ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಜಿ ಕುಮಾರ ಗೌಡ ರವರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದb ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೇತೃತ್ವದಲ್ಲಿ ಹೊಸಹಳ್ಳಿ ಕುಮಾರಸ್ವಾಮಿ ಗೊಬ್ಬರದ ಅಂಗಡಿ ಕಾಂಪೌಂಡ್ ಆವರಣದಲ್ಲಿ ಕೀಲು,ಮೂಳೆ ಶ್ರೀ ರೋಗ ಪ್ರಸೂತಿ ಶಿಬಿರ ಉಚಿತ ವಾಗಿ ಏರ್ಪಡಿಸಲಾಯಿತು. ಈ ಆರೋಗ್ಯ ಶಿಬಿರದಲ್ಲಿ ಕೀಲು ಮೂಳೆ ನೋವು, ಕುತ್ತಿಗೆ ನೋವು ಆಂಗ್ಲ ನೋವು,
ಕೈ ಕಾಲು, ಜೋಮು,
ಮೂಳೆ ಮುರಿದಿರುವ ನೋವುಗಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ 650 ಜನರಿಗೆ ಉಚಿತ ಚಿಕಿತ್ಸೆ ಚಿಕಿತ್ಸೆ ನೀಡಿ ಔಷಧ ವಿತರಿಸಲಾಯಿತು
ನಂತರ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಕೆ ಜಿ ಕುಮಾರ ಗೌಡ್ರು ಮಾತಾನಾಡಿ ಪ್ರತಿಯೊಬ್ಬ ವ್ಯಕ್ತಿಯ ಅರೋಗ್ಯ ಮುಖ್ಯ ಹಾಗಾಗಿ ಮಹಿಳೆಯರಿಗೆ ಮುಖ್ಯವಾಗಿ ಅರೋಗ್ಯ ದ ಕಡೆ ಗಮನ ಹರಿಸಿ ನಮ್ಮ ಅಂಗಡಿಯ ಅವರಣದಲ್ಲಿ ಉಚಿತವಾಗಿ ಅರೋಗ್ಯ ಶಿಬಿರವನ್ನು ಅಂಮ್ಮಿಕೊಂಡಿದ್ದು ಈ ಶಿಬಿರದಲ್ಲಿ ವೈದ್ಯದಾಕಾರಿಗಳು, ಔಷದ ವಿತರಿಸುತ್ತಾರೆ, ವೈದ್ಯಾಧಿಕಾರಿಗಳು ಸಲಹೆ ನೀಡಿದೆ ಹಾಗೆ ಔಷಧಿಗಳನ್ನು ಉಪಯೋಗಿಸಿ ಆರೋಗ್ಯದ ಕಡೆ ಗಮನ ಕೊಡಬೇಕೆಂದು ತಿಳಿಸಿದರು..
ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಸಿ ಎ, ಮಾತನಾಡಿ ನಮ್ಮ ದೇಹದಲ್ಲಿ ಮುಖ್ಯವಾಗಿ ಆರೋಗ್ಯದ ಕಡೆ ಗಮನಹರಿಸಬೇಕು, ಅತಿ ಹೆಚ್ಚು ಮುಖ್ಯವಾಗಿ ಮಹಿಳೆಯರ ಆರೋಗ್ಯದ ಕಡೆ ಗಮನಹರಿಸಿ, ಈಗಾಗಲೇ ನಮ್ಮ ಅಧ್ಯಕ್ಷರು ತಿಳಿಸಿದ ಹಾಗೆ ವೈದ್ಯಾಧಿಕಾರಿಗಳು ನೀಡಿರುವ ಔಷಧಿಗಳನ್ನು ಉಪಯೋಗಿಸಿ ಎಂದು ಹೇಳಿದರು.
ಈ ಆರೋಗ್ಯ ಶಿಬಿರದಲ್ಲಿ ಪ್ರಗತಿ ಕ್ಲಿನಿಕ್ ಡಾಕ್ಟರ್ ನಿಯಾಜ್ ಮತ್ತು ಡಾಕ್ಟರ್ ಈರ್ಷಾದ್ ಹಾಗು ಚಿತ್ರದುರ್ಗ ಡಾಕ್ಟರ್ ರವಿ ರಂಗಾರಡ್ಡಿ ಹಾಗು ಡಾಕ್ಟರ್ ಚೈತ್ರ DGO ಸಿಬ್ಬಂದಿ ವರ್ಗ ಉಪಸ್ಥಿತಿ ಇದಗದರು.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
