ಸಾಮೂಹಿಕ ವಿವಾಹ ಬಡವರ ಸಂಜೀವಿನಿ…
ಇಳಕಲ್:- ದೇಶದ ಶೋಷಿತರು ಬೌದ್ಧ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಪರಿವರ್ತನೆಯಲ್ಲಿ ಬದಲಾಗುತ್ತಿರುವುದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕನಸು ನನಸಾಗಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ.
ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇವಾಸಮಿತಿ (ರಿ) ವತಿಯಿಂದ 6ನೇ ವರ್ಷದ ಬೌದ್ದ ಧರ್ಮದ ಪ್ರಕಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ.ಹೆಚ್.ಎಸ್.ಅನುಪಮಾ ವಿಶೇಷ ಉಪನ್ಯಾಸ ದೇಶದಲ್ಲಿ ದಲಿತರನ್ನು ಮೇಲ್ವರ್ಗದವರು ಸಮಾನವಾಗಿ ಕಾಣದೇ ಇರುವುದು ಶೋಚನೀಯ. ಡಾ.ಅಂಬೇಡ್ಕರ್ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರ ತತ್ವಗಳ ಅಡಿಯಲ್ಲಿ ಇಂದಿನ ಯುವಕರು ಬೌದ್ಧ ಧರ್ಮದ ಪ್ರಕಾರ ಸಾಮೂಹಿಕ ವಿವಾಹ ಹಮ್ಮಿಕೊಂಡು ಸಾಮಾಜಿಕ ಕ್ರಾಂತಿ ಮಾಡಿರುವುದು ಹೆಮ್ಮೆಯ ವಿಷಯ ಎಂದರು.
ಬೌದ್ದ ಧರ್ಮದ ತಾಲ್ಲೂಕ ಮುಖಂಡರು ಅದಾ ಸಿದ್ದಣ್ಣ ಅಮದಿಹಾಳ್ ಅವರು ಮಾತನಾಡಿ, ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಿ ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಬುದ್ಧ ಧರ್ಮದ ಪ್ರಕಾರ ಉಚಿತ ಸಾಮೂಹಿಕ ವಿವಾಹ ಮಾಡುತ್ತಿರುವುದು ಸಾಮಾಜಿಕ ಕಳಕಳಿಯ ಜತೆಗೆ ಬಡವರ ಪರವಾದ ಕಾರ್ಯ. ಇಂತಹ ಸಾಮೂಹಿಕ ವಿವಾಹಗಳ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು
ಬೌದ್ಧ ಧರ್ಮದ ಪ್ರಕಾರ ಬುದ್ಧ ಬಂತೇಜಿಗಳ ನೇತೃತ್ವದಲ್ಲಿ ಬೌದ್ಧ ಉಪಾಸಕ-ಉಪಾಸಕಿಯರಿಗೆ ವಿವಾಹ ಮಾಡಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು.
ಈ ಸಂದರಭದಲ್ಲಿ ಡಾ.ಹೆಚ್.ಎಸ್.ಅನುಪಮಾ.
ಶ್ರೀ ಮತಿ ಶೋಭಾ ಅಮದಿಹಾಳ್ ಮಾಜಿ ನಗರಸಭೆ ಅದ್ಯಕ್ಷರು, ಸಾವಿತ್ರಿ ಅಮದಿಹಾಳ್ ಕೋಟೆಗಾರ್, ಗಿರೀಶ್ ಅಚ್ಚಾನೂರು, ಮಹದೇವ್ ಕಂಬಗಿ,ರಾಜು ದೊಡ್ಡನಗೌಡ, ನಗರಸಭೆಯ ಅಧ್ಯಕ್ಷರು ಮತ್ತು ಉಪಅದ್ಯಕ್ಷರಾದ ಚಂದ್ರು, ಮಂಜುನಾಥ್ ಮೂಲಿಮನಿ, ಸಿದ್ದಾರ್ಥ್ಛ ಛಲವಾದಿ,ಸ್ಥಳಿಯ ಮುಖಂಡರುಗಳು. ಮಂಜುನಾಥ್ ಕೋಟೆಗಾರ್, ರಾಹುಲ್ ಅಮದಿಹಾಳ್. ಅಶೋಕ್ ಛಲವಾದಿ ಗಣೇಶ್ ಮುದುಗಲ್, ನವ ಯುವಕರ ಪಡೆ..

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
