ಇಂದು ಚಮ್ಮಾರ (ಹೊಲಯ ಮಾದಿಗ) ಸಮುದಾಯದ ಅಬ್ರಹಾಂ ಲಿಂಕನ್ ಅವರ ಹುಟ್ಟು ಹಬ್ಬದ ದಿನ ………. ಹರಪನಹಳ್ಳಿ:- “ವೈಫಲ್ಯಗಳನ್ನು ಏಣಿ ಯಾಗಿಸಿದ ಅಬ್ರಹಾಂ ಲಿಂಕನ್”ರವರ ಯಶೋಗಥೆಯ ಬಗ್ಗೆ ಒಂದು ವಿಶೇಷ ಲೇಖನ
ಇಂದು ಚುನಾವಣಾ ಸಮಯ. ರಾಜಕಾರಣಿ ಗಳೆಲ್ಲಗೆಲುವಿಗಾಗಿ ಪ್ರಯತ್ನಿಸುತ್ತಿದ್ದಾರೆ. ಅಮೇರಿಕಾದ ಅಧ್ಯಕ್ಷರಾಗಿದ್ದ ಚಮ್ಮಾರ ಅಬ್ರಹಾಂ ಲಿಂಕನ್” ಸಹ ಇದೇ ರೀತಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಜೀವನದಲ್ಲಿ ಹತ್ತು ಹಲವು ಸೋಲುಗಳು ಎದುರಾಗಿದ್ದವು.
ಅವರು ತನ್ನ 21ನೇ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದರು. ದೊಡ್ಡ ಪ್ರಮಾಣದ ನಷ್ಟವಾಗಿ ಕೈ ಸುಟ್ಟು ಕೊಂಡರು. 22ನೇ ವಯಸ್ಸಿನಲ್ಲಿ ಶಾಸನಸಭೆಗೆ ಸ್ಪರ್ಧಿಸಿದರು. ಅಲ್ಲೂ ಸೋಲು ಇವರ ಪಾಲಾಯಿತು.
ರಾಜಕೀಯ ಬೇಡವೆಂದು 24ನೇ ವಯಸ್ಸಿನಲ್ಲಿ ಮತ್ತೆ ವ್ಯಾಪಾರಕ್ಕೆ ಕೈ ಹಾಕಿದರು. ಅಲ್ಲೂ ಮತ್ತೆ ನಷ್ಟ ಅನುಭವಿಸಿದರು.ವ್ಯಾಪಾರ, ರಾಜಕೀಯದ ಸೋಲಿನಿಂದ ಕಂಗೆಟ್ಟ ಚಮ್ಮಾರ ಲಿಂಕನ್ ಗೆ 26ನೇ ವಯಸ್ಸಿನಲ್ಲಿ ಮತ್ತೊಂದು ಆಘಾತ ಎದುರಾಯಿತು. ಆ ಸಮಯದಲ್ಲಿ ತನ್ನ ಪ್ರೇಯಸಿಯ ಸಾವಿನಿಂದ ಕಂಗೆಟ್ಟರು. 27ನೇ ವಯಸ್ಸಿನಲ್ಲಿ ಚಮ್ಮಾರ ಲಿಂಕನ್ ಗೆ ನರವ್ಯಾಧಿ ಯೊಂದು ಅಡರಿಕೊಂಡಿತು. ಹೀಗಾಗಿ ಆರೋಗ್ಯ ತೊಂದರೆಯೂ ಇವರ ಜೊತೆಯಾಯಿತು. ಕಂಗೆಡಲಿಲ್ಲ ಚಮ್ಮಾರ ಲಿಂಕನ್. 34ನೇ ವಯಸ್ಸಿನಲ್ಲಿ ಮತ್ತೆ ಚುನಾವಣೆಗೆ ನಿಂತರು. ಆಗಲೂ ಸೋತು ಹೋದರು. 47ನೇ ವಯಸ್ಸಿನಲ್ಲಿ ಉಪಾಧ್ಯಕ್ಷ ಚುನಾವಣೆಗೆ ನಿಂತಾಗಲೂ ಸೋಲು ಎದುರಾಯಿತು.
