ನಮ್ಮ ಸಮಾಜಕ್ಕೆ ಮೀಸಲಾತಿಗಾಗಿ ಹೋರಾಟ ಮಾಡಲು ಶತಸಿದ್ಧ, ಕೆ. ಪಿ. ನಂಜುಂಡಿ.
ಹ.ಬೊ.ಹಳ್ಳಿ. ನಮ್ಮ ಭಾರತ ದೇಶದಲ್ಲಿ ಇರುವುದಕ್ಕಿಂತ ಗುಡಿ ಉಜ್ ಗೋಪುರಗಳನ್ನು ಕಟ್ಟಿಸಿದವರು. ಈ ನಮ್ಮ ವಿಶ್ವಕರ್ಮ ಸಮಾಜ ಇದು ಕರ್ನಾಟಕ ಸರ್ಕಾರದ ಕಾರ್ಯಕ್ರಮ ಅಲ್ಲ ಇದು ವಿಶ್ವಕರ್ಮ ಸಮಾಜ ಕಾರ್ಯಕ್ರಮ ಎಂದು ತಿಳಿಸಿದರು. ಪಟ್ಟಣದ ಶ್ರಿಬಸವೇಶ್ವರ ವೃತ್ತದಿಂದ ವಿಶ್ವಕರ್ಮ ಶ್ರೀ ಮೌನೇಶ್ವರ ಭಾವ ಚಿತ್ರ ಕ್ಕೇ ಪೂಜಾ ಸಲ್ಲಿಸಿ ಮೆರವಣಿಗೆ ಮೂಲಕ ರಾಮನಗರದ ಶ್ರೀ ಕಾಳಿಕಾದೇವಿ ಬಡಾವಣೆ, ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ 25ನೇ ವರ್ಷದ ಜಗದ್ಗುರು ಶ್ರೀ ಮೌನೇಶ್ವರ ಮಹೋತ್ಸವದ ಅಂಗವಾಗಿ, 121ನೇ ವಿಶ್ವಕರ್ಮ ದಿನ ಜಾಗೃತಿ ಸಮಾವೇಶದ ಕಾರ್ಯಕ್ರಮವು ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವಕರ್ಮ ರಾಜ್ಯಾಧ್ಯಕ್ಷರಾದ, ಶ್ರೀ ಕೆ .ಪಿ .ನಂಜುಂಡಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿ, ಇವತ್ತು ನಮ್ಮ ಸಮಾಜಗಳು ಉದ್ದವಾಗಿ ಬಿಟ್ಟಿದೆ ಅಂದ್ರೆ ನಾವು ಎಲ್ಲೂ ಹೋಗಬೇಕಾಗಿತ್ತು, 25 ವರ್ಷ ಬೇಕಾಗಿದ್ದಿಲ್ಲ, ಈ ಕಾರ್ಯಕ್ರಮ ಮಾಡ್ಲಿಕ್ಕೆ ಒಂದು ಸಣ್ಣ ಜಾಗ ಕೊಟ್ರು ಸಹ ನಾವು ನೆನಪು ಮಾಡಿಕೊಳ್ಳುತ್ತೇವೆ. ಅದಕ್ಕಿಂತ ಮುಂಚೆ ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲಿದ್ದೇವೆ ಅನ್ನೋದನ್ನ ನಾವು ತಿಳಿದುಕೊಳ್ಳಬೇಕು, ಅನ್ನೋದು ಒಂದು ಸಂಘಟನೆ, ಕಾರ್ಯಕ್ರಮವನ್ನು ಮಾಡುತ್ತಾ ಇದ್ದೇವೆ. ಅದಕ್ಕೋಸ್ಕರವಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ 