;

ಸಮಾಜದಲ್ಲಿ ಮಹಿಳೆ ಅಬಲೆಯಲ್ಲ,ಸಬಲೆ -ವೈ,ರವಿಕುಮಾರ್…!!!

ಸಮಾಜದಲ್ಲಿ ಮಹಿಳೆ ಅಬಲೆಯಲ್ಲ,ಸಬಲೆ -ವೈ,ರವಿಕುಮಾರ್.
ಕೂಡ್ಲಿಗಿ : ಮಹಿಳೆಯರು ಸ್ವಸಹಾಯ ಸಂಘದ ನೆರವಿನೊಂದಿಗೆ ಆರ್ಥಿಕವಾಗಿ ಸಬಲೀಕರಣ ಹೊಂದಿ ಪ್ರತಿಯೊಂದು ಕ್ಷೇತ್ರದಲ್ಲಿ ಸದೃಢ ರಾಗಬೇಕು.ಜೊತೆಗೆ ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ ಎಂದು ಸಮಾಜದಲ್ಲಿ ಮಾದರಿ ಯಾಗಬೇಕು. ಎಂದು ತಾ, ಪಂ, ಕಾರ್ಯನಿರ್ವಾಹಕ ಅಧಿಕಾರಿಗಳಾದ ವೈ,ರವಿಕುಮಾರ್ ನುಡಿದರು.
ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ತಾಲೂಕಿನ ಸಾಮರ್ಥ್ಯ ಸೌಧದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಸಿಡಾಕ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 6 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ವಿಜಯನಗರ ಜಿ,ಪಂ, ಯೋಜನಾ ನಿರ್ದೇಶಕರಾದ ಆಶೋಕ್ ಹತೋಟದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ,ಎನ್ ಆರ್ ಎಲೆ ಎಂ ಯೋಜನೆಯ ಅಡಿಯಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು.ಹಾಗೆಯೇ ಒಳ್ಳೆಯ ಉದ್ದಿಮೆದಾರ ರಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ NRML ಯೋಜನೆಯ ಯುವ ವೃತ್ತಿಪರ ರಾದ ಕುಮಾರಿ ಕಾವ್ಯ ಹಾಗೂ ಪ್ರೀತಮ್,ತಾಲೂಕು ವ್ಯವಸ್ಥಾಪಕ ರಾದ ಹೆಚ್, ಎಂ. ಗಿರೀಶ್, ಎಂ ಐ ಎಸ್ ಕೋ, ಅರ್ಡಿ ನೇಟರ್ ವೆಂಕ ನಾಯ್ಕ್,ವಲಯ ಮೇಲ್ವಿಚಾರಕರಾದ ನರಸಿಂಹ,ತಾಲೂಕು ಸಂಪನ್ಮೂಲ ವ್ಯಕ್ತಿ ನೇತ್ರಾವತಿ,ಸೇರಿದಂತೆ ವಿವಿಧ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;