ಒಳ ಮೀಸಲಾತಿ ವಿರೋಧಿಸಿ ಮೀಸಲಾತಿ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ
ನ್ಯಾ ಸದಾಶಿವ ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಹಾರಕನಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೊಲಂಭೋ ಸಮಾಜದಿಂದ ಇಂದು ಹರಪನಹಳ್ಳಿ ತಾಲೂಕಿನ ಹಾರಕಾನಳು ದೊಡ್ಡ ತಾಂಡದ ಹೊಳಲು ರಸ್ತೆಗೆ ಸುಮಾರು ಎರಡು ಗಂಟೆಗಳ ಕಾಲ ರಸ್ತೆ
ಬಂದ್ ಮಾಡಿ ಬಿಸಲನ್ನೆ ಲೆಕ್ಕಿಸದೆ ಸೇವಾಲಾಲ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡ ಸಂಜುನಾಯ್ಕ್ ಮಾತನಾಡಿ
25 ಮಾರ್ಚ್ 2023 ರಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ವರ್ಗಿಕರಣ (ಒಳ ಮೀಸಲಾತಿ) ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಭಾರತದ ಸಂವಿಧಾನ ಮತ್ತು ಕಾನೂನನ್ನು ಗಾಳಿ ತೂರಲಾಗಿದೆ. ಈ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪ್ರಕ್ರಿಯೆಯನ್ನು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ (ರಿ) ರಾಜ್ಯ ಸಮಿತಿ ತೀರ್ವವಾಗಿ ವಿರೋದಿಸುತ್ತದೆ. “ನ್ಯಾ ಸದಾಶಿವ ಆಯೋಗದ ವರದಿಯನ್ನು ಒಪ್ಪಿರುವುದಿಲ್ಲ” ಎನ್ನುತ್ತಲೇ ಸದರಿ ವರದಿಯನ್ನು ಆಧಾರಿಸಿ ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳಾಗಿ ವಿಭಜಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿರುವುದು ನ್ಯಾಯ ಸಮ್ಮತವಾಗಿಲ್ಲ. ನಾಡಿನ ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ ಮತ್ತಿತರ ಸಮುದಾಯಗಳು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತೇವೆ.
ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂಕೋರ್ಟ್ ನ ತೀರ್ಪಿಗೆ ವಿರುದ್ದವಾದ “ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳನ್ನಾಗಿ ವರ್ಗೀಕರಿಸಿ ಒಳಮೀಸಲಾತಿ ಹಂಚಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವುದನ್ನು ತಡೆಹಿಡಿಯಬೇಕು.
