;

ಹಿರಿಯ ಪತ್ರಕರ್ತ ರಾದ ಮೆಹಬೂಬ್ ಮುನವಳ್ಳಿ ಕುರಿತಾದ ಪ್ರಕರಣಕ್ಕೆ ನ್ಯಾಯವನ್ನು ಒದಗಿಸುವ ಸಲುವಾಗಿ ಸರ್ಕಾರಕ್ಕೆ ತಹಸೀಲ್ದಾರ್ ರವರಿಗೆ ಮನವಿ…!!”

ಇಂದು ಬೆಳಿಗ್ಗೆ ೧೦-೩೦ ಕ್ಕೆ ಹಿರಿಯ ಪತ್ರಕರ್ತ ರಾದ ಮೆಹಬೂಬ್ ಮುನವಳ್ಳಿ ಕುರಿತಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ‌ಧ್ವನಿ ಸಂಘಟನೆಯ ಪದಾಧಿಕಾರಿಗಳು ಅವರ ಬಿಡುಗಡೆ ಕೋರಿ ಹಗರಿಬೊಮ್ಮನಹಳ್ಳಿ ತಹಶಿಲ್ದಾರರಿಗೆ
ಮನವಿಪತ್ರ ಸಲ್ಲಿಸಿದೆವು.ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ
ಅಧ್ಯಕ್ಷರಾದ ಎಂ.ಶಿವಮೂರ್ತಿ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ‌ಪತ್ರಕರ್ತರ ಮೇಲೆ ದರ್ಪ,ದೌರ್ಜನ್ಯ ಗಳು ಹೆಚ್ಛಾಗುತ್ತಿದ್ದು ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ.ಪತ್ರಕರ್ತರ ರಕ್ಷಣೆಗೆ ಸುಪ್ರೀಂಕೋರ್ಟ್ ನ ಸ್ಪಷ್ಟ
ಸೂಚನೆ ಇದ್ದರೂ ಕೂಡ ಸರಕಾರಗಳು, ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಖಂಡಿಸಿದರು. ಈ ಸಂದರ್ಭದಲ್ಲಿ, ಕಾ.ನಿ.ಪ.ಧ್ವನಿಯ ತಾ.ಘಟಕದ ಉಪಾಧ್ಯಕ್ಷರಾದ ಶಿವಶಂಕರ ಸ್ವಾಮಿ, ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ, ಸಂಚಾಲಕರಾದ ಎಂ.ಮಂಜುನಾಥ್, ಖಜಾಂಚಿ, ಧನಂಜಯ ಆಚಾರ್ ಉಪಸ್ಥಿತಿತರಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;