ಮದಾಗಿಸಿಕೊಂಡರು.

ನಂತರ ಭಕ್ತರೆಲ್ಲರು ರಥೋತ್ಸವವನ್ನು ಹರ್ಷದಿಂದ ಎಳೆದು ಪಾದಗಟ್ಟೆ ತಲುಪಿಸಿ ನಂತರ ಸ್ವಸ್ಥಾನಕ್ಕೆ ಹಿಂದಿರುಗಿಸಿ ಚಪ್ಪಾಳೆ ಹೊಡೆದು ಖುಷಿಪಟ್ಟರು.ಈ ಒಂದು ಊರಿನ ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಕ್ತದಾನಿಗಳಿಗೂ ಹಾಗೂ ಆಸ್ಪತ್ರೆ ಸಿಬ್ಬಂದಿ & ಸ್ವಾಮಿ ವಿವೇಕಾನಂದ ರಕ್ತನಿಧಿ ಹಗರಿಬೊಮ್ಮನಹಳ್ಳಿ ಸಿಬ್ಬಂದಿಗಳಿಗೂ ಮತ್ತು ಇಷ್ಟೆಲ್ಲ ಕಾರ್ಯಕ್ರಮಗಳು ಸುಗಮವಾಗಿ ನಡೆಯಲು ಭದ್ರತೆ ಒದಗಿಸಿದ ಪೋಲಿಸ್ ಸಿಬ್ಬಂದಿಗಳಿಗೂ,ಹಾಗೂ ಸಕಲ ವಾದ್ಯ ವೃಂದದವರಿಗೂ ಮತ್ತು ಸಮಸ್ತ ಭಕ್ತರಿಗೆಲ್ಲ ಆಂಜನೇಯ ಸ್ವಾಮಿ ಆಯಸ್ಸು, ಆರೋಗ್ಯ,ಧನ-ಕನಕ.ಸುಖ-ಸಮೃದ್ದಿಯ ಮಳೆ- ಬೆಳೆ ಕೊಟ್ಟು ಕಾಪಡಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;