ಜರ್ಮಲಿ ಬಸ್ ನಿಲ್ದಾಣ ಹುಡುಕಿಕೊಡಿ ಅಧಿಕಾರಿಗಳೇ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜರ್ಮಲಿ, ಗ್ರಾಮ ಪಂಚಾಯಿತಿ ಹೆಡ್ ಕ್ವಾಟರ್ ಆಗಿದ್ದು, ಜರ್ಮಲಿ ಗ್ರಾಮ ಪಂಚಾಯಿತಿಗೆ 5 ಹಳ್ಳಿಗಳು ಸೇರಿದ್ದು ಈ ಗ್ರಾಮಕ್ಕೆ ಬಸ್ ನಿಲ್ದಾಣ ಇರುವುದಿಲ್ಲ, ಸಾಕಷ್ಟು ಜನ ಬಂದು ಹೋಗುತ್ತಾರೆ, ಬಸ್ ನಿಲ್ದಾಣ ಇಲ್ಲದ ಕಾರಣ ಜನರು ಕೂರಲು ಜಾಗವಿಲ್ಲದೆ ಬಿಸಿಲಲ್ಲಿ ನಿಲ್ಲಲಾರದೆ ಸಾಕಷ್ಟು ಬಾರಿ ಅನೇಕ ಜನ ತಲೆಸುತ್ತು ಬಂದು ನೆಲಕ್ಕೆ ಬಿದ್ದಿರುವ ಘಟನೆ ನಡೆದಿದೆ, ಅದಲ್ಲದೆ ಸುಮಾರು ಬಾರಿ , ಪತ್ರಿಕಾ ಪ್ರಕಟಣೆಯಲ್ಲಿ , ತಿಳಿಸಲಾಗಿದೆ. ಆದರೂ ಸಹ ಯಾವ ಒಬ್ಬ ಅಧಿಕಾರಿ ಈ ಗ್ರಾಮದ ಭೇಟಿ ನೀಡಿಲ್ಲ, ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಟ್ಟಡ ಕಾರ್ಮಿಕರ ಘಟಕದ, ವಿಜಯನಗರ ಜಿಲ್ಲಾ ಕಾರ್ಯದರ್ಶಿ, ಎನ್ ತಿಪ್ಪೇಸ್ವಾಮಿ ತಿಳಿಸಿ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜರ್ಮಲಿ ಗ್ರಾಮಕ್ಕೆ ಬಸ್ ನಿಲ್ದಾಣ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು,

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
