ನೂತನ ಅಭಿವೃದ್ಧಿ ಅಧಿಕಾರಿಯಿಂದ ಸಭೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ, ಅಭಿವೃದ್ಧಿ ಅಧಿಕಾರಿ ಇವರಿಂದ, ಸಭೆಯನ್ನು ಆಯೋಜಿಸಲಾಯಿತು.
ನಂತರ ನೂತನ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ರವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಹಾಗೂ ಸಾಮಾನ್ಯ ಜನರನ್ನು ಪರಿಚಯಿಸಿಕೊಂಡು, ಮಾತನಾಡಿ, ನನ್ನನ್ನು ನೂತನವಾಗಿ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಗೆ, ನೇಮಿಸಿದ್ದಾರೆ, ನಾನು ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇನೆ, ಅದರಂತೆ ನಮ್ಮ ಸಿಬ್ಬಂದಿಗಳು ಸಹ ಸರಿಯಾದ ರೀತಿಯಲ್ಲಿ ಸೇವೆ ಸಲ್ಲಿಸಬೇಕು, ನಮ್ಮ ಜೊತೆಗೆ ಅಧ್ಯಕ್ಷರು ಅಧ್ಯಕ್ಷರು ಸದಸ್ಯರಗಳು ಕೈಜೋಡಿಸಿ, ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಎಲ್ಲಾ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಮತ್ತು ಬೀದಿಗಳನ್ನು ಸ್ವಚ್ಛತೆ ಕಾಪಾಡೋಣ, ಮುಖ್ಯವಾಗಿ, ಗ್ರಾಮ ಪಂಚಾಯಿತಿಯನ್ನು, ಇನ್ನಷ್ಟು ಉನ್ನತ ಮಟ್ಟಕ್ಕೆ, ಅಭಿವೃದ್ಧಿಗೊಳಿಸೋಣ ನನಗೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 2 ವರ್ಷವಾದರೂ, ಕಾರ್ಯನಿರ್ವಹಿಸಲು, ನೀಡಿದರೆ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯನ್ನು, ಉನ್ನತ ಮಟ್ಟಕ್ಕೆ ಅಭಿವೃದ್ಧಿಗೊಳಿಸುತ್ತೇನೆ, ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಬಗ್ಗೆ ಕೆಲವು ಮಾಹಿತಿ ನೀಡಿ, ಎಲ್ಲಾ ಕಾರ್ಮಿಕರಿಗೆ ನೂತನ ಉದ್ಯೋಗ ಚೀಟಿಯನ್ನು ನೀಡುವಂತೆ ಸಿಬ್ಬಂದಿಗಳಿಗೆ ತಿಳಿಸಿದರು, ನನಗೆ ಎರಡು ಗ್ರಾಮ ಪಂಚಾಯಿತಿಯಲ್ಲಿ, ಸೇವೆ ಸಲ್ಲಿಸುತ್ತೇನೆ ಆದ್ದರಿಂದ, ಒಂದು ಪಂಚಾಯತಿಯಲ್ಲಿ 3 ಮೂರು ದಿನ, ಕಾರ್ಯನಿರ್ವಹಿಸುತ್ತೇನೆ, ಎಂದು ಸಭೆಯಲ್ಲಿ ತಿಳಿಸಿದರು.

ಬಿ. ಎಫ್. ಟಿ. ದಾನೇಶ್ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸಾಕಷ್ಟು ಕಾಮಗಾರಿಗಳಿದ್ದು ಜನರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಒದಗಿಸಿಕೊಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ, ಹೇಳಿದರು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ರವರು ನೂತನ ಅಭಿವೃದ್ಧಿ ಅಧಿಕಾರಿ ನಿಂಗಪ್ಪ , ರವರು ತಿಳಿಸಿದ ಹಾಗೆ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಸಿಬ್ಬಂದಿಗಳು ಅಧಿಕಾರಿಗಳೊಂದಿಗೆ ಕೈಜೋಡಿಸಿ ನಮ್ಮ ಪಂಚಾಯಿತಿಯನ್ನು ಇನ್ನು ಹೆಚ್ಚಿನ ಮಟ್ಟಕ್ಕೆ ಅಭಿವೃದ್ಧಿಗೊಳಿಸೋಣ ಎಂದು ತಿಳಿಸಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಗಪ್ಪ, ಉಪಾಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ನಾಗರಾಜ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ, ಈ ಶರಣೇಶ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಸಂಚಾಲಕ ಸಿ ಅರುಣ್ ಕುಮಾರ್, ಮತ್ತು ಗ್ರಾಮ ಪಂಚಾಯಿತಿಯ ಎಲ್ಲಾ ಸರ್ವ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು ಮಾಜಿ ಉಪಾಧ್ಯಕ್ಷರುಗಳು ಮಾಜಿ ಸದಸ್ಯರುಗಳು ಸಾರ್ವಜನಿಕರು ಪಂಚಾಯಿತಿ ಸಿಬ್ಬಂದಿಗಳು, ಗ್ರಂಥಾಲಯ ಸಿಬ್ಬಂದಿಗಳು, ಪರಿಚಯ ಸಭೆಯಲ್ಲಿ ಇದ್ದರು..
ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
