;

ರಾಜ್ಯ ನೇಕಾರ ಸೇವಾ ಸಂಘದಿಂದ ರಬಕವಿ ಬನಹಟ್ಟಿ ಉಪ ತಹಸಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ…!!!

ರಾಜ್ಯ ನೇಕಾರ ಸೇವಾ ಸಂಘದಿಂದ ರಬಕವಿ ಬನಹಟ್ಟಿ ಉಪ ತಹಸಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ.

ರಾಜ್ಯದಲ್ಲಿ ಕನಿಷ್ಠ 5 ರಿಂದ 6 ಲಕ್ಷ ಜನ ಕೂಲಿ ಕಾರ್ಮಿಕ ವರ್ಗದ ನೇಕಾರಿಕೆಯಲ್ಲಿ ದುಡಿಯುತ್ತಿದ್ದು, ಕಟ್ಟಡ ನಿರ್ಮಾಣ ಮತ್ತಿತರ ಕಾರಣದಿಂದ ಕಾರ್ಮಿಕ ಸೌಲಭ್ಯಗಳ ಅನುಷ್ಠಾನಕ್ಕೆ ಸರಕಾರ ಬರುವ ಬಜೆಟ್‌ನಲ್ಲಿ ಕನಿಷ್ಠ 1500 ಕೋಟಿ ಆರ್ಥಿಕ ವ್ಯವಸ್ಥೆ ಮೀಸಲಿಡಬೇಕು. ಕಾರ್ಮಿಕರ ಬೇಡಿಕೆಗಳನ್ನು ಪೂರೈಸುವ ಹಕ್ಕುಗಳು. ರಾಜ್ಯದಲ್ಲಿ ಸಾಲದ ಹೊರೆಯಿಂದ 40 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಕುಟುಂಬಗಳಿಗೆ ಅಗತ್ಯ ಕನಿಷ್ಠ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ಕೈಮಗ್ಗ ಮತ್ತು ವಿದ್ಯುತ್ ಚಾಲಿತ ಮಗ್ಗದ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ನೇಕಾರರಿಗೂ ಅನ್ವಯವಾಗುವ ಕಾರ್ಮಿಕ ಸೌಲಭ್ಯಗಳು, ನೇಕಾರ ಸಮ್ಮಾನ ಯೋಜನೆ, ಉಚಿತ ವಿದ್ಯುತ್, ರಾಷ್ಟ್ರೀಕೃತ ಬ್ಯಾಂಕ್ ಒಳಗೊಂಡಂತೆ ಸಂಪೂರ್ಣ ಸಾಲ ಮನ್ನಾ ಮಾಡಿ ಕಷ್ಟದಲ್ಲಿರುವ ನೇಕಾರರು ಮತ್ತು ರೈತರನ್ನು ಉಳಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಸ್ಥಳೀಯ ಸಂಘಗಳ ಸಾಲ ಮನ್ನಾ ಮಾಡಬೇಕು ಹಾಗೂ ಈ ಮೇಲಿನ ಸೌಲಭ್ಯಗಳನ್ನು ಒದಗಿಸಿ ಯೋಜನೆ ಜಾರಿಗೊಳಿಸಿ ಕಟ್ಟ ಕಡೆಯ ನೇಕಾರರಿಗೂ ಸೌಲಭ್ಯ ತಲುಪಿಸಬೇಕು. ಹಲವು ದಿನಗಳ ಹೋರಾಟ ನಡೆಸಿ ಮಾನ್ಯ ಜವಳಿ ಸಚಿವರು, ಆಯುಕ್ತರು, ಸರಕಾರಿ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು 3651 ದಿನಗಳ ನಿರಂತರ ಹೋರಾಟದ ಮೂಲಕ 1500 ಮನವಿಗಳನ್ನು ಸಲ್ಲಿಸಲಾಗಿದೆ. ಈ ಹೋರಾಟದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ನೇಕಾರರು ಸಂಪೂರ್ಣ ಬೆಂಬಲ ಸೂಚಿಸಿ ಪರೋಕ್ಷವಾಗಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇರುವ ಸೌಲಭ್ಯಗಳು ಸಮರ್ಪಕವಾಗಿ ನೇಕಾರರಿಗೆ ತಲುಪದ ಕಾರಣ ಯೋಜನೆಗಳಲ್ಲಿ ತಾರತಮ್ಯ ಉಂಟಾಗಿದೆ ಎಂದು ತಮ್ಮ ಅಳಲನ್ನು ತೊಡಿಕೂಂಡರು. ಇಲಾಖೆ ಮತ್ತು ಸರ್ಕಾರ ಸೌಲಭ್ಯ ಸಮರ್ಥವಾಗಿ ತಲುಪುವಂತೆ ಮಾಡಬೇಕು ಎಂದು ಮನವಿ ಮಾಡಿಕೊಂಡರು ಸರಕಾರ ಈಗಾಗಲೇ ಶಿಷ್ಯವೇತನ, ನೇಕಾರ ಸಮ್ಮಾನ ಯೋಜನೆ ಜಾರಿಗೊಳಿಸಿದ್ದು, ಯೋಜನೆಯಿಂದ ಹಲವು ಮಂದಿ ಹೊರಗುಳಿದಿದ್ದಾರೆ, ಎಲ್ಲರಿಗೂ ಸೌಲಭ್ಯ ಸಿಗುವಂತೆ ವರ್ಷಕ್ಕೊಂದು ಸೇವೆ ನೀಡಬೇಕು ಎಂದು ಆಗ್ರಹಿಸದರು.

ವರದಿ. ಬಸವರಾಜ ನಂದೆಪ್ಪನವರ ರಬಕವಿ ಬನಹಟ್ಟಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;