ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ.
ವಿಜಯ ನಗರ ಜಿಲ್ಲೆ,ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮಪಂಚಾಯತಿ ಕಛೇರಿಯಲ್ಲಿದಿನಾಂಕ 26/1/2023 ರಂದು 74ನೇ ಗಣ ರಾಜ್ಯೋತ್ಸವದ ಧ್ವಜಾರೋಹಣವನ್ನು ಗ್ರಾ ಪಂ ಅಧ್ಯಕ್ಷರಾದ ಚಲವಾದಿ ಪುಷ್ಪಾವತಿಮಹಾಬಲೇಶ್ವರ ರವರು ನೆರವೇರಿಸಿದರು. ನಂತರ ಗ್ರಾಮೀಣ ಕ್ರೀಡಾ ಕೂಟ ದಲ್ಲಿ ಭಾಗವಹಿಸಿ ವಿಜೇತರಾದ ಯುವಕ -ಯುವತಿಯರಿಗೆ ಟ್ರೋಫಿ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

ಉಪಾಧ್ಯಕ್ಷರು /ಸರ್ವ ಸದಸ್ಯರುಗಳು ಗ್ರಾ ಪಂ ಕಾರ್ಯದರ್ಶಿ ಕೊಟ್ರೇಶ್ ಜೆ ರವರು ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರು ಸಿಬ್ಬಂದಿಗಳು, ಕ್ರೀಡಾ ಪಟುಗಳು, ಇಟ್ಟಿಗಿ ಆರಕ್ಷಕ ಠಾಣಾಧಿಕಾರಿಗಳು,ಎಸ್ ಎಂ ಪಿ ಯು ಕಾಲೇಜ್ ವಿದ್ಯಾರ್ಥಿಗಳು &ಉಪನ್ಯಾಸಕರುಗಳು ಹಾಗೂ ಸಾರ್ವಜನಿಕರು ಹಾಜರಿದ್ದು ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಿದರು .ಗಣ ರಾಜ್ಯೋತ್ಸವ ಧ್ವಜಾವಂದನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು. ಇದೇ ಸಂಧರ್ಭದಲ್ಲಿ ಯುವಜನ ಕ್ರೀಡಾ ಕೂಟ ದಲ್ಲಿ ಗೆದ್ದಂತಹ ವಿಜಯ ತಂಡಗಳಿಗೆ ಟ್ರೋಫಿ ಯನ್ನು ಪ್ರಶಿಸ್ತಿ ಪ್ರಧಾನವನ್ನುಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಚಲವಾದಿ ಪುಷ್ಪಾವತಿ ಮಹಾಬಲೇಶ್ವರವರು ನೀಡಿ ಯುವಕರು ತುಂಬಾ ಸ್ಫೂರ್ತಿ ದಾಯಕವಾಗಿಕೆಂದು ಶುಭಾರೈಸಿದರು ನಂತರ ನರೇಗಾದ ಜಲಸಂಜಿನಿ & ದೂರ ದೃಷ್ಟಿ ಯೋಜನೆ ಬಗ್ಗೆ ಸಾಮಾಜಿಕ ನಕ್ಷೆ ಹಾಕಿ ಗ್ರಾಮದ ಮಾಹಿತಿಯನ್ನು ಗ್ರಾ ಪಂ ಕ್ಲ ಕಂ ಡಿ ಇ ಒ ರಾದ ಪ್ರಕಾಶ ರವರು ತಾಂತ್ರಿಕ ಸಹಾಯಕರಾದ ಜ್ಯೋತಿ ರವರು ಮಾತನಾಡಿ ದೂರದೃಷ್ಟಿ ಯೋಜನೆ ಮತ್ತು ಬೂದು ನಿರ್ವಹಣೆ ಗಾಗಿ ತೆಗಿದು ಕೊಳ್ಳುವ ಕಾಮಗಾರಿಗಳನ್ನು ಗ್ರಾಮದಲ್ಲಿ ಅಡ್ಡ ನೆಡಿಗೆ ಮಾಡಿ ಗುರುತಿಸಿ 3 ವರ್ಷದ ಜಲ ಸಂಜೀಬಿನಿ 5 ವರ್ಷದ ಕ್ರಿಯಾಯೋಜನೆ ಯನ್ನು ತಯಾರಿಸಬೇಕೆಂದು ಹೇಳಿದರು ನರೇಗದ ಕಾಯಕ ಮಿತ್ರರು, ಬಿ ಎಫ್ಟಿ, ಗ್ರಾ ಪಂ ಅಧ್ಯಕ್ಷರು ಸರ್ವಸದಸ್ಯರುಗಳು ಹಾಜರಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
