;

ಕವಿತೆಗಳು ಕ್ರೌರ್ಯ ವಿರೋಧಿ, ಮಾನವೀಯ ಪರವಾಗಿರಬೇಕು…!!!

 

ಕವಿತೆಗಳು ಕ್ರೌರ್ಯ ವಿರೋಧಿ, ಮಾನವೀಯ ಪರವಾಗಿರಬೇಕು
ಡಾ.ಕಾಶೀನಾಥ್ ಅಂಬಲಗಿ

ಕಲಬುರಗಿ , ಕವಿಯಾದವರಿಗೆ ಜ್ಞಾನ, ತಜ್ಞತೆ ಇರಬೇಕು. ಕವಿತೆ ಸಹೃದಯರ ಮನಸ್ಸು, ಹೃದಯಕ್ಕೆ ಮುಟ್ಟುವಂತಿರಬೇಕು ಎಂದು ಡಾ. ಬಿ.ಬಿ. ಪೂಜಾರ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಗುಲಬರ್ಗಾ ವಿ.ವಿ.ಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಭಾನುವಾರ ನಡೆದ ಹಿರಿಯರ ಕವಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಅವರು, ಕಾವ್ಯ ತಿಳಿವಿನಿಂದ ಅರಿವಿನೆಡೆಗೆ ಸಾಗಬೇಕು. ಸರಳತೆಯಿಂದ ಗಟ್ಟಿತನಕ್ಕೆ ಸಾಗಬೇಕು. ಕವಿ ಸತ್ತರೂ ಕವಿತೆ ಉಳಿಯಬೇಕು ಎಂದು ತಿಳಿಸಿದರು.

ಸಂಗಮನಾಥ ರೇವತಗಾಂವ, ಬಿ.ಎಚ್. ನಿರಗುಡಿ, ಡಾ. ಕೆ.ಗಿರಿಮಲ್ಲ, ಶಾಂತಪ್ಪ ಬೂದಿಹಾಳ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚಿಸಿದರು.

ಡಾ. ಬಸವ ಪಾಟೀಲ ಜಾವಳಿ, ಸತ್ಯಮಂಗಲ ಮಹಾದೇವ, ಧರ್ಮಣ್ಣ ಧನ್ನಿ, ವೀರ ಹನುಮಾನ, ರಾಜಶೇಖರ ಮಾಂಗ್, ಅಂಜಲಿ ಬೆಳಗಲ್, ಡಾ.ದೇವಿಂದ್ರಪ್ಪ ಜಾಜಿ, ಎಸ್.ಪಿ. ಸುಳ್ಳದ ಮುಂತಾದವರ ಅವರ ಕವಿತೆಗಳು ಸಹೃದಯರ ಗಮನ ಸೆಳೆದವು.

ಸಂತೋಷ ತೋಟ್ನಳ್ಳಿ, ಡಾ. ಪ್ರಭಾವತಿ ಚಿತ್ತಕೋಟೆ ನಿರೂಪಿಸಿದರು. ಡಾ. ಡಿ.ಎನ್. ಪಾಟೀಲ ವಂದಿಸಿದರು.

ಮೆಚ್ಚುಗೆಗೆ ಪಾತ್ರರಾದ ಕವಿಗಳ ಕವಿತೆಗಳು: ನೀವು ಇನ್ನೊಬ್ಬರ ಮುಂದ ಬೇಕಾದಷ್ಟು ಬಗ್ಗರಿ. ಕಿಸೆಯೊಳಗಿನ ಪೆನ್ನು, ತಲೆಯೊಳಗಿನ ಮಿದುಳು ಬೀಳುವ ತನಕ ಎಂಬ ಬಿ.ಬಿ. ಪೂಜಾರ ಅವರ ಹನಿ ಕವಿತೆ ಕವಿಯಾದವನು ಯಾರಿಗೂ ತನ್ನನ್ನು ಮಾರಿಕೊಳ್ಳಬಾರದು ಎಂಬ ಸಂದೇಶ ಸಾರುವಂತಿತ್ತು. ನನಗೆ ದೇವರಿಲ್ಲ. ನೀನೊಬ್ಬನೆ ದೇವರು ಎಂಬ ಡಾ. ರಾಜಶೇಖರ ಮಾಂಗ್ ಅವರ ಕವಿತೆ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ತಿಳಿಸುವಂತಿತ್ತು.

ಬಾರಣ್ಣ ರೈತಣ್ಣ ಬಂದು ನೋಡು ಕಲಿಯುಗದ ಕಣ್ಣ ಎಂದು ಕವಿತೆ ವಾಚಿಸಿದ ಭೀಮರಾಯ ದೊಡ್ಡಮನಿಯವರು ರಾಜಕಾರಣಿಗಳು, ಸ್ವಾಮೀಜಿಗಳು ಹಾಗೂ ದಲ್ಲಾಳಿಗಳ ಕಾಟದಿಂದಾಗಿ ನಲುಗಿ ರೈತನ ಪರಿಸ್ಥಿತಿ ವಿವರಿಸುವಂತಿತ್ತು.

ನಮಗ ಸಿಟ್ಯಾಕ ಬರ್ತಾದ ಸರ್, ನಮಗ ಸಿಟ್ಟು ಬರಂಗಿಲ್ಲ ಸರ್ ಎಂಬ ವೀರ ಹನುಮಾನ ಅವರ ಕವಿತೆ ಜನಪ್ರತಿಧಿಗಳ ಕರಾಮತ್ತು, ಕೈಚಳಕ ಹೇಳುವಂತಿತ್ತು. ಕಲ್ಯಾಣ ನಾಡು, ಕರುನಾಡಿನ ಸಿರಿವಂತಿಕೆಯನ್ನು ಕೆಲ ಕವಿಗಳು ವರ್ಣಿಸಿದರು…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ವರದಿಗಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;