121ನೇ ಜನ ಜಾಗೃತಿ ಸಮಾವೇಶ ಈ 121 ಸಮಾವೇಶಗಳಲ್ಲಿ ಈ ಸಮಾಜಕ್ಕೆ ತಿಳಿದುಕೊಳ್ಳ ಬೇಕಾದಂತ ಜಾಗೃತಿ ಏನು ಅನ್ನೋದು ಇವತ್ತು ಬಹಳ ಜನಕ್ಕೆ ಗೊತ್ತಿಲ್ಲ ಅದನ್ನು ತಿಳಿಸುವ ಗೋಸ್ಕರ ನಾನು ಬಂದಿದ್ದೇನೆ. ಜಾತಿ ಎಂದರೇನು, ಧರ್ಮ ಎಂದರೆ ಏನು, ಆಚಾರ, ವಿಚಾರ ,ಎಂದರೇನು ಸ್ವಾಮೀಜಿಗಳು ಎಂದರೇನು, ಪ್ರಜಾಪ್ರಭುತ್ವ ಎಂದರೇನು, ಸಂವಿಧಾನ ಎಂದರೇನು, ಇದರಲ್ಲಿ ಜಾತಿ ಕೆಲಸ ಮಾಡ್ತಾ ಇದಿಯಾ ಧರ್ಮ ಕೆಲಸ ಮಾಡ್ತಾ ಇದಿಯಾ, ಆಚಾರ ವಿಚಾರ ಕೆಲಸ ಮಾಡ್ತಾ ಇದಿಯಾ ಅಥವಾ ರಾಜಕೀಯ ಮುಖಂಡರುಗಳು ಕೆಲಸ ಮಾಡ್ತಾ ಇದಿಯಾ ಅನ್ನೋದು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯ ವಿಶ್ವಕರ್ಮ ಸಮಾಜ ಅನ್ನೋದು ಯಾರೋ ಹೇಳಿದ್ರು ಅಂತ ಬದುಕುವಂತಹ ಸಮಾಜ ಅಲ್ಲ ಯಾರೋ ತುಳಿದು ಹಾಕೋ ನಾಶ ವಾಗುವಂತ ಸಮಾಜ ಅಲ್ಲ ನಮ್ದು ಇತಿಹಾಸವನ್ನು ಬರೆದಿರುವಂತಹ ಸಮಾಜ ಯಾವ ಕಾಲಘಟ್ಟದಲ್ಲಿ ದೇವರು ಇದ್ದಾನೋ ಯಾವ ಕಾಲಘಟ್ಟದಲ್ಲಿ ರಾಕ್ಷಸ ಇದ್ನೋ ಆ ಎಲ್ಲಾ ಕಾಲಘಟ್ಟದಲ್ಲಿ ಜೀವಂತವಾಗಿ ಇತ್ತು ಅಂದ್ರೆj ಅದೇ ವಿಶ್ವಕರ್ಮ ಸಮಾಜ ಈ ಸಮಾಜ ಬದುಕಿದರೆ ಮಾತ್ರ ಇತಿಹಾಸ ರಾಮಾಯಣದಲ್ಲಿಯೂ ನಾವು ಇದ್ದೆವು ರಾವಣ ಇದ್ರು ನಾವು ಇರಬೇಕು ಸಾಮಾಜಿಕ ನ್ಯಾಯ ಅನ್ನೋದು ಬಂದಿದೆ, ಆಗಿನ ಕಾಲದಿಂದ ಈಗಿನ ಕಾಲದವರೆಗೆ ಬಂದಿದೆ ಅಂದರೆ ಅದು ವಿಶ್ವಕರ್ಮ ಸಮಾಜದ ಕುಲಕಸುಬು ಮಾತ್ರ ನಾವು ರಾಕ್ಷಸರಿಗೂ ಆಯುಧ ಮಾಡಿದ್ದೀವಿ, ದೇವರಿಗೂ ಆಯುಧ ಮಾಡಿಕೊಟ್ಟಿದ್ದೇವೆ, ಯಾವ ವ್ಯತ್ಯಾಸವೇ ಇಲ್ಲ ನಾವು ಶ್ರೀಮಂತರಿಗೂ ನಮ್ಮಿಂದ ಕೆಲಸ ಮಾಡಿ ಕೊಟ್ಟಿದ್ದೀವಿ ಗುಡಿಸಲಿಗೂ ಮಾಡಿಕೊಟ್ಟಿದ್ದೀವಿ. ಶ್ರೀ ಸಮಾಜ ಹೀಗೆ ಬದುಕುತ್ತಾ ಅಂತ ಯಾರು ಹೇಳಕ್ಕಾಗಲ್ಲ, ಸಮಾಜ ಬದುಕೇ ಇರುತ್ತೆ ಅಂತ ಹೇಳುತ್ತದೆ. ಯಾಕಂದ್ರೆ ಒಬ್ಬ ತಾಯಿ ಹೊಟ್ಟೆ ಒಳಗಿನಿಂದ ಭೂಮಿ ಮೇಲೆ ಬರುವಂತ ಮಗುವಿಗೂ ಹಾಗೂ ನಾವು ಸ್ಮಶಾನಕ್ಕೆ ಹೋದರೂ ಕೂಡ, ಅಲ್ಲಿ ನಮ್ಮ ಸಮಾಜದ ಕೆಲಸ ಇರುತ್ತೆ. ಅಂದರೆ ಇದರ ಅರ್ಥ.

” ಸಮಾಜಕ್ಕೆ ಸಾವಿಲ್ಲ”ನಮಗೆ ರಾಜಕೀಯ ಹಾಗೂ ಸವಿಂಧಾನದ ಬಗ್ಗೆಯೂ ಗೊತ್ತಿಲ್ಲ, ಇವತ್ತು ಕೂಡ ನಾವು ಮೂಡನಂಬಿಕೆ ಯಿಂದಲೇ ಬದುಕುತ್ತಾ ಇದ್ದೇವೆ. ನಮ್ಮ ಸಮಾಜ ಹಿಂದುಳಿದ ವರ್ಗದಲ್ಲಿ ಯಾಕೆ ಬಂತು ಅಂತ ಗೊತ್ತಿಲ್ಲ, ಆ ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿಗಳು ಇದಾವೆ ಅನ್ನೋದು ಗೊತ್ತಿಲ್ಲ, ಕೆಲವೊಂದು ಜಾತಿಗಳು ಪರಿಶಿಷ್ಟ ಜಾತಿ ಎಂದು ಪರಿಗಣಿಸಿದ್ದಾರೆ . ನಾವು ಬ್ರಾಹ್ಮಣ ಸಮಾಜ ದ ಹಿಂದೆ ಹೋಗುತ್ತಾ ಇದ್ದೇವೆ ಅನ್ನೋದು ಶುದ್ಧ ತಪ್ಪು, ನಾವು ಬ್ರಾಹ್ಮಣರಲ್ಲ, ನಮ್ಮ ಸಮಾಜದಲ್ಲಿ 41 ಉಪಪಂಗಡವಿದೆ, 102 ಜಾತಿಯಲ್ಲಿ ನಮ್ಮದು ಒಂದು ಕೂಡ ಒಂದು ಜಾತಿ, 102 ಜಾತಿಯಲ್ಲಿ ಕೇವಲ 15 % ಜಾತಿಯಲ್ಲಿ ನಾವಿದ್ದೇವೆ. ಬಡಿಗೇರ ಒಂದು ಪಂಗಡ, ಸೋನಾರು ಒಂದು ಪಂಗಡ, ಅಕ್ಕಸಾಲಿಗ ಒಂದು ಪಂಗಡ, ಆಚಾರಿ ಒಂದು ಪಂಗಡ, ಇತರೆ 39 ಪಂಗಡಗಳು ಸೇರಿ ವಿಶ್ವಕರ್ಮ ಎಂಬ ಜಾತಿಯಲ್ಲಿ ನಾವಿದ್ದೇವೆ, ನಾವು ಶಿಕ್ಷಣದಲ್ಲಿ ಕೊನೆ ಘಟ್ಟದಲ್ಲಿದ್ದೇವೆ, ನಾವುಗಳು ಹಳ್ಳಿಗಾಡಿ ಇಂದ ಬಂದಂತ ಸಮಾಜ, ನಾವು ನಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ, ಉದ್ಯೋಗ, ಕೊಡಿಸಬೇಕು, ಅದಕ್ಕಾಗಿ ನಾವು ಮೀಸಲಾತಿಯನ್ನು ಕೇಳಿ ಪಡೆಯುವುದರಲ್ಲಿ ಯಾವುದೇ ತಪ್ಪಲ್ಲ, 1972ರಲ್ಲಿ ದೇವರಾಜ್ ಅರಸು ರವರು ವಿಶ್ವಕರ್ಮ ಸಮಾಜವನ್ನು 132 ಜಾತಿಗಳನ್ನು ಹೊಂದಿರುವ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿದ್ದರು ಅಂದೆ ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡುವ ಬಗ್ಗೆ ಹೋರಾಟ ಪ್ರಾರಂಭಿಸ ಬೇಕಾಗಿತ್ತು ಕಾರಣ ಸಮಾಜದ ಜನರು ಡಾ. ಬಿ.ಆರ್.ಅಂಬೇಡ್ಕರ್ ಬರೆದಿರುವ ಸವಿಂಧಾನ ವನ್ನು ಅರ್ಥ ಮಾಡಿಕೊಂಡಿಲ್ಲ ಮೀಸಲಾತಿಯ ಮಹತ್ವ ಇದುವರೆಗೂ ಯಾರು ಅರಿತಿಲ್ಲ ,ರಾಜ್ಯದಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗೆ ಹಾಗೂ ವಿಶ್ವಕರ್ಮ ನಿಗಮ ಮಂಡಳಿ ರಚನೆ ಗಾಗಿ, ನಾನು 14 ವರ್ಷಗಳ ಕಾಲ ನಿರಂತರವಾಗಿ,ಹೋರಾಟ ಮಾಡಿದ್ದೇನೆ. ನಿರ್ಲಕ್ಷ್ಯ ಕ್ಕೆ ಒಳಗಾದ ಸಮಾಜಕ್ಕೆ ಮೀಸಲಾತಿ ಎಂಬುದು ಒಂದು ವರವಾಗಿದೆ . ನಮ್ಮ ಸಮಾಜದ ಹೆಣ್ಣು ಮಕ್ಕಳು ಬೇರೆಯವರ ಮನೆಯಲ್ಲಿ ಮುಸುರಿ ತೊಳೆಯುವುದಕ್ಕಿಂತ, ಅವರಿಗೆ ಒಳ್ಳೆ ಶಿಕ್ಷಣ ಕೊಡಿಸಿ, ಗಂಡು ಮಕ್ಕಳು, ಬೇರೆಯವರ ಮನೆಯಲ್ಲಿ, ಕೆಲಸ ಮಾಡುವುದು, ಹೋಟೆಲ್ ನಲ್ಲಿ ಸಪ್ಲೈ ರ್, ಹಾಗೂ ವಾಹನ ಚಾಲನೆಯಲ್ಲಿ ನಿರತರಾಗಿರುವುದನ್ನು ನಾವು ನೋಡಿದ್ದೇವೆ, ಇನ್ನು ಮುಂದೆಹಾ ಗೆ ಹಾಗಬಾರದು, ಅವರಿಗೆ ಒಳ್ಳೆ ಶಿಕ್ಷಣ ಕೊಡಿಸಿ, ಒಳ್ಳೆ ವಿದ್ಯಾವಂತರನ್ನಾಗಿ ಮಾಡಿ, ಈ ವಿಶ್ವದಲ್ಲಿ ಪ್ರತಿಯೊಂದು ಕೆಲಸಗಳಲ್ಲಿ ನಮ್ಮ ಕೆಲಸದ ಶ್ರದ್ಧೆ ಇದ್ದೇ ಇರುತ್ತದೆ . ಎಂದು ವಿಶ್ವಕರ್ಮದ ಸಮಾಜದ ಬಗ್ಗೆ ತಿಳುವಳಿಕೆ ನೀಡಿದರು. ಈ ವೇಳೆಯಲ್ಲಿ ಮಾಜಿ ಶಾಸಕರಾದ, ಶ್ರೀ ನೇಮಿರಾಜ್ ನಾಯಕ್, ಶ್ರೀಲೋಹಿತ್ ರೈ ಕಲ್ಲೂರು, ವಿಶ್ವಕರ್ಮ ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀ ಬ್ರಹ್ಮ ಗಣೇಶ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಕ., ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದಂತ, ಶ್ರೀ ಬಿ ಜಿ ಬಡಿಗೇರ್, ಅಧ್ಯಕ್ಷರು, ಅ.ಕ.ವಿ.ಮ. ವಿಜಯನಗರ ಜಿಲ್ಲಾ ಘಟಕ, ಶ್ರೀ ಡಾ. ಸಿದ್ದಪ್ಪ ಬಡಿಗೇರ್, ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ,ಹ.ಬೊ. ಹಳ್ಳಿ. ಜಿಕೆವಿ ಪತ್ತಾರ್ ಅಧ್ಯಕ್ಷರು, ಶ್ರೀ ಚಂದ್ರಕಾಂತ್ ಸೋನಾರ್, ಶ್ರೀ ಸತೀಶ್ ಕುಮಾರ್ ಭದ್ರಾವತಿ, ಶ್ರೀ ವೀರಣ್ಣ ಬಡಿಗೇರ್, ಶ್ರೀ ಚನ್ನಪ್ಪ ಬಡಿಗೇರ್, ಶ್ರೀ ಕೊಟ್ರೇಶ ಆಚಾರ್, ಶ್ರೀ ಕುಮಾರಸ್ವಾಮಿ, ಶ್ರೀ ರಾಘವೇಂದ್ರ, ಶ್ರೀ ಕಮ್ಮರ್ ಮಂಜುನಾಥ, ಶ್ರೀಮತಿ ಪಿ. ವಿದ್ಯಾವತಿ, ಇದ್ದರು. ಶ್ರೀ ವಿಶ್ವಕರ್ಮ ಧ್ವಜಾರೋಹಣ ಕಾರ್ಯಕ್ರಮ ಶ್ರೀ ಶ್ರೀ ಗುರುನಾಥ ಮಹಾಸ್ವಾಮಿಗಳು ಅವರಿಂದ, ವಿಶ್ವಕರ್ಮ ವಟುಗಳಿಗೆ ಬ್ರಹ್ಮ ಉಪದೇಶ ಉಪನಯನ ಕಾರ್ಯಕ್ರಮ ಶ್ರೀಮತಿ ಶೋಭಾ ಶ್ರೀ ಬಸವರಾಜ ಆಚಾರ್ಯ ಎಂ ಕಲ್ಲಳ್ಳಿ, ಸಂಗೀತ ಕಾರ್ಯಕ್ರಮ ವನ್ನು, ಶ್ರೀಮತಿ, ತೇಜಸ್ವಿನಿ, ತಬಲಾ ಸಾತಿ, ವಿರುಪಾಕ್ಷಪ್ಪ ಎಸ್ ಬಿ.ಐ, ಹ.ಬೊ. ಹಳ್ಳಿ. ಹಾಗೂ ಹಾರ್ಮೋನಿಯಂ ಶ್ರೀ ಮಾರುತಿ ಆಚಾರಿ. ಅಧ್ಯಕ್ಷರು, ಪದಾಧಿಕಾರಿಗಳು, ವಿಶ್ವಕರ್ಮ ಸಮಾಜ (ರಿ). ಅಧ್ಯಕ್ಷರು, ಪದಾಧಿಕಾರಿಗಳು ತಾ.ಗಾ.ವಿ. ಮಹಿಳಾ ಸಮಾಜ (ರಿ), ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ತಾ.ವಿ.ನೌ. ಸಂಘ (ರಿ)ಹ.ಬೊ. ಹಳ್ಳಿ. ಎಲ್ಲಾ ವಿಶ್ವಕರ್ಮ ಸಮಾಜದವರು ಭಾಗವಹಿಸಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
