ಸ್ಥಳೀಯರಿಗೆ ಟಿಕೆಟ್ ನೀಡಿ: ಯೂತ್ ಕಾಂಗ್ರೆಸ್
ಮಹಾಲಿಂಗಪುರ: ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು ಆಕಾಂಕ್ಷಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದು ತೇರದಾಳ ಮತಕ್ಷೇತ್ರದಲ್ಲಿ ಈಗ ಸ್ಥಳೀಯರಿಗೆ ಟಿಕೇಟ ಕೊಡಬೇಕು ಎಂಬ ಕೂಗು ನೀರಂತರವಾಗಿ ಕೇಳಿ ಬರುತ್ತಿದೆ. ಅದೇ ರೀತಿ ರವಿವಾರ ಸಾಯಂಕಾಲ ಮಹಾಲಿಂಗಪುರದಲ್ಲಿ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟಿಸಿ ಸ್ಥಳೀಯ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಮತ್ತು ಕಳೆದ ಅಭ್ಯರ್ಥಿ ಕಾರ್ಯಕರ್ತರಿಗೆ ಸಿಗಲು ಅನಾನುಕೂಲ ಆಗುತ್ತಿದೆ ಎಂದು ಆರೋಪಿಸಿ ಪಕ್ಷದ ಹೈಕಮಾಂಡ್ ಸ್ಥಳೀಯರಿಗೆ ಮಣೆ ಹಾಕಬೇಕು ಎಂದು ಆಗ್ರಹಿಸಿದರು. ಪಕ್ಷದ ಸ್ಥಳೀಯ ಯಾವುದೇ ಆಕಾಂಕ್ಷಿಗೆ ಟಿಕೆಟ್ ನೀಡಿದರು ಎಲ್ಲರೂ ಒಪ್ಪಿ ಪಕ್ಷ ಸಂಘಟನೆ ಮಾಡಿ ಅಭ್ಯರ್ಥಿಯನ್ನು ಆರಿಸಿ ತರುವುದಾಗಿ ಹೇಳಿದರು. ಈಗಾಗಲೇ ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವ ಭರವಸೆಯಲ್ಲಿ ಪ್ರಚಾರ ನಡೆಸಿರುವ ಹಲವರಾದ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಡಾ॥ ಎ ಆರ್ ಬೆಳಗಲಿ, ಡಾ॥ ಎಮ್ ಎಸ್ ದಡ್ಡೆನವರ, ಡಾ॥ ಪದ್ಮಜೀತ ನಾಡಗೌಡ,ಕಾಂಗ್ರೆಸನ ಯುವ ಮುಖಂಡ ಸಿದ್ದು ಕೊಣ್ಣುರ ಪರ
ಸ್ಥಳೀಯರಿಗೆ ಟಿಕೇಟ ಕೊಡಬೇಕು ಎಂದು ಘೋಷಿಣೆ ಕೂಗಿ ಯೂತ್ ಕಾಂಗ್ರೆಸ್ ಸದಸ್ಯರು ಆಕ್ರೋಶ ಹೊರ ಹಾಕಿದರು. ಇದೆ ಸಂದರ್ಭದಲ್ಲಿ ಯೂತ್ ಕಾಂಗ್ರೆಸನ ಅರುಣ ಗಾಣಿಗೇರ,ವಿಜಯ್ ರೆಡ್ಡಿ,ದಾನಪ್ಪ ಹಳ್ಳೂರ್,ಸಹಜಾನ್ ಗದ್ಯಾಳ್,ಉಬೇದ ಮುಲ್ಲಾ ಮತ್ತು ಯೂತ್ ಕಾಂಗ್ರೆಸನ ಕಾರ್ಯಕರ್ತರು ಉಪಸ್ಥಿರಿದ್ದರು.
*ಸ್ಥಳೀಯರಿಗೆ ಟಿಕೆಟ್ ನೀಡುವುದರಿಂದ ಸ್ಥಳೀಯರಿಗೆ ಅನಕೂಲ*
ತೇರದಾಳ ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ನೀಡದೆ ಇರುವುದರಿಂದ ಸ್ಥಳೀಯ ಆಕಾಂಕ್ಷಿಗಳಿಗೆ ಸರಿಯಾಗಿ ಸಿಗಬೇಕಾದ ನ್ಯಾಯ ಸಿಗುತಾಯಿಲ್ಲ ಆದ್ದರಿಂದ ಯೂತ್ ಕಾಂಗ್ರೆಸನ ಕಾರ್ಯಕರ್ತರ ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ಎಂಬ ಕೂಗು. ಪಕ್ಷದ ಹಿರಿಯರಿಗೆ ವರಿಷ್ಠರಿಗೆ ಮನವಿ ಮಾಡಿ ಸ್ಥಳೀಯ ಆಕಾಂಕ್ಷಿಗೆ ಮಣೆ ಹಾಕಬೇಕು ಎಂದು ಆಗ್ರಹಿಸುತ್ತೆವೆ. ಒಂದುವೇಳೆ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೆ ಆದರೆ ಪಕ್ಷ ಅಧಿಕಾರಕ್ಕೆ ತರಲು ಸಾಧ್ಯ ಎಂದು ಹೇಳಿದರು. ಯಶವಂತ ಮಂಗರಿ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ತೇರದಾಳ ಮತ ಕ್ಷೇತ್ರ.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
