;

ಕೂಡ್ಲಿಗಿಯ ಸಂಡೂರು ರಸ್ತೆಯಲ್ಲಿನ ಅರಣ್ಯ ಇಲಾಖೆಯ ಹುಣಸೆ ಮರ ಮಾರಣ ಹೋಮ!!!!!

ಕೂಡ್ಲಿಗಿಯ ಸಂಡೂರು ರಸ್ತೆಯಲ್ಲಿನ ಅರಣ್ಯ ಇಲಾಖೆಯ ಹುಣಸೆ ಮರ ಮಾರಣ ಹೋಮ!!!!! ಕೂಡ್ಲಿಗಿ: ತಾಲೂಕಿನ ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಹತ್ತಿರ ಇರುವ ಹುಣಸೆ ಮರವನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಹುಣಸೆ ಮರವನ್ನು ಕಡಿದ ಹಿನ್ನಲೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕೂಡ್ಲಿಗಿ ಸಿ ಐ ಟಿ ಯು ಸಹಯೋಗದೊಂದಿಗೆ ಕೂಡ್ಲಿಗಿ ಅರಣ್ಯ ಇಲಾಖೆಯ ಅಧಿಕಾರಿಯ ಗುಮಾಸ್ತರ ಮುಖಾಂತರ ವಲಯ ಅರಣ್ಯಾಧಿಕಾರಿ ಕೂಡ್ಲಿಗಿ ಇವರಿಗೆ ಮನವಿ ಸಲ್ಲಿಸಿದರು, ನಂತರ ಸಾರ್ವಜನಿಕ ಸಂಡೂರು ರಸ್ತೆ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್ ಹತ್ತಿರ ಇರುವ ಮರಗಳನ್ನು ಅನಧಿಕೃತವಾಗಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಡಿದಿರುವ ಬಗ್ಗೆ ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಅಂದರೆ ರಸ್ತೆ ಪಕ್ಕದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಹುಣಸೆಮರವನ್ನು ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಡಿದಿರುತ್ತಾರೆ.

ಮರಕಡಿದವರ ಬಗ್ಗೆ ಕಾನೂನು ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ಕೂಗಳತೆ ಅಂತರದಲ್ಲಿರುವ ಕೂಡ್ಲಿಗಿ ವಲಯ ಅರಣ್ಯಾಧಿಕಾರಿಗಳ ಆಫೀಸ್ ಇದ್ದು ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಕಾನೂನನ್ನು ಗಾಳಿಗೆ ತೂರಿ ಅವರ ಇಚ್ಛೆ ಬಂದಂತೆ ನಡೆದುಕೊಳ್ಳುತ್ತಾರೆ, ಸಾರ್ವಜನಿಕರಿಗೆ ಪರಿಸರ ಅತ್ಯಗತ್ಯವಾಗಿದೆ ಅದನ್ನು ಪರಿಗಣಿಸದೆ ಅಧಿಕಾರಿಗಳು ಮರಗಳ ಮಾರಣ ಹೋಮಕ್ಕೆ ನಿರ್ಲಕ್ಷ ವಹಿಸುತ್ತಿರುವುದು ಸಾರ್ವಜನಿಕರಿಗೆ ಬೇಸರ ತಂದಿದೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆ ಎಂದು ಯಕ್ಷಪ್ರಶ್ನೆಯಾಗಿ ಉಳಿದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಟಿ ಭಾಗ್ಯ, ಬಿ.ಹೂಲೆಪ್ಪ, ತಿಪ್ಪೇಸ್ವಾಮಿ ಕೆ, ನಾಗರಾಜ, ಪಿ ಅಜ್ಜಪ್ಪ, ಕೆ ಶಿವರಾಜ, ಪಿ ನಾಗರಾಜ ಇತರರು ಇದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;