;

ದೆಹಲಿ ಅಮೃತ ಮಹೋತ್ಸವದಲ್ಲಿ ರಾರಜಿಸಿದ ಕೂಡ್ಲಿಗಿ ಕಲಾವಿದರು…!!!

ದೆಹಲಿ ಅಮೃತ ಮಹೋತ್ಸವದಲ್ಲಿ ರಾರಜಿಸಿದ ಕೂಡ್ಲಿಗಿ ಕಲಾವಿದರು
ಕೂಡ್ಲಿಗಿ: ಫೆಬ್ರುವರಿ 25 ಮತ್ತು 26ರಂದು ನವದೆಹಲಿಯಲ್ಲಿ ದೆಹಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೂಡ್ಲಿಗಿ ಕಲಾವಿದರು ಶಾಸ್ತ್ರೀಯ ಸಂಗೀತ ಗಾಯನ ಪ್ರಸ್ತುತಪಡಿಸಿದ್ದಾರೆ.
ಶ್ರೀ ಪೇಟೆ ಬಸವೇಶ್ವರ ಕಲಾ ಬಳಗ ಕೂಡ್ಲಿಗಿ ಸಂಗೀತ ಕಲಾವಿದರಾದ ಆಗಸಗಟ್ಟಿ ತಿಂದಪ್ಪ, ರಂಗಭೂಮಿ ಕಲಾವಿದ ರಾದ ಬಾಣದ ನರಸಿಂಹಪ್ಪ, ವಿಭೂತಿ ವೀರಣ್ಣ, ಗೋವಿಂದಪ್ಪ ಕಟ್ಟಿಮನಿ ಶಿಷ್ಯರಾದ ವೆಂಕಟೇಶ್, ಕೆ,ಶಂಕರ್ ಕುಪ್ಪಿನಕೆರೆ, ಚನ್ನವೀರ ಸ್ವಾಮಿ ಸಾಸಲವಾಡ ಇವರುಗಳು ಅಮೃತ ಮಹೋತ್ಸವ ಆಚರಣೆ ಯಲ್ಲಿ ಅತ್ಯುತ್ತಮ ಶಾಸ್ತ್ರೀಯ ಸಂಗೀತದ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸಿ ದೆಹಲಿ ಕರ್ನಾಟಕ ಸಂಘದಿಂದ ಅಭಿನಂದನಾ ಪುರಸ್ಕಾರ ಪಡೆದಿದ್ದಾರೆ.
ಗ್ರಾಮೀಣ ಮತ್ತು ವಿವಿಧ ತಾಲೂಕು ಅನೇಕ ಜಿಲ್ಲಾದ್ಯಂತ ಹಾಗೂ ಮೈಸೂರು ದಸರಾ ಹಂಪಿ ಉತ್ಸವಗಳು ಸೇರಿದಂತೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ನವದೆಹಲಿ ಯಲ್ಲಿ ಕಲಾ ಪ್ರದರ್ಶನ ನೀಡಿ ಗೌರವಾನ್ವಿತ ಗಣ್ಯರಿಂದ ಪುರಸ್ಕಾರ ಪಡೆದ ಕಲಾವಿದರ ಪ್ರತಿಭೆಗೆ ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ರಂಗಭೂಮಿ ಕಲಾವಿದರುಗಳು ,ಹಾಗೂ ಪಟ್ಟಣದ ಅನೇಕ ಸಂಘ ಸಂಸ್ಥೆಗಳು ವಿವಿಧ ಸಮಾಜದ ಮುಖಂಡರುಗಳು ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ್ದಾರೆ…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;