;

ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಟಿ ರಾಧಾ ಸಣ್ಣ ಮಲಿಯಪ್ಪ ಆಯ್ಕೆ…!!!

ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಟಿ ರಾಧಾ ಸಣ್ಣ ಮಲಿಯಪ್ಪ ಆಯ್ಕೆ

ಕೂಡ್ಲಿಗಿ : ತಾಲೂಕಿನ ಹಿರೇಕುಂಬಳಗುಂಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಈ ಹಿಂದೆ ಮಾರಪ್ಪ ರವರು ಸೇವೆ ಸಲ್ಲಿಸುತ್ತಿದ್ದು, ವೈಯಕ್ತಿಕವಾಗಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಧ್ಯಕ್ಷರ ಸ್ಥಾನಕ್ಕೆ, ಶ್ರೀಮತಿ , ಟಿ ರಾಧಾ ಸಣ್ಣ ಮಲಿಯಪ್ಪ , ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು, ಚುನಾವಣಾ ಅಧಿಕಾರಿ ತಹಸಿಲ್ದಾರ್ , ಟಿ ಜಗದೀಶ್ , ತಿಳಿಸಿದರು

ನಂತರ ಸದಸ್ಯರಾದ ಹುಲಿಕೆರೆ ದುರ್ಗೇಶ್ ಮಾತನಾಡಿ, ನಮ್ಮ ಗ್ರಾಮಗೆ ಸೇರಿರುವ ಎಲ್ಲಾ ಹಳ್ಳಿಗಳ ಸದಸ್ಯರುಗಳೆಲ್ಲ, ಸೇರಿ ಅವಿರೋಧವಾಗಿ, ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ, ಇಂದಿನಿಂದ ಎಲ್ಲಾ ಹಳ್ಳಿಯ ಜನರ ಸಮಸ್ಯೆ ಹಾಗೂ, ಮುಖ್ಯವಾಗಿ ನೀರಿನ ಸಮಸ್ಯೆ ಇನ್ನು ಅನೇಕ ಕೆಲಸದೊಂದಿಗೆ ಉನ್ನತವಾದ ಸೇವೆ ಸಲ್ಲಿಸಿ, ನಮ್ಮ ಗ್ರಾಮ ಪಂಚಾಯಿತಿಗೆ, ಹೆಸರು ತರುವ ಕೆಲಸವನ್ನು ಮಾಡಬೇಕೆಂದು ನೂತನ ಅಧ್ಯಕ್ಷರಿಗೆ ತಿಳಿಸಿದರು,

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ತಹಸಿಲ್ದಾರ್ , ಟಿ ಜಗದೀಶ್, ಅಭಿವೃದ್ಧಿ ಅಧಿಕಾರಿ, ನಿಂಗಪ್ಪ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾರಪ್ಪ , ಉಪಾಧ್ಯಕ್ಷರಾದ , ಶ್ರೀಮತಿ ಮಂಜಮ್ಮ ಬಸವರಾಜ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ, ಕಾಶೀ ವಿಶ್ವನಾಥ ಗೌಡ, ಸಿದ್ದೇಶ್, ವೆಂಕಟೇಶ್, ಚಲವಾದಿ ಬಸವರಾಜಪ್ಪ, ಎಚ್ ದುರ್ಗೇಶ್, ಗಿರೀಶ್, ರಮೇಶ್, ಮೂಗಣ್ಣ, ರೇವಣಸಿದ್ದಪ್ಪ, ರಾಮಣ್ಣ,ಶ್ರೀಮತಿ ರಾಯಮ್ಮ ಚಿತ್ರಯ್ಯ ಶ್ರೀಮತಿ ಚಂದ್ರಮ್ಮ.ತಿಪ್ಪೆಸ್ವಾಮಿ ಸೈಲಜ. ಶ್ರಿಮತಿ ಎಚ್ ಪಿ ಗಂಗಮ್ಮ, ಕರಿಬಸಪ್ಪ, ಶ್ರಿಮತಿ ಬಸಮ್ಮ ಕೆ ಬಿ ರಮೇಶ್, ಶ್ರೀಮತಿ ಮಹಂತಮ್ಮ ಮಲಿಯಪ್ಪ,ಶ್ರಿಮತಿ ದುರುಗಮ್ಮ ,ಶ್ಶಿವಮ್ಮ, ಬಾಲಮ್ಮ, ಇನ್ನು ಅನೇಕ ಗ್ರಾಮದ ಮುಖಂಡರುಗಳು ಪಂಚಾಯತಿಯ ಸಿಬ್ಬಂದಿಗಳು ಲೈಬ್ರರಿ ಮುಖ್ಯಸ್ಥರು, ಹಾಗು ಹೊಸಹಳ್ಳಿ ಪೊಲೀಸ್ ಸಿಬ್ಬಂದಿಗಳು ಹಾಜಾರ ಇದ್ದರು..

ವರದಿ. :. ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;