;

ಧಾರ್ಮಿಕ ಆಚರಣೆಗಳಿಂದ ನೆಮ್ಮದಿ ಜೀವನ-ಮಲ್ಲಾಪುರ ಭರ್ಮಣ್ಣ…!!!

ಧಾರ್ಮಿಕ ಆಚರಣೆಗಳಿಂದ ನೆಮ್ಮದಿ ಜೀವನ-ಮಲ್ಲಾಪುರ ಭರ್ಮಣ್ಣ-

ಕೂಡ್ಲಿಗಿ : ಗಣೇಶೋತ್ಸವ,ಪುರಾಣ ಪ್ರವಚನ, ಶಿವರಾತ್ರಿ, ಸಾಮೂಹಿಕ ಪೂಜೆ, ನವರಾತ್ರಿಗಳಂತಹ ಧಾರ್ಮಿಕ ಆಚರಣೆಗಳಿಂದಾಗಿ ಸರ್ವರೂ ಸೌಹಾರ್ದತೆಯಿಂದ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು. ಪಟ್ಟಣದ ವಾಲ್ಮೀಕಿ ಸಮುದಾಯದ ಹಿರಿಯರಾದ, ಮಲ್ಲಾಪುರ ಭರ್ಮಣ್ಣ ನುಡಿದರು. ಯುವಕರು ಮೊಬೈಲ್, ಸಿನಿಮಾ ಗಳ ಗುಂಗನ್ನು ಬಿಡಬೇಕು, ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು.ವಿದೇಶಿ ಸಂಸ್ಕೃತಿಗೆ ಮರುಳಾಗದೇ ನಮ್ಮ ನಾಡು , ದೇಶದ ಸಂಸ್ಕೃತಿಯನ್ನು ಸರ್ವರೂ ತಮ್ಮ ಜೀವನದಲ್ಲಿ ಪಾಲಿಸಬೇಕೆಂದು ಕರೆ ನೀಡಿದರು. ಅವರು ಪಟ್ಟಣದ ಶ್ರೀಲಕ್ಷ್ಮೀನರಸಿಂಹ ಯುವಕರ ಬಳಗ ಆಯೋಜಿಸಿದ್ದ, ಶ್ರೀ ಶಿವರಾತ್ರೋತ್ಸವ ಪ್ರಯುಕ್ತ , ಜಾಗರಣೆ ಭಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಲ್ಮೀಕಿ ಸಮುದಾಯದ ಮಹಿಳಾ ಮುಖಂಡರಾದ, ಜಿಂಕಲ್ ನಾಗಮಣಿ ಮಾತನಾಡಿ ಕಲಾವಿದರ ತವರೂರು ಕೂಡ್ಲಿಗಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಲಾವಿದರನ್ನ ಸತ್ಕರಿಸುವ ಸಂಪ್ರದಾಯ ಪಾಲಿಸಬೇಕಿದೆ. ಈ ಮೂಲಕ ಅವರಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಬೇಕು, ಅವರ ಸೇವೆಗೆ ಪ್ರತಿಯಾಗಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅವರಲ್ಲಿ ಉತ್ಸಾಹ ತುಂಬಬೇಕು. ಅವರಿಗೆ ಸಲ್ಲಬೇಕಿರುವ ಸರ್ಕಾರಿ ಸೌಕರ್ಯಗಳನ್ನು, ಸ್ಥಳೀಯ ಆಡಳಿತ ಹಾಗೂ ಸಂಘ ಸಂಸ್ಥೆಗಳು ಕಲಾವಿದರಿಗೆ ತಲಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದರು. ವೇದಿಕೇಯಲ್ಲಿದ್ದ ಗಣ್ಯರು, ಹಿರಿಯ ನಾಗರೀಕರು ಮಾತನಾಡಿದರು.
ಅಗಸಗಟ್ಟಿ ತಿಂದಪ್ಪ,ಬಾಣದ ನರಸಿಂಹಪ್ಪ,ಸಂಗಡಿಗರಿಂದ ಸಂಗಿತ ಸುಧೆ ಜರುಗಿತು.ಕೆ,ಶಂಕರ್ ತಬಲಾ, ಸಾಸಲವಾಡದ ಚನ್ನವೀರ ಸ್ವಾಮಿ ಡೋಲಕ್ ಸಾತ್ ನೀಡಿದರು. ಭಜನೋತ್ಸವದಲ್ಲಿ ಪಟ್ಟಣ ಸೇರಿದಂತೆ ಜರ್ಮಲಿ, ಗಜಾಪುರ, ನಾಗಲಾಪುರ, , ಬಡೇಲಡುಕು, ಭತ್ತನಹಳ್ಳಿ ಗ್ರಾಮಗಳಿಂದ ಆಗಮಿಸಿದ್ದ, ವಿವಿದ ಭಜನಾ ತಂಡಗಳಿಂದ ರಾತ್ರಿ ಪೂರ್ತಿ ಜಾಗರಣೆಯೊಂದಿಗೆ ಭಜನೆ ಗಾಯನ ಜರುಗಿತು. ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಸೇವಾ ಸಮಿತಿಯ ಯುವಕರು, ನಾಗರೀಕರು, ಮಹಿಳೆಯರು, ಮಕ್ಕಳು, ಯುವಕರು ಭಾಗವಹಿಸಿದ್ದರು. ಕಲಾವಿದರಿಂದ ಗಾಯನ ಹಾಗೂ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ನೆರೆದ ಭಕ್ತರಿಗೆ ಹಾಗೂ ನಾಗರೀಕರಿಗೆ ಹಾಗೂ ಸಾರ್ವಜನಿಕರಿಗೆ, ದೇವಸ್ಥಾನ ಸೇವಾ ಸಮಿತಿಯಿಂದ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು. ಪತ್ರಕರ್ತ ಹಾಗೂ ಶ್ರೀಊರಮ್ಮ ದೇವಿ ಅರ್ಚಕರಾದ ಬಡಿಗೇರ ನಾಗರಾಜ ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಶ್ರೀಲಕ್ಷ್ಮೀನರಸಿಂಹ ದೇವಸ್ಥಾನ ಸೇವಾ ಸಮಿತಿಯ, ಎಲ್ಲಾ ಯುವಕರು ಭಜನೋತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;