ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಣೆ ಮಾಡಿದ ರಾಜ್ಯ ಸಹ ಸಂಚಾಲಕ ಅರುಣ್ ಕುಮಾರ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮದಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಸಹ ಸಂಚಾಲಕ ಸಿ ಅರುಣ್ ಕುಮಾರ್ ರವರಿಂದ, ನಿಜವಾದ ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಣೆ ಮಾಡಲಾಯಿತು.
ನಂತರ ರಾಜ್ಯ ಸಹ ಸಂಚಾಲಕ ಸಿ ಅರುಣ್ ಕುಮಾರ್ ಮಾತನಾಡಿ ಈಗಾಗಲೇ ತಾಲೂಕಿನ ಜುಮ್ಮೋಬನಹಳ್ಳಿ ಕೊಂಬೆಹಳ್ಳಿ ರಾಮಸಾಗರ ಹಟ್ಟಿ ಮಾಕನಹಳ್ಳಿ ಗ್ರಾಮದ ಸಿಸಿ ರಸ್ತೆ, ಪೈಂಟರ್, ಎಲೆಕ್ಟ್ರಾನಿಕ್, ಹಾಗೂ ರೇಶನ್ ವರ್ಕರ್ಗಳಿಗೆ ಕಟ್ಟಡ ಕಾರ್ಮಿಕರಿಗೆ 18 ಜನರಿಗೆ ಲೇಬರ್ ಕಾರ್ಡ್ಗಳನ್ನು ವಿತರಣೆ ಮಾಡಲಾಗಿದೆ, ಲೇಬರ್ ಕಾಡಿನಲ್ಲಿ ಸಾಕಷ್ಟು ಯೋಜನೆಗಳಿದ್ದಾವೆ, ಕಟ್ಟಡ ಕಾರ್ಮಿಕರು ಆ ಯೋಜನೆಗಳನ್ನು ಪಡೆದುಕೊಳ್ಳಬೇಕು, ಈ ಹಿಂದೆ ನೋಂದಣಿ ಗೊಂಡಿರುವ ಕಟ್ಟಡ ಕಟ್ಟಡ ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು ಇನ್ನು ಅನೇಕ ಸೌಲಭ್ಯಗಳಿದ್ದು ಕಟ್ಟಡ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಮೇಶನ್ ಕೆ ಟಿ ನಾಗರಾಜ್, ಸಿ ಓ ಕರಿಬಸಪ್ಪ, ಎಸ್ ಸಿ ತಿಪ್ಪೇಶ್, ಶಿವಕುಮಾರ, ಮೀನ್ಗೆರೆ ನಾಗರಾಜ್, ತಿಪ್ಪೇಸ್ವಾಮಿ, ಓಬಣ್ಣ ಇನ್ನು ಅನೇಕ ಮುಖಂಡರು ಕಾರ್ಮಿಕರು ಇದ್ದರು.

ವರದಿ : ಅಜಯ್ ಸಿ ಓ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
