ಕೂಡ್ಲಿಗಿ : ಬೇತೆಲ್ ಚರ್ಚ್ ನಲ್ಲಿ ಗುಡ್ ಫ್ರೈಡೇ ಆಚರಣೆ
ಕೂಡ್ಲಿಗಿ: ಜೀಸಸ್ ಕ್ರೈಸ್ಟ್ ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿ, ಜಗದ ಜನರ ಪ್ರೀತಿ ಮತ್ತು ಸಹಾನಭೂತಿಯ ಸಂದೇಶವನ್ನು ನೀಡಿದ್ದಾರೆ ಎಂದು ರೆವೆರೆಂಡ್ ಶ್ರೀನಿವಾಸ್ ಪಾಸ್ಟರ್ ಹೆನ್ರಿಬಾ ಹೇಳಿದರು. ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಬೇತೇಲ್ ಚರ್ಚ ಮಿನಿಸ್ಟ್ರೀಸ್‌ನ ಸಭಾಂಗಣದಲ್ಲಿ ಶುಕ್ರವಾರ ನಡೆದ ಗುಡ್ ಪ್ರೈಡೆ ಆಚರಣೆಯಲ್ಲಿ ಮಾತನಾಡಿದರು. ಅಂದಿನ ಧಾರ್ಮಿಕ ಮೂಲಭೂತವಾದಿಗಳು ರೋಮನ್ ಆಡಳಿತಗಾರನಿಗೆ ದೂರು ನೀಡಿ ಯೇಸು ವನ್ನು ಶಿಲುಬೆಯಲ್ಲಿ ನೇಣು ಹಾಕಿದರು. ಇದೇ ಕಾರಣಕ್ಕೆ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇರುವವರು ಈ ಶುಕ್ರವಾರವನ್ನು ಶುಭ ಎಂದು ಕರೆಯದೇ ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಈ ಘಟನೆಯ ಮೂರು ದಿನಗಳ ನಂತರ ಅಂದರೆ ಈಸ್ಟರ್ ಭಾನುವಾರದದಂದು ಜೀಸಸ್ ಪುನರುತ್ಥಾನಗೊಂಡರು ಎಂದು ನಂಬಿದ್ದೇವೆ ಎಂದರು. ಇಂದಿನ ದಿನವನ್ನು ಜೀಸಸ್‌ನ ತ್ಯಾಗವನ್ನು ನೆನಪಿಸಿಕೊಳ್ಳಲಾಗುತ್ತದೆ. ಕಪ್ಪು ಬಟ್ಟೆಗಳನ್ನು ಧರಿಸಿ ಕರ್ತನಾದ ಯೇಸುವಿನ ತ್ಯಾಗಕ್ಕಾಗಿ ಶೋಕಿಸುತ್ತೇವೆ. ಇಂದು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಯೇಸುವಿನ ಪ್ರಾರ್ಥಿಸುತ್ತೇವೆ. ಯಾವುದೇ ಕಾರಣಕ್ಕೂ ಚರ್ಚ ಮಂದಿರದಲ್ಲಿ ಗಂಟೆಯನ್ನು ಮೊಳಗಿಸುವುದಿಲ್ಲ ಎಂದರು. ಸತ್ಯ ಮತ್ತು ನಂಬಿಕೆಯ ಮಾರ್ಗವನ್ನು ಅನುಸರಿಸಲು ಜನರು ಜೀವನದುದ್ದಕ್ಕೂ ಸತತ ಪ್ರಯತ್ನವನ್ನು ಮಾಡಬೇಕು ಎಂದರು. ಉಪವಾಸದ ನಂತರ ಸಿಹಿ ತಿನಿಸು ಮಾಡಿ ಜನರಿಗೆ ಉಣ ಬಡಿಸಲಾಗುತ್ತದೆ. ಅಲ್ಲದೆ, ಪವಿತ್ರವೆನಿಸಿದ ದಾನ, ಧರ್ಮಗಳ ಕಾರ್ಯವನ್ನು ನೆರವೇರಿಸಲಾಗುತ್ತದೆ ಎಂದರು. ಮುನ್ನ ಯೇಸುವಿನ ಸಿಲುಬೆಗೇರಿಸಿದ ದೃಷ್ಟಾಂತವನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ವಿವಿಧ ಗ್ರಾಮಗಳ ಮೂಲಕ ಆಗಮಿಸಿದ ಯೇಸುವಿನ ಭಕ್ತರು ಪ್ರಾರ್ಥಿಸಿದರು. ವೇದಿಕೆಯಲ್ಲಿ ಹಿರೇ ಹೆಗ್ಡಾಳ್ ಮಹೇಶ್, ಕರಿಯಪ್ಪ, ಲಕ್ಷ್ಮಣ, ದೇವರಾಜ್, ಬೋಸ್‌ರಾಜ್, ಆನಂದ್, ಮಾರೇಶ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
