ನುಡಿದಂತೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಟ್ಟ ಪ್ರಭಾಕರ ಮ್ಯಾಸನಾಯಕ
ಮೊಳಕಾಲ್ಮೂರು ಕ್ಷೇತ್ರದ ಹೊಸದಡಗೂರು ಗ್ರಾಮಕ್ಕೆ ಕಳೆದ ವಾರ ಶುಭೋದಯ ಕಾರ್ಯಕ್ರಮಕ್ಕೆ ಬಂದಾಗ ಬಸ್ ಸೌಲಭ್ಯ ಇಲ್ಲದೇ ವಿದ್ಯಾರ್ಥಿಗಳಿಗೆ ರೈತರಿಗೆ ಹಾಗೂ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದರು.
ಅಂದೇ ಈ ಬಗ್ಗೆ ಸಂಬಂಧಪಟ್ಟ *ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ* ಮಾತನಾಡಿ ನಾಗರಿಕರಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಒದಗಿಸಿಕೊಡುವಂತೆ ಮನವಿ ಮಾಡಿದ್ದರು.
ಇಂದು ಇದು ಕಾರ್ಯರೂಪಕ್ಕೆ ಬಂದಿದ್ದು ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯ ಮಲ್ಲಾರೆಡ್ಡಿ ಮಾತನಾಡಿ *ನುಡಿದಂತೆ ನಡೆದ ಕ್ರಿಯಾಶೀಲ ವ್ಯಕ್ತಿ ಪ್ರಭಾಕರ ಮ್ಯಾಸನಾಯಕ* ಇಂತಹ ವ್ಯಕ್ತಿ ಇಲ್ಲಿ ಶಾಸಕರಾಗಬೇಕು ಎಂದು ಬಣ್ಣಿಸಿದರು.
ಇದರಿಂದಾಗಿ ಜಾಗೀರ್ ಬುಡ್ಡೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಲ್ಲರಹಟ್ಟಿ, ಜಂಬಲಮಲ್ಕಿ, ಹೊಸದಡಗೂರು ಹಾಗೂ ಬಸಾಪುರ ಗ್ರಾಮಗಳ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜನರ ಸಂಕಷ್ಟಕ್ಕೆ ಸ್ಪಂದಿಸಿ ಬಸ್ ಸೌಕರ್ಯ ಒದಗಿಸಿಕೊಟ್ಟಂತ ಸಂಸ್ಥೆಯ *ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಪ್ರಭಾಕರ ಮ್ಯಾಸನಾಯಕ* ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶ್, ಜಗನ್, ಬಾಬು, ರಾಮಾಂಜಿ, ದಿವಾಕರ್ ಬಸಪ್ಪ, ಅಶೋಕ್, ಸೀನಾ, ಮಲ್ಲಿಕಾರ್ಜುನ, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
