ಜುಮ್ಮೋಬನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ
ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ. ಮಹಾತ್ಮ ಗಾಂಧೀಜಿ ಇರವರ ಪುಣ್ಯ ಸ್ಮರಣೆಯನ್ನು ಪೂಜೆ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು.
ನಂತರ ಅಭಿವೃದ್ಧಿ ಅಧಿಕಾರಿ ಮಹಾಂತೇಶಯ್ಯ ರವರು ಮಾತನಾಡಿ ತನ್ನ ಜೀವವನ್ನೇ ಪಣವಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮ ಭಾರತ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾನ್ ವ್ಯಕ್ತಿಯನ್ನು. ನಾವುಗಳು ಎಂದೂ ಮರೆಯಲಾಗದು ಅವರ ಫೋಟೋವನ್ನು ನಮ್ಮ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿದರು ಅವರ ಋಣ ತೀರಿಸಲಾಗದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಗಪ್ಪ. ಉಪಾಧ್ಯಕ್ಷರಾದ. ಶ್ರೀಮತಿ ತಿಪ್ಪಮ್ಮ ಗೊಂಚಿಗ್ಯಾರ್ ನಾಗರಾಜ್ ಗ್ರಾಮ ಪಂಚಾಯಿತಿ ಎಲ್ಲಾ ಸರ್ವ ಸದಸ್ಯರುಗಳು. ಮಾಜಿ ಅಧ್ಯಕ್ಷರುಗಳು ಮಾಜಿ ಸದಸ್ಯರುಗಳು. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪುಣ್ಯ ಸ್ಮರಣೆಯಲ್ಲಿ ಇದ್ದರು.

ವರದಿ: ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
