;

ಕೂಡ್ಲಿಗಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆಗೆ ಪದಾಧಿಕಾರಿಗಳ ನೇಮಕ!!!!!

ಮಹರ್ಷಿ ವಾಲ್ಮೀಕಿ ನಾಯಕರ ಮಹಾ ವೇದಿಕೆ (ರಿ.), ಬೆಂಗಳೂರು. ಕೂಡ್ಲಿಗಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆಗೆ ಪದಾಧಿಕಾರಿಗಳ ನೇಮಕ!!!!! ಕೂಡ್ಲಿಗಿ: ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆ ರಾಜ್ಯ ಉಪಾಧ್ಯಕ್ಷರ ಹಾಗೂ ಜಿಲ್ಲಾ ಉಪಾಧ್ಯಕ್ಷರ ಆದೇಶದ ಮೇರೆಗೆ ರಾಜ್ಯ ಕಾರ್ಯದರ್ಶಿ ಬೈಯಣ್ಣ ಗೊಂಚಿಗಾರ್ ಅವರು, ಕಾನಹೊಸಹಳ್ಳಿ ಸಮೀಪದ ಜುಟ್ಟಲಿಂಗನಹಟ್ಟಿ ಗ್ರಾಮದ ಡಿ.ಮಹಾಂತೇಶ ಇವರನ್ನು ಮಹರ್ಷಿ ವಾಲ್ಮೀಕಿ ನಾಯಕರ ಮಹಾ ವೇದಿಕೆಯ ತಾಲೂಕು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನಂತರ. ತಾಲೂಕು ಗೌರವ ಅಧ್ಯಕ್ಷರಾಗಿ ಹೊಸಹಳ್ಳಿಯ ಬಿ.ಸಿದ್ದಪ್ಪ , ಹಾಗೂ ಕಾನಾಹೊಸಹಳ್ಳಿ ಹೋಬಳಿಯ ಉಸ್ತುವಾರಿಯಾಗಿ ಮಾರೆಪ್ಪ ಇವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಿ, ತಕ್ಷಣವೇ ಮಹರ್ಷಿ ವಾಲ್ಮೀಕಿ ನಾಯಕರ ಮಹಾ ವೇದಿಕೆಯು ಉದ್ದೇಶಗಳಂತೆ ನಿಮ್ಮ ತಾಲೂಕಿನ ವ್ಯಾಪ್ತಿಗೆ ಬರುವ ಪ್ರತಿಯೊಂದು ಹಳ್ಳಿಗಳಿಗೆ ಭೇಟಿಕೊಟ್ಟು ನಾಯಕ ಸಮುದಾಯದ ಸಂಘಟನೆ ಮತ್ತು ಕಾನೂನಾತ್ಮಕ ಸಹಕಾರ ಸ್ಪಂದನೆ ನೀಡುವುದರ ಮೂಲಕ ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಸ್ವಾರ್ಥವಾಗಿ ಕೆಲಸ ಮಾಡಬೇಕು ಎಂದು ರಾಜ್ಯ ಕಾರ್ಯದರ್ಶಿ ಬೈಯಣ್ಣ ಗೊಂಚಿಗಾರ್ ನೂತನ ಪದಾಧಿಕಾರಿಗಳಿಗೆ ಹೇಳಿದರು. ನಂತರ ನಿಮಗೆ ಹೆಚ್ಚಿನ ಯಶಸ್ವಿ ಸಿಗಲೆಂದು ಶುಭ ಹಾರೈಸಿ ಆದೇಶ ಪ್ರಮಾಣ ಪತ್ರವನ್ನು ನೀಡಿದರು..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;