;

ಬಣವಿಕಲ್ಲು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು…!!!

ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆದು ಜನವರಿ 26 ರಂದು ಗಣರಾಜ್ಯೋತ್ಸವ ಆಚರಣೆಯನ್ನು ನಾವುಗಳು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ !!!!!! ‌ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ಮೊದಲು ದೇಶಕ್ಕೆ ಅನ್ನ ನೀಡುವ ರೈತ ಗೀತೆ ಹಾಡಿದರು. ನಂತರ ಪೆರೇಡ್ ನಡೆಸಿ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತಹ ಮಹಾತ್ಮ ಗಾಂಧೀಜಿ,ಸುಭಾಷ್ ಚಂದ್ರ ಬೋಸ್, ಜವಾಹರ್ ಲಾಲ್ ನೆಹರು,ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಬಾಯ್ ಪಟೇಲ್ ಇನ್ನು ಅನೇಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಘೋಷಣೆ ಮಾಡುವ ಮೂಲಕ ಗೌರವಿಸಿದರು. ನಂತರ ಸ್ವಾಗತ ಭಾಷಣವನ್ನು ಸಹ ಶಿಕ್ಷಕಿ ಓ. ಬಸಮ್ಮ ಅವರು 74 ನೇ ಗಣರಾಜ್ಯೋತ್ಸವದ ಅಂಗವಾಗಿ ಆಗಮಿಸಿದ ಮುಖ್ಯ ಅತಿಥಿಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಸ್ವಾಗತಿಸಿದರು. ‌‌74 ನೇ ಗಣರಾಜ್ಯೋತ್ಸವ‌ದ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಂ.ಬಸವರಾಜ ಅವರು ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳು ಹಾಗೂ ಶಿಕ್ಷಣ ಪ್ರೇಮಿಗಳು ಆದ ಬಿ.ಎಂ.ಪ್ರಭುದೇವ ‌ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ ಪಡೆದು ಜನವರಿ 26ರಂದು ಗಣರಾಜ್ಯೋತ್ಸವದ ಆಚರಣೆಯನ್ನು ನಾವುಗಳು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ. ಹಾಗಾಗಿ ಇಡೀ ವಿಶ್ವದಲ್ಲೇ ಭಾರತವು ವಿಶ್ವದ ಮೊದಲ ಸ್ಥಾನ ಪಡೆದಿದೆ ಅದಕ್ಕಾಗಿ ಸಂವಿಧಾನವನ್ನು ಗೌರವಿಸಬೇಕು ಎಂದು ತಿಳಿಸಿದರು. ಮುಖ್ಯ ಶಿಕ್ಷಕ ಪಿ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಕ ಜಿ ಕರಿಬಸವನಗೌಡ, ಸಹ ಶಿಕ್ಷಕಿಯರಾದ ಓ. ಬಸಮ್ಮ, ಪವಿತ್ರ, ಅತಿಥಿ ಶಿಕ್ಷಕರಾದ ಕಾವ್ಯ, ಅಕ್ಷತಾ, ಡಿ ಅಸ್ಲಾಂ, ಓಬಳೇಶ್, ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಅಕ್ಕಮ್ಮ ಮಲ್ಲಿಕಾರ್ಜುನ್, ಸದಸ್ಯರಾದ ಎಂ ಶಿವಮ್ಮ,ಬಿ.ಎಂ.ಕವಿತಾ,ಜಿ. ಸಂತೋಷ್ ಕುಮಾರ್, ಜಿ. ಚನ್ನಬಸಪ್ಪ, ಪಿ .ಬಸವರಾಜ್, ಡಿ ಮಂಜುನಾಥ್, ಅರುಧಿ ಸಿದ್ದೇಶ್, ಮೂರ್ತಿ, ಬಿ. ಬಸವರಾಜ್, ಈ. ಓ ಚನ್ನಬಸಮ್ಮ, ಎಸ್ .ಬಸಮ್ಮ, ಟಿ. ಮಾಲಮ್ಮ, ಮೈಮೂನ, ಇಮಾಮ್ ಸಾಬ್ ಡಿ, ಸಾಕಮ್ಮ, ಸಂಪೂರ್ಣಮ್ಮ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;