49ನೇ ವಯಸ್ಸಿನಲ್ಲಿ ಸೆನೆಟ್ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದರು.ನಮ್ಮ ಭಾರತ ದೇಶದಲ್ಲಾಗಿದ್ದರೆ “ಇದು ಮನುವಾದಿಗಳ ಕುತಂತ್ರ. ಮನುವಾದಿಗಳು ತಮ್ಮ ಕುತಂತ್ರದಿಂದ ನನ್ನನ್ನು ಚುನಾವಣೆಯಲ್ಲಿ ಸೋಲಿಸುತ್ತಿದ್ದಾರೆ, ಗೆಲ್ಲಲು ಬಿಡುತ್ತಿಲ್ಲ” ಎನ್ನುತ್ತಾ ಮನುವಾದಿಗಳ ಮೇಲೆ ಗೂಬೆ ಕೂರಿಸಿ ಇನ್ನು ಚುನಾವಣೆಯ ಸಹವಾಸವೇ ಬೇಡವೆಂದು ದೂರ ಸರಿದುಬಿಡು ತ್ತಿದ್ದರು. ಏಕೆಂದರೆ ಗೂಬೆ ಕೂರಿಸಿಕೊಳ್ಳಲು ಮನುವಾದಿಗಳಂತೂ ಇದ್ದೇ ಇದ್ದರು. ಆದರೆ ಅಬ್ರಹಾಂ ಲಿಂಕನ್ ರವರು ತಮ್ಮ ಪ್ರಯತ್ನ ಬಿಡಲಿಲ್ಲ. ಇವೆಲ್ಲಕ್ಕಿಂತ ಇನ್ನೂ ಉನ್ನತ ಹುದ್ದೆ ನನಗಾಗಿ ಕಾಯುತ್ತಿದೆ ಎಂದು ಕೊಂಡರು. ತನ್ನ 52 ನೇ ವಯಸ್ಸಿನಲ್ಲಿ ಅಮೇರಿಕಾದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದರು. ಈ ಹಿಂದಿನಂತೆ ಅಲ್ಲಿಸೋಲಾಗಲಿಲ್ಲ ಚಮ್ಮಾರ ಅಬ್ರಹಾಂ ಲಿಂಕನ್ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು.
ಯಶಸ್ಸಿನ ಪ್ರತಿಯೊಂದು ಕಥೆಯೂ ಸೋಲಿನ ಕಥೆಯೂ ಆಗಿರಬಹುದು. ಅದೇ ರೀತಿ, ಸೋಲಿನ ಪ್ರತಿಯೊಂದು ಕಥೆಯೂ ದೊಡ್ಡ ಪ್ರಮಾಣದ ಯಶಸ್ಸಿಗೆ ಮೆಟ್ಟಿಲಾಗ ಬಹುದು. ನೀವು ಸೋಲಿನ ಪ್ರಮಾಣವನ್ನು ದ್ವಿಗುಣಗೊಳಿಸಿದಷ್ಟು ಯಶಸ್ಸಿಗೆ ಹತ್ತಿರವಾಗುತ್ತೀರಿ. ಹಾಗಂತ ಪ್ರಯತ್ನ ಪಡದೆ ಸೋಲಿನತ್ತ ಸಾಗಬೇಡಿ. ಅದಕ್ಕೆ ಬೇಕಾದ ಅವಿರತ ಪ್ರಯತ್ನ ನಿಮ್ಮಲ್ಲಿ ಇರಲಿ.ಸೋಲಿಗೆ ಅಬ್ರಹಾಂ ಲಿಂಕನ್ ವಿಚಲಿತರಾಗಲಿಲ್ಲ. ಇದರಿಂದ ಮಹತ್ತರ ಯಶಸ್ಸು ಇವರ ಪಾಲಾಯಿತು. ಈಗಲೂ ಚಮ್ಮಾರ ಅಬ್ರಹಾಂ ಲಿಂಕನ್ ಜಗತ್ತಿನ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವೂ ಯಾವುದೇ ಸೋಲಿಗೆ ಅಂಜದೆ ಯಶಸ್ಸಿನತ್ತ ಸಾಗಬೇಕು.ಹರಪನಹಳ್ಳಿ ತಾಲೂಕಿನ ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕರು ಪ್ರತಾಪ್ ಛಲವಾದಿ..

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
