;

ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗೆ ಚಾಲನೆ…!!!

ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗೆ ಚಾಲನೆ

ಕಾನ ಹೊಸಹಳ್ಳಿ: ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಿ ಬೋರಯ್ಯನ ಹಟ್ಟಿಯಲ್ಲಿ ಶ್ರೀ ಓಬಳೇಶ್ವರ ಗುಗ್ಗುರಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶಿಲ್ಪ ಬಸಪ್ಪ ಉದ್ಘಾಟಿಸಿ ನಂತರ ಮಾತನಾಡಿದರು ಸಮಾಜದಲ್ಲಿನ ತಿರುಳನ್ನು ಅರಿತುಕೊಳ್ಳಲು ನಮ್ಮಗೆ ಶಿಕ್ಷಣ ಎಷ್ಟು ಮುಖ್ಯವಾಗಿದೆಯೋ ಅದರಂತೆ ರೋಗಮುಕ್ತ ಜೀವನ ಸಾಗಿಸಲು ಕ್ರೀಡೆ ಅಷ್ಟೆ ಮುಕ್ತವಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ಹಾಗೂ ಬಿಜೆಪಿ ಮುಖಂಡರಾದ ವೈ ಶರಣಪ್ಪ ಮತ್ತು ಗ್ರಾಮ ಪಂಚಾಯತಿಯ ಸದಸ್ಯರುಗಳಾದ ಗೊಂಚಿಗಾರ್ ನಾಗರಾಜ. ಬಸವರಾಜ, ವೆಂಕಟೇಶ್ ಬಜರಂಗದಳ ಅಧ್ಯಕ್ಷ ಹೆಚ್. ಅಂಜಿನಿ ಸೇರಿದಂತೆ ಕ್ರೀಡಾ ಅಭಿಮಾನಿಗಳು, ಸಾರ್ವಜನಿಕರು ಇದ್ದರು.

ವರದಿ : ಸಿ ಅರುಣ್ ಕುಮಾರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;