;

ಎಂ ಬಿ ಅಯ್ಯನಹಳ್ಳಿಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶಾರದಾ ಪೂಜೆ ಮಾಡುವುದರಮುಕಾಂತರ ಬೀಳ್ಕೊಡುಗೆ ಸಮಾರಂಭ ಆಚರಣೆ…!!!

ಬೀಳ್ಕೊಡುಗೆ ಸಮಾರಂಭ / ಶಾರದಾ ಪೂಜೆ
ದಿನಾಂಕ :10-03-2023 ರಂದು ಸರ್ಕಾರಿ ಪ್ರೌಢಶಾಲೆ ಎಂ ಬಿ ಅಯ್ಯನಹಳ್ಳಿ ಕೂಡ್ಲಿಗಿ ತಾ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶಾರದಾ ಪೂಜೆ ಮಾಡುವುದರಮುಕಾಂತರ ಬೀಳ್ಕೊಡುಗೆ ಸಮಾರಂಭ ನಡೆಯಿತು.ಸಮಾರಂಭದಲ್ಲಿ ಮಾತನಾಡಿದ ವರ್ಗ ಶಿಕ್ಷಕರಾದ ಶ್ರೀ ಈರಣ್ಣ ವಿ ಇವರು ” ಓದು ಬರಹ ಲೆಕ್ಕ ಕಲಿತರೆ, ಆಗುವುದು ಬಾಳು ಚೊಕ್ಕ ” ಎಂಬ ಮಾತನ್ನು ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಟ್ಟುಕೊಂಡು , ಕೈಹಿಡಿದು ನಡೆಸುವ ತಂದೆ-ತಾಯಿ ಹಾಗು ಗುರುಗಳ ಮಾರ್ಗದರ್ಶನದಂತೆ ಮುನ್ನಡೆಯಬೇಕು ಎ೦ದು ಕರೆಯಿತ್ತರು.


ಅದೇ ರೀತಿ ಶ್ರೀಮತಿ ತೇಜೇಶ್ವರಿ K ಆಂಗ್ಲ ಶಿಕ್ಷಕಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಜೀವನ ಉಜ್ವಲವಾಗಲಿ ಎ೦ದು ಹರಿಸಿದರು.
ಕನ್ನಡ ಶಿಕ್ಷಕರಾದ ಶ್ರೀ ಬಸವರಾಜಪ್ಪ ಮಾತನಾಡಿ ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಹಾಗೂ ದೇಶಕ್ಕೆ ಕೀರ್ತಿ ತನ್ನಿರಿ ಎ೦ದು ಹಾರೈಸಿದರು.


ಸಮಾರಂಭದ ಅಧ್ಯಕ್ಷತೆ. ಶ್ರೀ ಹೆಚ್ ಎ ಮಂಜುನಾಥ ಮುಖ್ಯ ಗುರುಗಳು ಮಾತನಾಡಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಪಿಸಿಕೊಂಡು ಶಾಲೆಗೆ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ ಎ೦ದು ಕರೆಯಿತ್ತರು.

ಹಾಗೂ ವಿದ್ಯೆ ಎಂಬುದು ಹುಲಿ ಹಾಲು ಇದ್ದಂತೆ ಅದನ್ನು ಕುಡಿದವರು ನಿಜವಾಗಿಯೂ ಘರ್ಜಿಸಲೇ ಬೇಕು ಏಕೆಂದರೆ ಈ ಒಂದು ಶಾಲೆಯಲ್ಲಿ ಕಲಿತ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಲವಾರು ರಂಗದಲ್ಲಿ ತಮ್ಮ ಒಂದು ಪ್ರತಿಭೆಗಳನ್ನು ತೋರಿದ್ದಾರೆ, ನೀವು ಸಹ ಅವರಂತೆ ಮುಂದುವರೆಯಿರಿ ಎನ್ನುವುದೇ ನಮ್ಮ ಒಂದು ಆಶಯ ಎನ್ನುವುದರ ಜೊತೆಗೆ ನಮ್ಮ ಒಂದು ಸರ್ಕಾರಿ ಶಾಲೆಯಲ್ಲಿ ಎಲ್ಲಾ ರೀತಿಯ ಸವಲತ್ತು ಇರುವುದು ತಮಗೆಲ್ಲ ಗೊತ್ತು ಅದನ್ನು ಸದುಪಯೋಗಪಡೆದುಕೊಳ್ಳಿ ಎನ್ನುತ್ತಾ ತಮ್ಮ ಒಂದು ಅನಿಸಿಕೆಗಳನ್ನು ಶಿಕ್ಷಕವೃಂದ ವಿದ್ಯಾರ್ಥಿಗಳಿಗೆ ತಮ್ಮ ಒಂದು ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ನಿಮ್ಮ ಗ್ರಾಮದ ಪ್ರತಿಭಾವಂತ ಪತ್ರಿಕಾ, ಸಂಪಾದಕರಾದ, ಎಚ್ಚರಿಕೆ, ಎನ್, ಮಂಜುನಾಥ್ ಎನ್ನುವ ಹೆಸರನ್ನೇ ಬಿರುದನ್ನು ಪಡೆದವರು ಇದೆ ಶಾಲೆಯಲ್ಲಿ ಅತೀ ಕಡು ಬಡತದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಇಂದು ರಾಜಧಾನಿಯ ಮಟ್ಟದಲ್ಲಿ ಹೆಸರು ಮಾಡಿರುವವರು ಅವರಂತೆ ಮತ್ತು ಇನ್ನಿತರರ ಒಂದು ಮಾರ್ಗದರ್ಶನದಲ್ಲಿ ನೀವು ನಡೆದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನುಡಿದರು.

ಪ್ರಾರ್ಥನೆ -ಶ್ರೀಮತಿ ಗಾಯತ್ರಿ B ಹಿಂದಿ ಶಿಕ್ಷಕಿ. ನಿರೂಪಣೆ – ಶ್ರೀ ಬಸವೇಶ್ವರ ದೈಹಿಕ ಶಿಕ್ಷಣ ಶಿಕ್ಷಕರು.ವೇದಿಕೆಯಲ್ಲಿ ಗಣಿತ ಶಿಕ್ಷಕರಾದ ಶ್ರೀ ತಿಮ್ಮೇಶ G ಅತಿಥಿ ಶಿಕ್ಷಕಿಯಾದ ಶ್ರೀಮತಿ ಭವ್ಯ ಉಪಸ್ತಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;