ಒಳ ಮೀಸಲಾತಿಯೇ ಅಸಂವಿಧಾನಿಕ ಆಗಿರುವಾಗ ಗುಂಪು-೩ ಹೆಸರಿನಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಕೂಡ ಅವೈಜ್ಞಾನಿಕ. ಇದು ಭಾರತದ ಸಂವಿಧಾನ ಮತ್ತು ನಮ್ಮ ಸಮುದಾಯಗಳಿಗೆ ಮಾಡಿದ ಮಹಾದ್ರೋಹವಾಗಿದೆ. ನಮ್ಮ ಹಿಂದುಳಿದಿರುವಿಕೆಯನ್ನು ಮತ್ತು ಜನಸಂಖ್ಯೆಯನ್ನು ಪರಿಗಣಿಸದೆ ಶೇಕಡಾ 4.5 ಪ್ರಮಾಣದ ಮೀಸಲಾತಿ ಹಂಚಿಕೆಯನ್ನು ನಮ್ಮ ಸಮುದಾಯಗಳು ಸ್ವಾಗತಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು
ಹಾರಕನಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಗ್ಯ ಅಶೋಕ್ ಮಾತನಾಡಿ
ಸಹೋದರ ಸಮುದಾಯಗಳ ಕುರಿತು ವಸ್ತುನಿಷ್ಠ ಅಧ್ಯಯನ ಮಾಡಿರುವುದಿಲ್ಲ. ಈ ಉಪ ಸಮಿತಿಯ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಐಕ್ಯತೆ ಹಾಳು ಮಾಡಲು “ಸ್ಪಶ್ಯರು, ಅಸ್ಪೃಶ್ಯರು, ಎಲ್ಲಾ ಸೌಲಭ್ಯ ಪಡೆದವರು, ಮುಂದುವರೆದವರು, ಅಭಿವೃದ್ಧಿ ಆಗಿರುವವರು, ಎಡಗೈ, ಬಲಗೈ, ಸಂವಿಧಾನದ ಅರ್ಟಿಕಲ್ 341(2), 341(3) ಪ್ರಸ್ತಾಪ, ಇತ್ಯಾದಿ ಗಳನ್ನು ಅನಗತ್ಯ ಅಂಶಗಳನ್ನು ಪ್ರಸ್ತಾಪಿಸುವ ಮೂಲಕ ವಿಭಜಿಸಲಾಗಿದೆ. ಹೀಗೆ ಅಸಂವಿಧಾನಿಕ, ಅವಾಸ್ತವಿಕ ಅಂಶಗಳ ಮುಖಾಂತರ ಪರಿಶಿಷ್ಟ ಸಹೋದರ ಸಮುದಾಯಗಳ ನಡುವಿನ ಐಕ್ಯತೆಯನ್ನು ಛಿದ್ರಗೊಳಿಸುವ ಈ ಉಪ ಸಮಿತಿಯ ವರದಿಯನ್ನು ತಿರಸ್ಕರಿಸಲು ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಿದರು.

ಹರಿಶ್ಚಂದ್ರ ನಾಯಕ್ ಮಾತನಾಡಿ
ಮೊನ್ನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆ ಹಿಂಪಡೆಯಬೇಕು.ತಾಲೂಕಿನ ಎಲ್ಲಾ ಕೊಲಂಭೋ ಸಮುದಾಯದಿಂದ ವಿಧಾನಸಭೆ ಚುನಾವಣೆ ಸಂಪೂರ್ಣ ಬಹಿಷ್ಕರಿಸಲು ನಾನು ಮುಂದಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು..
ಹಾರಕಾನಳು ಗ್ರಾಮ ಪಂಚಾಯತಿ ಪಿಡಿಓ ಚಂದ್ರನಾಯ್ಕ ಮುಖಂತರ ತಹಶಿಲ್ದಾರ ಅವರಿಗೆ ಮನವಿ ಮಾಡಲಾಯಿತು.ಪಿಎಸ್ಐ ಶಾಂತಮೂರ್ತಿ
ಈ ಸಂದರ್ಭದಲ್ಲಿ ವಿರ್ಯಾನಾಯ್ಕ,ಶಿವಾನಾಯ್ಕ ನಿಂಗನಾಯಕ್ ಡಿಜೆ ಮಾತನಾಡಿದರು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಾವಿತ್ರಿ ಶಶಿಕುಮಾರ್ ನಾಯಕ್, ಕೊಟ್ರೆಶ್ ನಾಯಕ್,ಕೃಷ್ಣ ನಾಯಕ್ ಶಶಿ ಪೂಜಾರಿ ಯಮುನ ನಾಯ್ಕ ಲಾಲು ನಾಯ್ಕ ಪುಟ್ಟನಾಯ್ಕ ರಾಮಾನಾಯ್ಕ ಪರಮೇಶ್ ಹೇಮಂತ್ ನಾಗರಾಜ್ ನಾಯ್ಕ್ ಸಂತೋಷ್ ನಾಯ್ಕ್ ಸುತ್ತಮುತ್ತಲಿನ ಗ್ರಾಮದಿಂದ ನೂರಾರು ಪ್ರತಿಭಟನೆಕಾರರು ಭಾಗಿಯಾಗಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
