ವಿಜಯ ನಗರ ಜಿಲ್ಲೆಯ ಹೆಮ್ಮೆಯ ಕವಿಯತ್ರಿ ಅಂಜಲಿ ಬೆಳಗಲ್
ವಿಜಯನಗರ ಜಿಲ್ಲಾ ಹೊಸಪೇಟೆ ಈ ಒಂದು ಪುಸ್ತಕದಲ್ಲಿ ನಮ್ಮ ಕರ್ನಾಟಕದ ವಿಜಯ ನಗರ ಜಿಲ್ಲೆಯ ಹೆಮ್ಮೆಯ ಕವಿಯತ್ರಿ ಅಂಜಲಿ ಬೆಳಗಲ್ ಅವರು ಬರೆದ ಕವನ ಬಾಬ ಸಾಹೇಬ್ ,ಹಾಗು ಆದಿವಾಸಿ ಅಲೆಮಾರಿ ಜನಾಂಗದ ಬಗ್ಗೆ ಬರೆದ ಜರೂರತ್ ಹೈ ತೇರಾ ಹಾಗು ಆಜ್ ಐಸಾ ದಿನ್ ದೇಖಾಹೈ ಎಂಬ ಕವಿತೆಗಳು ಪ್ರಕಟವಾಗಿದ್ದು ತುಂಬಾ ಹೆಮ್ಮೆಯ ವಿಷಯ ಸುಮಾರು ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಅಂಜಲಿ ಬೆಳಗಲ್ ಕನ್ನಡ ಸಾಹಿತ್ಯವನ್ನು ದೇಶದೆಲ್ಲೆಡೆ ಅವರ ಬರಹಗಳ ಮೂಲಕ ಕನ್ನಡ ಸಾಹಿತ್ಯವನ್ನು ಪಸರಿಸಿದ್ದಾರೆ
ಮಹಾರಾಷ್ಟ್ರ ದ ಖ್ಯಾತ ಲೇಖಕಿ ಹಾಗು ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನದ ಅದ್ಯಕ್ಷರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆದ ಪತ್ರಕರ್ತೆ ಲೇಖಕಿ ಶ್ರಿಮತಿ ಉಷಾರಾಣಿ ಅತ್ರಾಮ್ ಇವರು ಬರೆದ ಭಾರತದ ಖ್ಯಾತ ಲೇಖಕರ ಕವನಗಳನ್ನು ಗೊಂಡವಾನ ದರ್ಶನ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ
ಹಾಗು ಬೇರೆ ಬೇರೆ ರಾಜ್ಯದ ಹಿರಿಯ ಲೇಖಕರ ಸಂಪರ್ಕಲ್ಲಿರುವ ಇವರು ಜಮ್ಮೂ ಕಶ್ಮೀರ್ ನ ಹೆಸರಾಂತ ಲೇಖಕರು ಹಾಗು (All India DD Durdarshan Joint Director )ದೆಹಲಿ ದೂರದರ್ಶನದ ನಿವೃತ್ತ ನಿರ್ದೇಶಕರು ಆದ ಡಾ, ರಫೀಕ್ ಮಸೂದಿ ಅವರ ಬರೆದ ಮೈ ಪೇನ್ ಮೈ ಅಫೇಕ್ಷನ್ ಎನ್ನುವ ಕೃತಿಯನ್ನು ಕನ್ನಡದಲ್ಲಿ ಅನುವಾದ ಮಾಡಲು ಅಂಜಲಿ ಬೆಳಗಲ್ ಅವರಿಗೆ ನೀಡಿದಾರೆ ಇಂತಹ ಹೆಮ್ಮೆಯ ಕವಿಯತ್ರಿ ನಮ್ಮ ನಡುವೆ ಇರುವುದು ತುಂಬಾ ಸಂತಸದ ವಿಷಯ,
ಮಹಾರಾಷ್ಟ್ರ ದ ಪರ್ತಕರ್ತೆ ಲೇಖಕಿ ಉಷಾರಾಣಿ ಅತ್ರಾಮ್, ಹಾಗು ಓಡಿಶಾದ ಲೇಖಕ ಅನುಜ್ ಪ್ರದಾನ್ ಹಾಗು ಜಾರ್ಖಾಂಡ್ ನ ಲೇಖಕಿ ಸುಮಂಗಲಾ ಹಾಗು ಗುಜರಾತ್ ನ ಖ್ಯಾತ ಲೇಖಕಿ ಹೊರಾಟಗಾರ್ತಿ ಮೀರಾ ,ಜಪಾನ್ ನ ಖ್ಯಾತ ಲೇಖಕಿ ಸಾವೊಲಿಂಬೊ ತಮಿಳು ನಾಡಿನ ಖ್ಯಾತ ಲೇಖಕ ಡಾ, ಸುಂದರಂ ಮುರುಗನ್ ಹಾಗು ಆಂದ್ರ ಪ್ರದೇಶದ ಜಾಯಿಂಟ್ ಸೆಕ್ರೆಟರಿ ಆಗಿದ್ದ ಖ್ಯಾತ ಲೇಖಕಿ ಜೊಪಾಕ ಸುಭದ್ರಾ ಮತ್ತು ಹೊರಾಟಗಾರ್ತಿ ಲೇಖಕಿ ನ್ಯಾಯವಾದಿ ಜಾಜುಲ ಗೌರಿ ಮತ್ತು ಹೈದ್ರಾಬಾದ ನ ಖ್ಯಾತ ಲೇಖಕರು ಆದ ಕೃಪಾಕರ್ ಮಾದಿಗ ಮತ್ತು ಕೃಷ್ಣ ಗೊಗಲೊಟ್ ಮಟ್
ಅವರೆಲ್ಲರ ಸಂಪರ್ಕದಲ್ಲಿ ಪಂಚ ಬಾ಼ಷೆ ಕವಿಗೋಷ್ಠಿ ಲೇಖಕರೊಂದಿಗೆ ಕನ್ನಡದ ಹೆಮ್ಮೆ ಕನ್ನಡ ಸಾಹಿತ್ಯದ ಹೆಸರನ್ನು ಪಸರಿಸಿದ ಅಂಜಲಿ ಬೆಳಗಲ್ ಅವರು ಬರೆದಂತ ಕವನಗಳು ಇಂದು ಮಹಾರಾಷ್ಟ್ರ ದ ಪತ್ರಿಕೆಯಲ್ಲಿ ಪ್ರಕಟವಾಗಿದೆ ಅಂಜಲಿ ಬೆಳಗಲ್ನ ನಮ್ಮ ವಿಜಯ ನಗರ ಜಿಲ್ಲೆಯ ಹೆಮ್ಮೆಯ ಅಷ್ಟೇ ಅಲ್ಲ ಕರ್ನಾಟಕದ ಮಗಳು,ಇವರು ಕರ್ನಾಟಕ ದ ಮೂಲೆ ಮೂಲೆಯಲ್ಲೋ ಇವರ ಸಾಹಿತ್ಯ ಗೋಷ್ಠಿ ಭಾಗವಹಿಸಿ ಹೆಗ್ಗಳಿಕೆ ಪಡೆದಿದ್ದಾರೆ
ಇಂತಹ ಮೇರು ಪ್ರತಿಬೆಗೆ ಅಂಜಲಿ ಬೆಳಗಲ್ ಅವರ ವಿಜಯನಗರ ಜಿಲ್ಲೆಯ ಜನರು ಮತ್ತು ಗೆಳೆಯರ ಬಳಗದಿಂದ ಯುವ ನಿರ್ದೆಶಕ ವಸಂತ್ ಹಾಗು ಚಾಂದ್ ಬಾಷ, ಸತೀಶ್, ವರದನ್, ಹುಲಿಗೆಮ್ಮ, ಸುಮಾ ನಿರ್ಮಲ, ಹಾಗು ಇನ್ನೂ ಹಲವರು ಅಂಜಲಿ ಬೆಳಗಲ್ ಅವರಿಗೆ ಶುಭ ಹಾರೈಸುತ್ತೇವೆ ಅಭಿನಂದನೆಗಳು ಅಂಜಲಿ ಬೆಳಗಲ್ ಹಾಗು ಸಂಸ್ಥೆ ಹಾಗು ನಮ್ಮ ವಿಜಯ ನಗರ ಜಿಲ್ಲಾ ಶಿಳ್ಳೆಕ್ಯಾತರ ಕ್ಷೇಮಾಭಿವೃದ್ಧಿ ಸಂಘ ವಿಜಯ ನಗರ ಜಿಲ್ಲಾ ಅಧ್ಯಕ್ಷರು ಆದ ಸಿದ್ದು ಬೆಳಗಲ್ ಹಾಗು ಹಂಪಿ ಯರಿಸ್ವಾಮಿ ,ಸುರೇಂದ್ರ, ದುರ್ಗೆಶ್ ಕಟ್ಟಿ ಮನಿ ,ನಿಂಗಪ್ಪ, ಸುರೇಶ್ , ಕೃಷ್ಣಮೂರ್ತಿ, ಗುರು ಮೂರ್ತಿ ಹಾಗು ಸರ್ವಸದ್ಯಸರು ಅಭಿನಂದಿಸಿದರು,..

ವರದಿ. ಗಣೇಶ್, ಬಿ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
